ನೋಟ್‌ ಬ್ಯಾನ್‌ ಆಗಿ ಐದು ವರ್ಷ: ಜನರಲ್ಲಿ ಇರುವ ನಗದು ಪ್ರಮಾಣ ಸಾರ್ವಕಾಲಿಕ ಹೆಚ್ಚಳ

ನೋಟು ಅಮಾನೀಕರಣ ನಡೆದು ಐದು ವರ್ಷಗಳು ಕಳೆದಿದೆ. ಆದರೆ ಈಗಲೂ ಕೂಡಾ ಸಾರ್ವಜನಿಕರಲ್ಲಿ ಅಂದರೆ ಜನರಲ್ಲಿ ಇರುವ ನಗದು ಪ್ರಮಾಣ (Cash with public) ಏರಿಕೆ ಆಗುತ್ತಲೇ ಇದೆ. 2016 ರ ನವೆಂಬರ್‌ 8 ರಂದು ದೇಶದಲ್ಲಿ ನೋಟು ಅಮಾನೀಕರಣವಾದ ಬಳಿಕ ಏರಿಕೆ ಆಗುತ್ತಿರುವ ಜನರಲ್ಲಿ ಇರುವ ನಗದು ಪ್ರಮಾಣ ಈಗ ಸಾರ್ವಕಾಲಿಕ ಹೆಚ್ಚಳವಾಗಿದೆ.

ಅಕ್ಟೋಬರ್ 8, 2021 ರಂದು ಕೊನೆಗೊಳ್ಳುವ ಹದಿನೈದು ದಿನಗಳ ಅವಧಿಯಲ್ಲಿ ಜನರಲ್ಲಿ ಇರುವ ನಗದು ಪ್ರಮಾಣವು ದಾಖಲೆಯ ಗರಿಷ್ಠ ಏರಿಕೆಯನ್ನು ಕಂಡಿದೆ. ನಗದು ಪಾವತಿಯ ಆದ್ಯತೆಯ ವಿಧಾನವಾಗಿ ಉಳಿದಿರುವ ಕಾರಣ ಈ ಏರಿಕೆ ಕಂಡು ಬಂದಿದೆ ಎಂದು ವರದಿ ಉಲ್ಲೇಖ ಮಾಡಿದೆ. ಜನರಲ್ಲಿ ಇರುವ ನಗದು ಪ್ರಮಾಣವು 28.30 ಲಕ್ಷ ಕೋಟಿ ರೂಪಾಯಿಗೆ ಏರಿಕೆ ಕಂಡಿದೆ. ಅಂದರೆ ಸುಮಾರು ಶೇಕಡ 57.48 ರಷ್ಟು ಅಥವಾ 10.33 ಲಕ್ಷ ಕೋಟಿ ರೂಪಾಯಿ ಏರಿಕೆಯನ್ನು ಕಂಡಿದೆ.

ನವೆಂಬರ್‌ 4, 2016 ರಂದು ಜನರಲ್ಲಿ ಇರುವ ನಗದು ಪ್ರಮಾಣವು 17.97 ಲಕ್ಷ ಕೋಟಿ ಆಗಿತ್ತು. ನವೆಂಬರ್ 25, 2016 ರಂದು ಜನರಲ್ಲಿ ಇರುವ ನಗದು ಪ್ರಮಾಣವು 9.11 ಲಕ್ಷ ಕೋಟಿಯಿಂದ ಶೇಕಡ 211 ರಷ್ಟು ಏರಿಕೆಯಾಗಿದೆ.

 ಎಷ್ಟು ಪ್ರಮಾಣದಲ್ಲಿ ಏರಿಕೆ?

ಎಷ್ಟು ಪ್ರಮಾಣದಲ್ಲಿ ಏರಿಕೆ?

ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾದ (ಆರ್‌ಬಿಐ) ಡೇಟಾದ ಪ್ರಕಾರವಾಗಿ ಈ ದೀಪಾವಳಿಗೂ ಮುನ್ನ ಅಕ್ಟೋಬರ್ 23, 2020 ಕ್ಕೆ ಕೊನೆಗೊಂಡ ಹದಿನೈದು ದಿನಗಳ ಅವಧಿಯಲ್ಲಿ ಜನರಲ್ಲಿ ಇರುವ ನಗದು ಪ್ರಮಾಣವು 15,582 ಕೋಟಿ ರೂ ಆಗಿತ್ತು. ಇದು ಶೇಕಡ 8.5 ರಷ್ಟು ಅಥವಾ 2.21 ಲಕ್ಷ ಕೋಟಿ ರೂಪಾಯಿ ಏರಿಕೆ ಕಂಡು ಬಂದಿದೆ. ನವೆಂಬರ್‌ 2016 ರಲ್ಲಿ 500 ರೂಪಾಯಿ ಹಾಗೂ 1,000 ರೂಪಾಯಿ ನೋಟುಗಳನ್ನು ಭಾರತದಲ್ಲಿ ಬ್ಯಾನ್‌ ಮಾಡಿದ ಬಳಿಕ, ದೇಶದಲ್ಲಿ 17.97 ಕ್ಷ ಕೋಟಿ ಆಗಿದ್ದ ಜನರಲ್ಲಿ ಇರುವ ನಗದು ಪ್ರಮಾಣವು 2017 ರ ಜನವರಿ ತಿಂಗಳು ಆಗುತ್ತಿದ್ದಂತೆ 7.8 ಲಕ್ಷ ಕೋಟಿಗೆ ಇಳಿಕೆ ಕಂಡು ಬಂದಿದೆ. ಆ ಬಳಿಕ ಕೇಂದ್ರ ಸರ್ಕಾರ ಹಾಗೂ ಆ‌ರ್‌ಬಿಐ ನಗದು ರಹಿತ ವ್ಯವಹಾರಕ್ಕೆ ಆದ್ಯತೆ ನೀಡಿದ್ದರೂ ಕೂಡಾ ಜನರ ಬಳಿ ಇರುವ ನಗದು ಪ್ರಮಾಣವು ಏರಿಕೆ ಕಾಣುತ್ತಲೇ ಇದೆ. 2020 ಆಗುತ್ತಿದ್ದಂತೆ ಜನರಲ್ಲಿ ಇರುವ ನಗದು ಪ್ರಮಾಣವು ಭಾರೀ ಏರಿಕೆಯನ್ನು ಕಂಡಿದೆ. ಇನ್ನು ಕೊರೊನಾ ವೈರಸ್‌ ಸೋಂಕು ಸಂದರ್ಭದಲ್ಲಿ ದೇಶದಲ್ಲಿ ಲಾಕ್‌ಡೌನ್‌ ಮಾಡಲಾದ ಹಿನ್ನೆಲೆಯಲ್ಲಿ ಜನರು ಬ್ಯಾಂಕಿನಲ್ಲಿ ಇರುವ ಹಣವನ್ನು ವಿತ್‌ ಡ್ರಾ ಮಾಡಿದ್ದು, ಈ ಸಂದರ್ಭದಲ್ಲಿ ದೇಶದಲ್ಲಿ ಜನರ ಬಳಿ ಇರುವ ನಗದು ಪ್ರಮಾಣವು ಏರಿಕೆ ಆಗಿದೆ.

 ಏನಿದು ಜನರಲ್ಲಿರುವ ನಗದು ಪ್ರಮಾಣ?

ಏನಿದು ಜನರಲ್ಲಿರುವ ನಗದು ಪ್ರಮಾಣ?

ಆರ್‌ಬಿಐ ಪ್ರಕಾರ, ಚಲಾವಣೆಯಲ್ಲಿರುವ ಒಟ್ಟು ಕರೆನ್ಸಿ (ಸಿಐಸಿ) ಯಿಂದ ಬ್ಯಾಂಕ್‌ಗಳಲ್ಲಿ ಹಣವನ್ನು ಕಡಿತಗೊಳಿಸಿದ ನಂತರ ಉಳಿಯುವ ಹಣವನ್ನು ಜನರಲ್ಲಿ ಇರುವ ನಗದು ಪ್ರಮಾಣ ಎಂದು ಪರಿಗಣಿಸಲಾಗುತ್ತದೆ. ಗ್ರಾಹಕರು ಮತ್ತು ವ್ಯವಹಾರಗಳ ನಡುವೆ ವಹಿವಾಟು ನಡೆಸಲು ಜನರು ಭೌತಿಕವಾಗಿ ಬಳಸುವ ನಗದನ್ನು ಮಾತ್ರ ಸಿಐಸಿ ಸೂಚಿಸುತ್ತದೆ. ನವೆಂಬರ್ 2016 ರಲ್ಲಿ ದೇಶದಲ್ಲಿ ಹಠಾತ್‌ ಆಗಿ 500 ರೂಪಾಯಿ ಹಾಗೂ 1,000 ರೂಪಾಯಿ ನೋಟುಗಳನ್ನು ಹಿಂಪಡೆಯಲು ಆರಂಭ ಮಾಡಿದ ಬಳಿಕ ಆರ್ಥಿಕತೆಯು ಒಮ್ಮೆಲ್ಲೆ ಕುಸಿತ ಕಂಡಿತು. ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆಯು ಸುಮಾರು ಶೇಕಡಾ 1.5 ರಷ್ಟು ಕುಸಿಯಿತು. ಹಲವಾರು ಸಣ್ಣ ಘಟಕಗಳು ಮುಚ್ಚಲ್ಪಟ್ಟವು. ಇದರಿಂದಾಗಿ ಹಣದ ಅಭಾವ ಕಾಣಿಸಿಕೊಂಡಿತು.

 ಡಿಜಿಲಟ್‌ ಪಾವತಿ ಹಾಗೂ ಸಿಐಸಿ ನಡುವಿನ ಸಂಬಂಧ

ಡಿಜಿಲಟ್‌ ಪಾವತಿ ಹಾಗೂ ಸಿಐಸಿ ನಡುವಿನ ಸಂಬಂಧ

ಸಿಐಸಿ ಹಾಗೂ ಡಿಜಿಟಲ್ ಪಾವತಿ ನಡುವೆ ಕಡಿಮೆ ಸಂಬಂಧವಿದೆ ಅಥವಾ ಯಾವುದೇ ಸಂಬಂಧವೇ ಇಲ್ಲ ಎಂದು ನಾವು ಹೇಳಬಹುದು ಎಂದು ಆರ್‌ಬಿಐ ಹೇಳಿದೆ. ಇನ್ನು ಸಿಐಸಿ ಜಿಡಿಪಿಗೆ ಅನುಗುಣವಾಗಿ ಬೆಳೆಯುತ್ತಾ ಹೋಗುವುದು ಆಗಿದೆ. ಈ ನಡುವೆ ದೇಶದಲ್ಲಿ ಡಿಜಿಟಲ್‌ ಪೇಮೆಂಟ್‌ಗಳು ಅಧಿಕವಾಗುತ್ತಿದೆ. ಕೊರೊನಾ ವೈರಸ್‌ ಸೋಂಕಿನ ಬಳಿಕ ಎಲ್ಲಾ ಕಾರ್ಯವು ಡಿಜಿಟಲ್‌ ರೂಪದಲ್ಲಿ ನಡೆಯುತ್ತಿದೆ. ಇನ್ನು ಇದೇ ಸಂದರ್ಭದಲ್ಲಿ ಡಿಜಿಟಲ್ ಪಾವತಿಗಳ ಕುರಿತು ಆರ್‌ಬಿಐ ಅಧ್ಯಯನದ ಪ್ರಕಾರ ಚಲಾವಣೆಯಲ್ಲಿರುವ ನೋಟು ಹಾಗೂ ಜಿಡಿಪಿ ಅನುಪಾತವು ಒಟ್ಟಾರೆ ಆರ್ಥಿಕ ಬೆಳವಣಿಗೆಗೆ ಅನುಗುಣವಾಗಿ ಅಧಿಕವಾಗಿದೆ.

 ಹಬ್ಬದ ಸಂದರ್ಭದಲ್ಲಿ ಹೇಗಿದೆ ಆರ್ಥಿಕ ಪರಿಸ್ಥಿತಿ?

ಹಬ್ಬದ ಸಂದರ್ಭದಲ್ಲಿ ಹೇಗಿದೆ ಆರ್ಥಿಕ ಪರಿಸ್ಥಿತಿ?

ಹೆಚ್ಚಿನ ಸಂಖ್ಯೆಯ ವ್ಯಾಪಾರಿಗಳು ಇನ್ನೂ ಕೂಡಾ ನಗದು ರಹಿತ ವಹಿವಾಟಿನ ಮೇಲೆ ಅವಲಂಬಿಸುವ ಕಾರಣದಿಂದಾಗಿ ಈ ಹಬ್ಬದ ಸಂದರ್ಭದಲ್ಲಿ ನಗದು ಬೇಡಿಕೆಯು ಅಧಿಕವಾಗುತ್ತಿದೆ. ಸುಮಾರು 15 ಕೋಟಿ ಜನರು ಬ್ಯಾಂಕ್ ಖಾತೆಯನ್ನು ಹೊಂದಿಲ್ಲ. ಈ ಹಿನ್ನೆಲೆ ನಗದು ವ್ಯವಹಾರವು ಈಗಲೂ ಪ್ರಮುಖ ವಿಧಾನವಾಗಿ ಉಳಿದಿದೆ. ಇದಲ್ಲದೆ, ಶೇಕಡ 90 ಪ್ರತಿಶತದಷ್ಟು ಜನರು ಇ ಕಾಮರ್ಸ್ ಮೇಲೆ ಅವಲಂಬಿತರಾಗಿದ್ದಾರೆ. ಇದು ನಾಲ್ವು ನಗರಗಳಿಗೆ ಸೇರಿದ್ದು ಆಗಿದೆ. ಆ ಪೈಕಿ ಒಂದು ನಗರದಲ್ಲೇ ಶೇಕಡ 50 ರಷ್ಟು ಮಂದಿ ಇ-ಕಾಮರ್ಸ್ ಮಾಡುತ್ತಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+