SBI vs Post Office;: ನೀವು ಸುರಕ್ಷಿತ ಹೂಡಿಕೆಗಾಗಿ ಉತ್ತಮವಾದ ಆಯ್ಕೆಯನ್ನು ಹುಡುಕುತ್ತಿದ್ದೀರಾ? ಬ್ಯಾಂಕ್ (Bank) ನಲ್ಲಿ ಹೊಡಿಕೆ ಮಾಡಬೇಕೋ ಅಥವಾ ಪೋಸ್ಟ್ ಆಫೀಸ್ ( Post office) ನಲ್ಲಿ ಹೊಡಿಕೆ ಮಾಡಬೇಕೆಂಬ ಗೊಂದಲ ಇದ್ಯಾ? ಹಾಗಿದ್ರೆ ಇಲ್ಲಿದೆ ನಿಮಗಾಗಿ ಸಂಪೂರ್ಣ ಮಾಹಿತಿ.
ಹೌದು,ಇತ್ತೀಚಿನ ದಿನಗಳಲ್ಲಿ ಹಲವು ಬ್ಯಾಂಕ್‌ಗಳು ಸ್ಥಿರ ಠೇವಣಿ (FD)ಗಳ ವಿಚಾರದಲ್ಲಿ ತಮ್ಮದೇ ರೀತಿಯ ಬಡ್ಡಿದರಗಳನ್ನು ಹೊಂದಿದೆ. ಆದರೆ ಗ್ರಾಹಕರಿಗೆ ಹೆಚ್ಚಿನ ಆದಾಯವನ್ನು ನೀಡುವ ವಿಷಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಅಂಚೆ ಕಚೇರಿ ನಡುವೆ ಪೈಪೋಟಿ ಇದೆ. ಇವುಗಳೆರಡರಲ್ಲಿ ಹೂಡಿಕೆದಾರರಿಗೆ ಯಾವುದು ಉತ್ತಮವೋ ಅವುಗಳನ್ನು ಆಯ್ಕೆ ಮಾಡಿಕೊಂಡು ನೀವು ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ. ನಾವು ಸದ್ಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮತ್ತು ಅಂಚೆ ಕಚೇರಿ ನಡುವಿನ ಬಡ್ಡಿದರಗಳ ಬಗ್ಗೆ ಇಲ್ಲಿ ಮಾಹಿತಿ ನೀಡಿದ್ದೇವೆ.

ನಿಶ್ಚಿತ ಠೇವಣಿ (ಎಫ್‌ಡಿ) ಹೂಡಿಕೆಯು ವಿಶ್ವಾಸಾರ್ಹ ಹಾಗೂ ಸ್ಥಿರ ದೀರ್ಘಾವಧಿಯ ಲಾಭವನ್ನು ನೀಡುವ ಭರವಸೆಯ ಹೂಡಿಕೆಯ ಆಯ್ಕೆಯಾಗಿದೆ. ಈ ಎಫ್‌ಡಿಯು ನಿಮ್ಮ ಹಣಕಾಸಿನ ಮೇಲೆ ನಿಮಗೆ ಒಂದು ನಿರ್ದಿಷ್ಟ ಅವಧಿಗೆ ಹಣವನ್ನು ಠೇವಣಿ ಮಾಡಲು ಹಾಗೂ ಮೊತ್ತದ ಮೇಲೆ ಬಡ್ಡಿಯನ್ನು ಗಳಿಸಲು ಅನುಕೂಲಕರವಾಗಿದೆ. ಹಾಗೂ FD ಗಳು ಉಳಿತಾಯ ಖಾತೆಗಳಿಗಿಂತ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತದೆ.
ಬ್ಯಾಂಕುಗಳು ಮತ್ತು ಅಂಚೆ ಕಛೇರಿಗಳು FD ಸೌಲಭ್ಯಗಳು: ಇಲ್ಲಿದೆ ಹೆಚ್ಚಿನ ಮಾಹಿತಿ
SBI ಸ್ಥಿರ ಠೇವಣಿ
ಭಾರತದ ಅತಿದೊಡ್ಡ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಠೇವಣಿ ಅವಧಿಯ ಆಧಾರದ ಮೇಲೆ ವಿವಿಧ ಸ್ಥಿರ ಠೇವಣಿ (FD) ಬಡ್ಡಿ ದರಗಳನ್ನು ನೀಡುತ್ತದೆ . SBI 1 ಮತ್ತು 5 ವರ್ಷಗಳ ನಡುವಿನ ಸ್ಥಿರ ಠೇವಣಿ ಅವಧಿಗೆ ಶೇ.6.5 ರಿಂದ ಶೇ.7ವ್ಯಾಪ್ತಿಯಲ್ಲಿ FD ಸೌಲಭ್ಯಗಳನ್ನು ನೀಡುತ್ತದೆ. ಒಂದು ವರ್ಷದ ಅವಧಿಯ ಠೇವಣಿಯು ಶೇ.6.8 ಬಡ್ಡಿಯನ್ನು,ಎರಡು ವರ್ಷಗಳ ಅವಧಿಯ ಠೇವಣಿಗೆ ಶೇ.7ರಷ್ಟು ನೀಡುತ್ತದೆ. ಮೂರು ವರ್ಷ ಹಾಗೂ ನಾಲ್ಕು ವರ್ಷಗಳ ಅವಧಿಯ ಠೇವಣಿಗಳಿಗೆ ಶೇ. 6.75 ಬಡ್ಡಿಯನ್ನು ಒದಗಿಸುತ್ತದೆ. ಐದು ವರ್ಷಗಳ ಅವಧಿಯ ಠೇವಣಿಗೆ ಶೇ.6.5ರಷ್ಟು ಬಡ್ಡಿ ಸಿಗುತ್ತದೆ.
ಅಂಚೆ ಕಛೇರಿ ಸ್ಥಿರ ಠೇವಣಿ
ಇಂಡಿಯಾ ಪೋಸ್ಟ್ ಫಿಕ್ಸೆಡ್ ಡೆಪಾಸಿಟ್ ಸೌಲಭ್ಯವನ್ನು ನೀಡುತ್ತದೆ. ಇದನ್ನು ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಅಕೌಂಟ್ಸ್ (ಟಿಡಿ) ಎಂದೂ ಸಹ ಕರೆಯುತ್ತಾರೆ.
ಭಾರತ ಸರ್ಕಾರವು ಈ ಖಾತೆಗಳಿಗೆ ಸುರಕ್ಷಿತ ಖಾತರಿಯನ್ನು ನೀಡುತ್ತದೆ. ಹೂಡಿಕೆದಾರು ಇದರಲ್ಲಿ ಅನುಮಾನವಿಲ್ಲದೆ ಹೂಡಿಕೆಯನ್ನು ಮಾಡಬಹುದು. ಜನವರಿಯಿಂದ ಮಾರ್ಚ್ 2025 ರ ಅವಧಿಗೆ, ಅಂಚೆ ಕಛೇರಿಗಳು ಶೇ. 6.7 ರಿಂದ ಶೇ.7.1ರವರೆಗೆ ಸ್ಥಿರ ಠೇವಣಿಗಳನ್ನು ನೀಡುತ್ತವೆ.
FY 2024-25 ರ ನಾಲ್ಕನೇ ತಿಂಗಳಲ್ಲಿ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವು ಜನವರಿ 1, 2025 ರಿಂದ ಪ್ರಾರಂಭವಾಗಿ ಮಾರ್ಚ್ 31, 2025 ಕ್ಕೆ ಕೊನೆಗೊಳ್ಳುತ್ತದೆ. ಮೂರನೇ ತಿಂಗಳ (ಅಕ್ಟೋಬರ್ 1, 2024) ಸೂಚಿಸಲಾದ ಬಡ್ಡಿದರವು ಬದಲಾಗದೆ ಹಾಗೇ ಉಳಿಯುತ್ತದೆ.
ಒಂದು ವರ್ಷದ ಅವಧಿಯ ಠೇವಣಿಯು ಶೇ. 6.9 ಬಡ್ಡಿಯನ್ನು, ಎರಡು ವರ್ಷಗಳ ಅವಧಿಯ ಠೇವಣಿಗೆ ಶೇ.7 ಮತ್ತು ಮೂರು ವರ್ಷಗಳ ಅವಧಿಯ ಠೇವಣಿಗೆ ಶೇ.7.1ರಷ್ಟು ಬಡ್ಡಿಯನ್ನು ನೀಡುತ್ತದೆ. ಐದು ವರ್ಷಗಳ ಅವಧಿಯ ಠೇವಣಿಗೆ ಶೇ.6.7 ಬಡ್ಡಿ ಸಿಗುತ್ತದೆ.
ಇತ್ತೀಚಿನ FD ದರಗಳ ಪಟ್ಟಿ ಇಲ್ಲಿದೆ
| ಕ್ರಮ ಸಂಖ್ಯೆ | ಅಧಿಕಾರಾವಧಿ | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ | ಅಂಚೆ ಕಛೇರಿ (ಜನವರಿಯಿಂದ ಮಾರ್ಚ್ 2025) |
| 1 | 1 ವರ್ಷ | 6.80% | 6.90% |
| 2 | 2 ವರ್ಷ | 7.00% | 7.00% |
| 3 | 3 ವರ್ಷ | 6.75% | 7.10% |
| 4 | 4 ವರ್ಷ | 6.75% | - |
| 5 | 5 ವರ್ಷ | 6.50% | 6.70% |
ಹಣವನ್ನು ಹೊಡಿಕೆ ಮಾಡುವಾಗ ನೀವು ಎಚ್ಚರಿಕೆಯಿಂದ ಹೂಡಿಕೆ ಮಾಡಬೇಕು.ಇನ್ನೂ ಪೋಸ್ಟ್ ಆಫೀಸ್‌ನಲ್ಲಿಟ್ಟ ಹಣ ಸೇಫ್ ಅನ್ನೋದನ್ನು ನೀವು ಗಮನದಲಿಟ್ಟುಕೊಂಡು ಸುರಕ್ಷಿತವಾಗಿ ಒಂದು ಕಡೆ ಹೊಡಿಕೆ ಮಾಡಿ ಹೆಚ್ಚಿನ ಆದಾಯವನ್ನು ಪಡೆದುಕೊಳ್ಳಿ.


Click it and Unblock the Notifications