ಇಂದಿನಿಂದ ತತ್ಕಾಲ್ ಟಿಕೆಟ್ ಬುಕಿಂಗ್‌ನಲ್ಲಿ ಕೆಲವು ಹೊಸ ಬದಲಾವಣೆಗಳು ಜಾರಿಗೆ ಬಂದಿವೆ. ನೀವು ನಿಮ್ಮ ಪ್ರಯಾಣದ ಟಿಕೆಟ್ ಬುಕ್ಕಿಂಗ್‌ಗಾಗಿ ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಅಥವಾ ಮೀಸಲಾತಿ ಕೌಂಟರ್ ಮತ್ತು ಅಧಿಕೃತ ಏಜೆಂಟ್‌ಗಳ ಮೂಲಕ ರೈಲು ಟಿಕೆಟ್‌ಗಳನ್ನು ಬುಕ್ ಮಾಡುವಾಗ ಆಧಾರ್ ಓಟಿಪಿ ಪರಿಶೀಲನೆ ಕಡ್ಡಾಯವನ್ನು ಮಾಡಲಾಗಿದೆ.
ಹೌದು, ತತ್ಕಾಲ್ ರೈಲು ಟಿಕೆಟ್ ಬುಕಿಂಗ್‌ಗಳ ದುರುಪಯೋಗವನ್ನು ತಡೆಗಟ್ಟಲು ಮತ್ತು ಸಾಮಾನ್ಯ ಪ್ರಯಾಣಿಕರಿಗೆ ಬುಕಿಂಗ್ ಅನ್ನು ಸುಲಭಗೊಳಿಸಲು ಈ ಹೊಸ ಬದಲಾವಣೆಗಳನ್ನು ಜಾರಿಗೆ ತರಲಾಗಿದೆ. ತತ್ಕಾಲ್ ಟಿಕೆಟ್‌ಗಳನ್ನು ಪ್ರಯಾಣದ ದಿನಾಂಕದ ಒಂದು ದಿನ ಮೊದಲು ಬುಕ್ ಮಾಡಲು ನಿಮ್ಮಗೆ ಅವಕಾಶವಿರುತ್ತದೆ. ನೀವು ಎಸಿ ಕೋಚ್‌ಗಳಲ್ಲಿ ತತ್ಕಾಲ್ ರೈಲು ಟಿಕೆಟ್‌ಗಳನ್ನು ಪ್ರಯಾಣದ ಹಿಂದಿನ ದಿನ ಬೆಳಿಗ್ಗೆ 10 ಗಂಟೆಯಿಂದ ಬುಕ್ ಮಾಡಬಹುದು. ಸ್ಲೀಪರ್ ಮತ್ತು ಸೆಕೆಂಡ್ ಸಿಟ್ಟಿಂಗ್‌ನಂತಹ ಎಸಿ ಅಲ್ಲದ ತರಗತಿಗಳಿಗೆ ತತ್ಕಾಲ್ ಬುಕಿಂಗ್ ಅದೇ ದಿನ ಬೆಳಿಗ್ಗೆ 11 ಗಂಟೆಯಿಂದ ಟಿಕೆಟ್ ಬುಕಿಂಗ್ ಆರಂಭವಾಗುತ್ತದೆ.

ಜುಲೈ 15 ರಿಂದ ಗಣಕೀಕೃತ ಕೌಂಟರ್‌ಗಳಲ್ಲಿ ಮತ್ತು ಅಧಿಕೃತ ರೈಲ್ವೆ ಏಜೆಂಟ್‌ಗಳ ಮೂಲಕ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡುವಾಗ ಆಧಾರ್ ಓಟಿಪಿ ಪರಿಶೀಲನೆ ಕಡ್ಡಾಯವಾಗಿದ್ದು, ಕೌಂಟರ್‌ಗಳಲ್ಲಿ ಮತ್ತು ಏಜೆಂಟ್‌ಗಳ ಮೂಲಕ ಟಿಕೆಟ್ ಬುಕ್ ಮಾಡುವಾಗ ಪ್ರಯಾಣಿಕರು ಜಾಗರೂಕರಾಗಿರಬೇಕು. ಬುಕಿಂಗ್ ಸಮಯದಲ್ಲಿ ಪ್ರಯಾಣಿಕರು ತಮ್ಮ ಆಧಾರ್ ಸಂಖ್ಯೆ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಒದಗಿಸಬೇಕಾಗುತ್ತದೆ. ಆಧಾರ್ ಓಟಿಪಿ ಪರಿಶೀಲನೆಯ ನಂತರವಷ್ಟೇ ರೈಲು ಟಿಕೆಟ್ ಲಭ್ಯವಾಗುತ್ತದೆ.
ಐಆರ್‌ಸಿಟಿಸಿ ಬಳಕೆದಾರರ ಪ್ರೊಫೈಲ್ ಪರಿಶೀಲನೆ
- ಆಧಾರ್ ಬಳಸಿ ಐಆರ್‌ಸಿಟಿಸಿ ಬಳಕೆದಾರರ ಪ್ರೊಫೈಲ್ ಅನ್ನು ಪರಿಶೀಲಿಸುವ ವಿಧಾನ ಇಲ್ಲಿದೆ.
- ಮೊದಲಿಗೆ, ಐಆರ್‌ಸಿಟಿಸಿ ವೆಬ್‌ಸೈಟ್ ಅಥವಾ ಐಆರ್‌ಸಿಟಿಸಿ ರೈಲ್ ಕನೆಕ್ಟ್ ಮೊಬೈಲ್ ಅಪ್ಲಿಕೇಶನ್‌ಗೆ ಲಾಗಿನ್ ಆಗಬೇಕು. ನಂತರ "ನನ್ನ ಖಾತೆ" ಆಯ್ಕೆಯನ್ನು ಆರಿಸಿಕೊಳ್ಳಬೇಕು. ಆ ಬಳಿಕ "ಬಳಕೆದಾರರನ್ನು ದೃಢೀಕರಿಸಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಆಧಾರ್ ಪರಿಶೀಲನೆಯನ್ನು ಪೂರ್ಣಗೊಳಿಸಬೇಕು.
ಜುಲೈ 2025 ರಲ್ಲಿ ಐಆರ್‌ಸಿಟಿಸಿ ಮಾಡಿದ ಬದಲಾವಣೆಗಳು
ಜುಲೈ 1, 2025 ರಿಂದ ಪ್ರಯಾಣಿಕರಿಗೆ ರೈಲು ಟಿಕೆಟ್ ಬುಕಿಂಗ್‌ಗೆ ಆದ್ಯತೆ ನೀಡುವ ಸಲುವಾಗಿ ಅಧಿಕೃತ ಏಜೆಂಟರು ರೈಲು ಟಿಕೆಟ್‌ಗಳನ್ನು ಬುಕ್ ಮಾಡುವುದನ್ನು ನಿರ್ಬಂಧಿಸಲಾಗಿದೆ. ಟಿಕೆಟ್ ಬುಕಿಂಗ್ ಸಮಯದ ಮೇಲಿನ ನಿರ್ಬಂಧ ಹೀಗಿದೆ; ಎಸಿ ದರ್ಜೆಯ ರೈಲು ಟಿಕೆಟ್‌ಗಳಿಗಾಗಿ ಏಜೆಂಟರು ಬೆಳಿಗ್ಗೆ 10 ರಿಂದ 10:30 ರವರೆಗೆ ಟಿಕೆಟ್‌ಗಳನ್ನು ಬುಕ್ ಮಾಡುವಂತಿಲ್ಲ. ಅದೇ ರೀತಿ ಸ್ಲೀಪರ್ ಮತ್ತು ಸೆಕೆಂಡ್ ಸಿಟ್ಟಿಂಗ್ ದರ್ಜೆಯ ಟಿಕೆಟ್‌ಗಳಿಗಾಗಿ ಏಜೆಂಟರು ಬೆಳಿಗ್ಗೆ 11 ರಿಂದ 11:30 ರವರೆಗೆ ಟಿಕೆಟ್‌ಗಳನ್ನು ಬುಕ್ ಮಾಡುವಂತಿಲ್ಲ.
IRCTC ಖಾತೆಯೊಂದಿಗೆ ಆಧಾರ್ ಅನ್ನು ಹೇಗೆ ಲಿಂಕ್ ಮಾಡುವುದು..?
- ಮೊದಲು ನೀವು ಅಧಿಕೃತ IRCTC ವೆಬ್‌ಸೈಟ್‌ಗೆ ಭೇಟಿ ನೀಡಿ.
- ನಿಮ್ಮ ಹೆಸರು ಅಥವಾ ಇ-ಮೇಲ್ ಐಡಿಯಿಂದ ಲಾಗಿನ್ ಮಾಡಿ.
- ನನ್ನ ಖಾತೆ ಟ್ಯಾಬ್‌ಗೆ ಹೋಗಿ ಬಳಕೆದಾರರನ್ನು ದೃಢೀಕರಿಸಿ ಆಯ್ಕೆಮಾಡಿಕೊಳ್ಳಿ ನಂತರ ನಿಮ್ಮ ಆಧಾರ್ ಸಂಖ್ಯೆ ಅಥವಾ ವರ್ಚುವಲ್ ಐಡಿಯನ್ನು ನಮೂದಿಸಿ.
- ವಿವರಗಳನ್ನು ಪರಿಶೀಲಿಸಿ ಮತ್ತು OTP ಸ್ವೀಕರಿಸಿ ಆಯ್ಕೆಮಾಡಿ.
- ನಿಮ್ಮ ಫೋನ್‌ನಲ್ಲಿ ನೀವು OTP ಪಡೆದ ನಂತರ, ಅದನ್ನು ನಮೂದಿಸಿ ಮತ್ತು ಸಮ್ಮತಿ ಫಾರ್ಮ್‌ಗೆ ಒಪ್ಪಿಕೊಂಡ ನಂತರ ಸಲ್ಲಿಸಿ. ನಿಮ್ಮ ಆಧಾರ್ ಯಶಸ್ವಿಯಾಗಿ ದೃಢೀಕರಿಸಿದ ನಂತರ ದೃಢೀಕರಣ ಸಂದೇಶ ನಿಮ್ಮ ಕಾಣಿಸಿಕೊಳ್ಳುತ್ತದೆ.
ಈ ಬದಲಾವಣೆಗಳು ಸಾಮಾನ್ಯ ಪ್ರಯಾಣಿಕರಿಗೆ ರೈಲು ಟಿಕೆಟ್‌ಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಮತ್ತು ತತ್ಕಾಲ್ ಟಿಕೆಟ್‌ಗಳ ಸಮಸ್ಯೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ.


Click it and Unblock the Notifications