ವಾಹನ ಸವಾರರೇ ಹುಷಾರ್! ಸಂಚಾರಿ ನಿಯಮ ಉಲ್ಲಂಘನೆಗೆ ಹೊಸ ನಿಯಮ ಜಾರಿ... ನಿಯಮ ತಪ್ಪಿದರೆ ಬೀಳುತ್ತೆ ದಂಡ..ಎಷ್ಟು ನೀವೆ ನೋಡಿ

ಬೆಂಗಳೂರು ಟ್ರಾಫಿಕ್ ಹಬ್,ಟ್ರಾಫಿಕ್ ಸಿಟಿ ಅಂತಲೇ ಹೆಸರುವಾಸಿಯಾಗಿದೆ.ಟ್ರಾಫಿಕ್ ನಿಯಂತ್ರಣಕ್ಕೆ ಬೆಂಗಳೂರು ಸಂಚಾರಿ ಪೊಲೀಸರು ಮಾಡದೇ ಇರುವ ಕಸರತ್ತಿಲ್ಲ...ದಿನೇ ದಿನೆ ವಾಹನ ಸಂಚಾರ ದಟ್ಟಣೆ ಹೆಚ್ಚಾಗುತ್ತಲೇ ಇದೆ. ಬೆಂಗಳೂರಿನ ಹಲವೆಡೆ ಟ್ರಾಫಿಕ್‌ದೇ ಜಾಸ್ತಿ ಗೋಳಾಗಿದೆ.ಸಂಚಾರ ದಟ್ಟನೆ ನಿಯಂತ್ರಿಸುವುದಕ್ಕೆ ಕಷ್ಟಕರವಾಗಿದೆ.ಇದಕೆಲ್ಲಾ ಕಡಿವಾಣವಾಗಲು ಸಂಚಾರ ನಿಯಮದಲ್ಲಿ ಆಗಾಗ ಬದಲಾವಣೆಗಳನ್ನು ಮಾಡುತ್ತಿದ್ದಾರೆ ಅದರೂ ಸಹ ವಾಹನ ಸಂಚಾರರು ನಿಯಮ ಉಲ್ಲಂಘನೆ ಮಾಡುತ್ತಲೇ ಇರುತ್ತಾರೆ ಇದನ್ನು ತಡೆಯಲು ಮಾರ್ಚ್ 1 ರಂದು ಸಂಚಾರಿ ನಿಯಮಮದ ಉಲ್ಲಂಘನೆಯ ದಂಡದಲ್ಲಿ ಬದಲಾವಣೆಯನ್ನು ಮಾಡಿದ್ದಾರೆ.

ಹೌದು,ಸಂಚಾರಿ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಲು ದೊಡ್ಡ ಮಟ್ಟದ ದಂಡ ವಿಧಿಸಲಾಗುತ್ತಿದೆ. ಅದರು ಸಹ ವಾಹನ ಸವಾರರು ಎಚ್ಚೆತ್ತುಕೊಳ್ಳುತ್ತಿಲ್ಲ.ಒಂದಿಲ್ಲೊಂದು ಕಾರಣದಿಂದ ನಿಯಮ ಉಲ್ಲಂಘಿಸುವ ಸವಾರರಿಂದ ಕೋಟಿಗಟ್ಟಲೆ ದಂಡವನ್ನು ಸಂಚಾರಿ ಪೊಲೀಸರು ವಸೂಲಿ ಮಾಡಿದ್ದಾರೆ ಹಾಗಿದ್ರೆ ಸಂಚಾರ ನಿಯಮಗಳನ್ನು ಬದಲಾವಣೆಗಳು ಯಾವುವು..? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..

ಸಂಚಾರಿ ನಿಯಮ ಉಲ್ಲಂಘನೆಗೆ ಹೊಸ ನಿಯಮ ಜಾರಿ; ದಂಡ ಎಷ್ಟು?

ಇನ್ಮಂದೆ ವಾಹನ ಸವಾರರು ಕೆಲವು ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ.ಸರ್ಕಾರ ಮತ್ತು ಸಂಚಾರ ಇಲಾಖೆಯು ಸಂಚಾರ ನಿಯಮ ಉಲ್ಲಂಘನೆಗಳನ್ನು ಮತ್ತು ಸಾರ್ವಜನಿಕರ ಸುರಕ್ಷತೆ ಕಾಪಾಡಿಕೊಳ್ಳಲು ಕಾನೂನು ಕ್ರಮಗಳನ್ನು ಕೈಗೊಂಡಿದೆ.ಇನ್ನೂ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಎಲ್ಲರ ಜವಾಬ್ದಾರಿಯಾಗಿದೆ.

ಸಂಚಾರ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಪ್ರಾಧಿಕಾರಗಳು ಬಲವಾದ ಕಾನೂನು ಜಾರಿಗೊಳಿಸಲಾಗುತ್ತದೆ.ಕೆಲವು ಸವಾರರು ನಿರ್ಲಕ್ಷ್ಯದಿಂದ ಅಥವಾ ಜಾಣತನದಿಂದ ಈ ನಿಯಮಗಳನ್ನು (Rule ಉಲ್ಲಂಘಸಿದ್ದಾರೆ.ಇದರಿಂದ ರಸ್ತೆ ಅಪಘಾತಗಳು ಹೆಚ್ಚಾಗುವುದು ಮಾತ್ರ ಕಡಿಮೆಯಾಗಿಲ್ಲ.

ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸಿದರೆ 5,000 ವಾಹನ ಚಲಾಯಿಸುವಾಗ ಮೊಬೈಲ್ ಬಳಸಿದರೆ 1,000 ಮತ್ತು ಸೀಟ್‌ಬೆಲ್ಟ್ ಧರಿಸದಿದ್ದರೆ 1,000 ದಂಡ ವಿಧಿಸಲಾಗುತ್ತದೆ.

ಪ್ರಮುಖ ಸಂಚಾರ ಉಲ್ಲಂಘನೆಗೆ ಮಾಡಿದ್ದರೆ ಎಷ್ಟು ದಂಡ ಕಟ್ಟಬೇಕು?

1. ಹೆಲ್ಮಟ್ ಧರಿಸದೇ ವಾಹನ ಚಾಲನೆ
ಐ.ಎಂ.ವಿ ಕಾಯ್ದೆ ಸೆಕ್ಷನ್‌ 194(ಡಿ)
ದಂಡ: 500

2. ಹಿಂಬದಿ ಸವಾರ ಹೆಲ್ಮಟ್ (Helmet) ಧರಿಸದೇ ವಾಹನ ಸವಾರಿ
ನಿಯಮ: ಕೆ.ಎಂ.ವಿ ನಿಯಮ 230(1)
ದಂಡ : 500

3. ಸೀಟ್ ಬೆಲ್ಟ್ ಧರಿಸದೇ ವಾಹನ ಚಾಲನೆ
ನಿಯಮ: ಐ.ಎಂ.ವಿ ಕಾಯ್ದೆ ಸೆಕ್ಷನ್ 194(ಬಿ)
ದಂಡ : 500

4. ವಾಹನ ಚಾಲನೆ ವೇಳೆ ಮೊಬೈಲ್ (Mobile) ಬಳಕೆ
ನಿಯಮ: ಐ.ಎಂ.ವಿ ಕಾಯ್ದೆ ಸೆಕ್ಷನ್ 184(ಸಿ)
ದಂಡ : 1,000

5.ಅಜಾಗರೂಕತೆ/ಅಪಾಯಕಾರಿ ಯಾಗಿ ವಾಹನ ಚಾಲನೆ
ನಿಯಮ: ಐ.ಎಂ.ವಿ ಕಾಯ್ದೆ ಸೆಕ್ಷನ್ 184
ದಂಡ : 1,000

6. ತುರ್ತು ಸೇವಾ ವಾಹನಗಳಿಗೆ (ಆಂಬ್ಯುಲೆನ್ಸ್ ಅಗ್ನಿಶಾಮಕ ವಾಹನ) ದಾರಿ ನೀಡಲು ವಿಫಲವಾದರೆ:
ನಿಯಮ: ಐ.ಎಂ.ವಿ ಕಾಯ್ದೆ ಸೆಕ್ಷನ್ 194(ಇ)
ದಂಡ : 1,000

7. ನಿಷೇಧಿತ/ನಿರ್ಬಂಧಿತ ವಲಯಗಳಲ್ಲಿ ಹಾರ್ನ್ ಬಳಕೆ

ನಿಯಮ: ಐ.ಎಂ.ವಿ ಕಾಯ್ದೆ ಸೆಕ್ಷನ್ 194(ಎಫ್)
ದಂಡ: 2W/3W ವಾಹನಗಳಿಗೆ: 500
ಇತರೆ ವಾಹನಗಳಿಗೆ: $1,000

ನೀವು ವಾಹನ ಚಲಾಯಿಸುವಾಗ ಹೆಲೈಟ್ ಅಥವಾ ಸೀಟ್ ಬೆಲ್ಟ್ (Helmet or seatbelt) ಧರಿಸುವುದು, ಮೊಬೈಲ್ ಬಳಸದೆ ಸುರಕ್ಷಿತವಾಗಿ ವಾಹನ ಚಲಾಯಿಸುವುದು,ತುರ್ತು ಸೇವಾ ವಾಹನಗಳಿಗೆ ದಾರಿ ನೀಡುವುದು ಮತ್ತು ಇತರ ನಿಯಮಗಳನ್ನು ಪಾಲಿಸುವುದು ಮುಖ್ಯವಾಗುತ್ತದೆ.ನಿಮ್ಮ ಸುರಕ್ಷತೆಯನ್ನು ಮಾತ್ರವಲ್ಲ,ಇತರರಿಗೂ ಭದ್ರತೆಯನ್ನು ಒದಗಿಸಲಾಗುತ್ತದೆ.

ನೀವು ಸಂಚಾರ ನಿಯಮವನ್ನು ಉಲ್ಲಂಘನೆಗೆ ಮಾಡಿದ್ದರೆ ಈ ಮೇಲಿನಂತೆ ದಂಡ ವಿಧಿಸಲಾಗುತ್ತದೆ.

ಸಂಚಾರ ದಟ್ಟಣೆ ನಿಯಂತ್ರಿಸಲು ಇಲ್ಲಿವೆ ಕೆಲವು ಸಲಹೆಗಳು

  • ವಾಹನ ಸವಾರರು ಸಂಚಾರಿ ಪೊಲೀಸರ ಅಪ್‌ಡೇಟ್‌ಗಳನ್ನು ತಪ್ಪದೇ ಅನುಸರಿಸಬೇಕು ವಾಹನ ಸವಾರರು ಸಾಧ್ಯವಾದರೆ ಹೆಚ್ಚು ಟ್ರಾಫಿಕ್‌ನಿಂದ ಕೂಡಿದ ಸಮಯದಲ್ಲಿ ಸಂಚಾರ ತಪ್ಪಿಸಿದರೆ ಒಳ್ಳೆಯದು.
  • ಅತಿಹೆಚ್ಚು ಟ್ರಾಫಿಕ್ ಇರುವ ಸಮಯದಲ್ಲಿ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವುದು ಉತ್ತಮ.
  • ಯಾವುದೇ ಕಾರಣಕ್ಕೂ, ಎಂಥದ್ದೇ ಸಂದರ್ಭದಲ್ಲೂ ವೇಗ ನಿಯಮ ಉಲ್ಲಂಘಿಸಬೇಡಿ

ಒಟ್ಟಿನಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಇಲ್ಲದೇ ಇರುವುದನ್ನು ನೋಡುವುದೇ ಅಪರೂಪ. ಯಾವಗಲ್ಲೂ ಜನಜಂಗಳಿಯಿಂದ ಕೂಡಿರುತ್ತಲೇ ಇರುತ್ತದೆ.ಹಬ್ಬ-ಹರಿದಿನ, ಸರ್ಕಾರಿ ರಜಾ ದಿನಗಳು ಹೀಗೆ ಒಂದಷ್ಟು ದಿನಗಳಲ್ಲಿ ಬೆಂಗಳೂರಿನ ಟ್ರಾಫಿಕ್ ಕೊಂಚ ಕಡಿಮೆ ಇರುತ್ತದೆ. ಆದರೆ ಹಬ್ಬದ ಹಿಂದಿನ ದಿನದವರೆಗೂ ಬೆಂಗಳೂರು ಟ್ರಾಫಿಕ್ ಮಯವಾಗಿರುತ್ತದೆ. ಇನ್ನು ಸರ್ಕಾರಿ ರಜೆಗಳಲ್ಲಿ ಅತಿಹೆಚ್ಚು ಜನ ಪ್ರಯಾಣ ಬೆಳೆಸಲು ರಸ್ತೆಗೆ ಇಳಿಯುವುದಿಲ್ಲ. ಇದೊಂದು ರೀತಿ ಟ್ರಾಫಿಕ್ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಆದರೆ ಪ್ರತಿದಿನ ಬೆಂಗಳೂರಿನಲ್ಲಿ ಟ್ರಾಫಿಕ್‌ ಅನ್ನೋದು ಒಂದಲ್ಲಾ ಒಂದು ರೀತಿಯಲ್ಲಿ ಬಿಸಿ ಪ್ರಯಾಣಿಕರಿಗೆ ಬಿಸಿ ಮುಟ್ಟಿಸುತ್ತಲೇ ಇರುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+