ವಾಹನ ಸವಾವರೇ ಇಲ್ಲಿ ಕೇಳಿ... ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ಹೆಚ್ಚಿತ್ತಿರುವ ಪಾರ್ಕಿಂಗ್ ಹಾಗೂ ಟ್ರಾಫಿಕ್ ಸಮಸ್ಯೆ ಗೆ ಇದೀಗ ಬ್ರೇಕ್ ಹಾಕಲು ಬೆಂಗಳೂರು ಸಂಚಾರ ಪೊಲೀಸರು ಮುಂದಾಗಿದ್ದಾರೆ. ಹೌದು,ಬೆಂಗಳೂರಿನಲ್ಲಿ ದೊಡ್ಡ ತಲೆನೋವು ಆಗಿರುವ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಬೆಂಗಳೂರು ಸಂಚಾರ ಪೊಲೀಸರು ಹೊಸ ಸಂಚಾರ ಮತ್ತು ಪಾರ್ಕಿಂಗ್ ವ್ಯವಸ್ಥೆಯ ಬದಲಾವಣೆಗಳನ್ನು ಜಾರಿಗೆ ತಂದಿದ್ದಾರೆ.
ಬೆಂಗಳೂರಿನ ಮಂದಿಯಾವುದೇ ಟ್ರಾಫಿಕ್ ಕಿರಿಕಿರಿ ಇಲ್ಲದನೇ ಸುಗಮ ಸಂಚಾರವನ್ನು ಕಲ್ಪಿಸಿಕೊಂಡಲು ಬೆಂಗಳೂರು ಸಂಚಾರ ಪೊಲೀಸರು ಪ್ರಮುಖವಾಗಿ ಹೆಚ್ಚು ಟ್ರಾಫಿಕ್ ಇರುವಂತಹ ಪ್ರದೇಶಗಳಾದ ಹೈಗ್ರೌಂಡ್ಸ್ ಮತ್ತು ಶೇಷಾದ್ರಿಪುರಂ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಬರುವಂತಹ ವಾಹನ ಸಂಚಾರ ಮತ್ತು ಪಾರ್ಕಿಂಗ್ ವ್ಯವಸ್ಥೆಗಳಲ್ಲಿ ಬದಲಾವಣೆಗಳನ್ನು ಮಾಡಿದ್ದಾರೆ.

ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವಂತಹ ನೆಹರು ನಗರ 3 ನೇ ಮುಖ್ಯ ರಸ್ತೆಯನ್ನು ಏಕಮುಖ ರಸ್ತೆಯನ್ನಾಗಿ ಪರಿವರ್ತಿಸಲಾಗಿದೆ. ಸಾರ್ವಕನಿಕರಿಗೆ ನೆಹರು ವೃತ್ತದಿಂದ ಎಸ್‌ಎನ್ ಅಯ್ಯಂಗಾರ್ ಬೀದಿಗೆ (ದಕ್ಷಿಣದಿಂದ ಉತ್ತರಕ್ಕೆ) ವಾಹನ ಸಂಚಾರಕ್ಕೆ ಅವಕಾಶವನ್ನು ಮಾಡಿಕೊಂಡಲಾಗಿದೆ. ಇನ್ನೂ ಕೆಪಿ ವೆಸ್ಟ್ ಪಾರ್ಕ್ ನಿಂದ ಶೇಷಾದ್ರಿಪುರಂ ರಸ್ತೆಯ 3 ನೇ ಕ್ರಾಸ್ ತಲುಪುವಂತಹ ರಸ್ತೆಯನ್ನು ಕೂಡ ಏಕಮುಖ ರಸ್ತೆಯನ್ನಾಗಿ ಮಾಡಲಾಗಿದೆ. ವಾಹನಗಳಿಗೆ ಎಸ್‌ಎನ್ ಅಯ್ಯಂಗಾರ್ ಬೀದಿಯಿಂದ ನಾಗಪ್ಪ ಬೀದಿಗೆ ಸಂಚಾರಕ್ಕೆ ಅವಕಾಶವನ್ನು ಮಾಡಿಕೊಂಡಲಾಗಿದೆ.
ಶೇಷಾದ್ರಿಪುರಂ ವ್ಯಾಪ್ತಿಗೆ ಬರುವಂತಹ ಶಾಸಕರ ಕಚೇರಿ ರಸ್ತೆಯನ್ನು ಏಕಮುಖ ರಸ್ತೆಯಾಗಿ ಬದಲಾವಣೆಯನ್ನು ಮಾಡಲಾಗಿದೆ.ಸಂಪಿಗೆ ರಸ್ತೆಯಿಂದ ಸಿರೂರ್ ಪಾರ್ಕ್ ರಸ್ತೆಗೆ ಸಂಚಾರಕ್ಕೆ ಅವಕಾಶವನ್ನು ಕೂಡ ಮಾಡಿಕೊಡಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಮಾಹಿತಿಯನ್ನು ತಿಳಿಸಿದ್ದಾರೆ.
ಬೆಂಗಳುರಿನ ಆರ್‌ಪಿ ರಸ್ತೆಯಲ್ಲಿ ಹರೇ ಕೃಷ್ಣ ರಸ್ತೆ ರೈಲ್ವೆ ಅಂಡರ್‌ಪಾಸ್ ಮತ್ತು ಕೆಪಿ ಪಶ್ಚಿಮ 6 ನೇ ಅಡ್ಡ ರಸ್ತೆ (ಪೂರ್ವ ದಿಕ್ಕಿನಲ್ಲಿ) ನಡುವೆ ದ್ವಿಚಕ್ರ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆಯನ್ನು ಮಾಡಕೊಂಡಲಾಗಿದೆ. ಕೆಪಿ ರಸ್ತೆಯಲ್ಲಿ ನಾಲ್ಕು ಚಕ್ರಗಳ ವಾಹನಗಳ ಪಾರ್ಕಿಂಗ್‌ಗೆ ಕೆಪಿ ಪಶ್ಚಿಮ 6 ನೇ ಅಡ್ಡ ರಸ್ತೆ ಮತ್ತು ಬಿಡಿಎ ಕಚೇರಿ, ಸ್ಯಾಂಕಿ ರಸ್ತೆ (ಪೂರ್ವ ದಿಕ್ಕಿನಲ್ಲಿ) ನಡುವೆ ಅವಕಾಶ ಸಹ ನೀಡಲಾಗಿದೆ.
ಶೇಷಾದ್ರಿಪುರಂನಲ್ಲಿ, ಸಿರೂರ್ ಪಾರ್ಕ್ ರಸ್ತೆಯಲ್ಲಿ ಸೌತ್ ಎಂಡ್ ರಸ್ತೆ ಜಂಕ್ಷನ್‌ನಿಂದ ಎಸ್‌ಸಿ ರಸ್ತೆಯವರೆಗೆ ನಟರಾಜ್ ಥಿಯೇಟರ್ ಬಳಿ (ಪಶ್ಚಿಮ ದಿಕ್ಕಿನಲ್ಲಿ) ದ್ವಿಚಕ್ರ ವಾಹನಗಳ ಪಾರ್ಕಿಂಗ್ ಲಭ್ಯವಿದೆ. ಸಂಪಿಗೆ ರಸ್ತೆ, ಬಿಬಿಎಂಪಿ ಕಚೇರಿ ಮತ್ತು ಸಿರೂರ್ ಪಾರ್ಕ್ ರಸ್ತೆ (ಉತ್ತರ ದಿಕ್ಕಿನಲ್ಲಿ) ನಡುವಿನ ಶಾಸಕರ ಕಚೇರಿ ರಸ್ತೆಯಲ್ಲಿಯೂ ದ್ವಿಚಕ್ರ ವಾಹನಗಳನ್ನು ಸಾವರ್ಜನಿಕರು ನಿಲುಗಡೆಯನ್ನು ಮಾಡಬಹುದು.
ಯಾವ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ಅವಕಾಶವಿಲ್ಲ
ಹರೇ ಕೃಷ್ಣ ರಸ್ತೆ ರೈಲ್ವೆ ಅಂಡರ್‌ಪಾಸ್ ಮತ್ತು ಬಿಡಿಎ ಕಚೇರಿ ನಡುವಿನ ಆರ್‌ಪಿ ರಸ್ತೆಯಲ್ಲಿ, ಸ್ಯಾಂಕಿ ರಸ್ತೆ (ಪಶ್ಚಿಮ ದಿಕ್ಕಿನಲ್ಲಿ) ಯಾವುದೇ ವಾಹನ ನಿಲುಗಡೆಗೆ ಅವಕಾಶವಿಲ್ಲ. ಇದಲ್ಲದೇ ನಟರಾಜ್ ಥಿಯೇಟರ್ ಬಳಿಯ ಸೌತ್ ಎಂಡ್ ರಸ್ತೆ ಜಂಕ್ಷನ್ ಮತ್ತು ಎಸ್‌ಸಿ ರಸ್ತೆಯ ನಡುವಿನ ಸಿರೂರ್ ಪಾರ್ಕ್ ರಸ್ತೆಯಲ್ಲಿ (ಪೂರ್ವ ದಿಕ್ಕಿನಲ್ಲಿ) ಯಾವುದೇ ವಾಹನ ನಿಲುಗಡೆಗೆ ಅವಕಾಶವಿಲ್ಲ.ಇದರ ಜೊತೆಗೆ ಸಿರೂರ್ ಪಾರ್ಕ್ ರಸ್ತೆ ಮತ್ತು ಸಂಪಿಗೆ ರಸ್ತೆ (ದಕ್ಷಿಣ ದಿಕ್ಕಿನಲ್ಲಿ) ನಡುವಿನ ಎಂಎಲ್‌ಎ ಕಚೇರಿ ರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶವಿರುವುದಿಲ್ಲ ಎಂದು ಬೆಂಗಳೂರು ಸಂಚಾರ ಪೊಲೀಸರು ಮಾಹಿತಿಯನ್ನು ತಿಳಿಸಿದ್ಧಾರೆ.
ಹೀಗಾಗಿ ಈ ಮಾರ್ಗದಲ್ಲಿ ಸಂಚಾರವನ್ನು ಮಾಡುವಾಗ ರಸ್ತೆ ಬದಲಾವಣೆಯ ಮಾಹಿತಿಯನ್ನು ತಿಳಿದುಕೊಂಡು ನೀವು ಸಂಚಾರವನ್ನು ಮಾಡಿದ್ದರೆ ಸರಿಯಾದ ಸಮಯಕ್ಕೆ ನೀವು ತಲುಪಬಹುದಾದ ಸ್ಥಳಗಳನ್ನು ಬಹಬೇಗನೆ ರೀಚ್ ಆಗಬಹುದು ಸಮಯದ ಜೊತೆಗೆ ನಿಮ್ಮ ಇಂಧನ ಕೂಡ ಉಳಿತಾಯವಾಗುತ್ತದೆ.


Click it and Unblock the Notifications