ಆನ್ ಲೈನ್ ರೆಸ್ಟೋರೆಂಟ್ ಗೈಡ್ ಮತ್ತು ಫುಡ್ ಆರ್ಡರಿಂಗ್ ಪ್ಲಾಟ್ ಫಾರ್ಮ್ ಆದ ಝೊಮ್ಯಾಟೋದಲ್ಲಿ ಭಾರತದಲ್ಲಿ ಹೊಸ ವರ್ಷಕ್ಕೆ ಮುನ್ನಾ ದಿನ ಗ್ರಾಹಕರು ದಾಖಲೆ ಪ್ರಮಾಣದಲ್ಲಿ ಆರ್ಡರ್ ಮಾಡಿದ್ದಾರೆ. ಹೊಸ ವರ್ಷಕ್ಕೆ ಮುಂಚಿನ ದಿನ ಹಲವು ರಾಜ್ಯಗಳಲ್ಲಿ ಕೊರೊನಾ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ಹಾಕಲಾಗಿತ್ತು. ಈ ಕಾರಣಕ್ಕೆ ಹಿಂದೆಂದೂ ಕಂಡರಿಯದಷ್ಟು ಆರ್ಡರ್ ಅಂದರೆ, ಪ್ರತಿ ನಿಮಿಷಕ್ಕೆ 4000 ಆರ್ಡರ್ (OPM- ಆರ್ಡರ್ ಪರ್ ಮಿನಿಟ್) ಆಗಿದೆ.
ಝೊಮ್ಯಾಟೋದ ಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯೆಲ್ ಆಸಕ್ತಿಕರ ಸಂಖ್ಯೆಗಳನ್ನು ಟ್ವೀಟ್ ಮಾಡಿದ್ದಾರೆ. ರಾತ್ರಿ 7.53ರ ಹೊತ್ತಿಗೆ ಟ್ವೀಟ್ ಮಾಡಿ, ಈಗ 1.4 ಲಕ್ಷ ಆರ್ಡರ್ ಬರುತ್ತಿದೆ. 20 ಸಾವಿರ ಬಿರಿಯಾನಿ, 16 ಸಾವಿರ ಪಿಜ್ಜಾ - ಅದರಲ್ಲಿ 40% ಹೆಚ್ಚು ಚೀಸ್ ಪಿಜ್ಜಾಗೆ ಆರ್ಡರ್ ಇದೆ ಎಂದಿದ್ದಾರೆ.
ಅಷ್ಟೇ ಅಲ್ಲ, ಭಾರತದ ಹೊರಗೆ ಇರುವವರು, ಯುಎಇ, ಲೆಬನಾನ್, ಟರ್ಕಿಯಿಂದಲೂ ಜನರು ಭಾರತದಲ್ಲಿ ಇರುವವರಿಗಾಗಿ ಆರ್ಡರ್ ಮಾಡುತ್ತಿದ್ದಾರೆ ಎಂದಿದ್ದಾರೆ.

ಇನ್ನು ಸಂಜೆ 6.14ಕ್ಕೆ ಪ್ರತಿ ನಿಮಿಷಕ್ಕೆ 2500 ಆರ್ಡರ್ ನಂತೆ ಆರಂಭವಾದದ್ದು ರಾತ್ರಿ 8.22ರ ಹೊತ್ತಿಗೆ ನಿಮಿಷಕ್ಕೆ 4100 ಆರ್ಡರ್ ನಂತೆ ಗರಿಷ್ಠ ಮಟ್ಟ ತಲುಪಿತ್ತು ಎಂದು ಅಂಕಿ- ಅಂಶವನ್ನು ತೆರೆದಿಟ್ಟಿದ್ದಾರೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ 66 ಕೋಟಿ ಅಮೆರಿಕನ್ ಡಾಲರ್ ನೊಂದಿಗೆ ಹಣ ಸಂಗ್ರಹದ ಗುರಿ ಮುಗಿಸಿದೆ ಝೊಮ್ಯಾಟೋ. ಆ ನಂತರ ಅದರ ಮೌಲ್ಯ 360 ಕೋಟಿ ಅಮೆರಿಕನ್ ಡಾಲರ್ ಆಗಿದೆ.


Click it and Unblock the Notifications