For Quick Alerts
ALLOW NOTIFICATIONS  
For Daily Alerts

ನಿಫ್ಟಿ 15,000 ಪಾಯಿಂಟ್, ಸೆನ್ಸೆಕ್ಸ್ 51,000 ಪಾಯಿಂಟ್ ಮೀರಿ ಹೊಸ ದಾಖಲೆ

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ನಿಫ್ಟಿ ಇದೇ ಮೊದಲ ಬಾರಿಗೆ 15,000 ಪಾಯಿಂಟ್ ಗಡಿ ದಾಟಿತು. ಇತ್ತ ಸೆನ್ಸೆಕ್ಸ್ ಕೂಡ 51,000 ಪಾಯಿಂಟ್ ಮೀರಿ ನಿಂತಿತು. ಶುಕ್ರವಾರದ (ಫೆಬ್ರವರಿ 5, 2021) ಬೆಳಗ್ಗೆ ವಹಿವಾಟಿನಲ್ಲಿ ಎರಡೂ ಸೂಚ್ಯಂಕಗಳು ಈ ದಾಖಲೆಯನ್ನು ಮಾಡಿದವು. ಆದರೆ ಆ ನಂತರ ಸೆನ್ಸೆಕ್ಸ್ ಮತ್ತು ನಿಫ್ಟಿ ಅದೇ ಮಟ್ಟವನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ.

ಸೆನ್ಸೆಕ್ಸ್ ಸೂಚ್ಯಂಕ ದಿನದ ಗರಿಷ್ಠ ಮಟ್ಟವಾದ 51,073.27 ಪಾಯಿಂಟ್ ತಲುಪಿದ್ದರೆ, ಈ ವರದಿ ಮಾಡುವ ಹೊತ್ತಿಗೆ 50,833.78 ಪಾಯಿಂಟ್ ನಲ್ಲಿ ವಹಿವಾಟು ನಡೆಸುತ್ತಿತ್ತು. ಅದೇ ರೀತಿ ನಿಫ್ಟಿ ಸೂಚ್ಯಂಕವು ದಿನದ ಗರಿಷ್ಠ ಮಟ್ಟ 15,014.65 ಪಾಯಿಂಟ್ ಮುಟ್ಟಿದ ನಂತರ, ಕೆಳಗೆ ಇಳಿದು 14,948 ಪಾಯಿಂಟ್ ನಲ್ಲಿ ವ್ಯವಹಾರ ಮಾಡುತ್ತಿತ್ತು.

ಷೇರು ಮಾರ್ಕೆಟ್ ಹೂಡಿಕೆಗೆ ಸೂಕ್ತವಲ್ಲದ ಷೇರು ಮಾರ್ಕೆಟ್ ಹೂಡಿಕೆಗೆ ಸೂಕ್ತವಲ್ಲದ "ಮನಸ್ಥಿತಿಯವರು" ಇವರು

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಶುಕ್ರವಾರ ಹಣಕಾಸು ನೀತಿ ಘೋಷಣೆ ಆಗಲಿದ್ದು, ಆ ಹಿನ್ನೆಲೆಯಲ್ಲಿ ಸೂಚ್ಯಂಕಗಳು ಏರಿಕೆ ಕಂಡಿವೆ. ಇನ್ನು ಎಸ್ ಬಿಐ ಷೇರು 13% ಮೇಲೇರಿತ್ತು.

ನಿಫ್ಟಿಯಲ್ಲಿ ಏರಿಕೆ ಕಂಡ ಟಾಪ್ 5 ಷೇರುಗಳು
ಎಸ್ ಬಿಐ

ಕೊಟಕ್ ಮಹೀಂದ್ರಾ

ಇಂಡಸ್ ಇಂಡ್ ಬ್ಯಾಂಕ್

ಆಕ್ಸಿಸ್ ಬ್ಯಾಂಕ್

ಎಚ್ ಡಿಎಫ್ ಸಿ ಬ್ಯಾಂಕ್

ನಿಫ್ಟಿ 15,000 ಪಾಯಿಂಟ್, ಸೆನ್ಸೆಕ್ಸ್  51,000 ಪಾಯಿಂಟ್ ಮೀರಿ ದಾಖಲೆ

ನಿಫ್ಟಿಯಲ್ಲಿ ಇಳಿಕೆ ಕಂಡ ಟಾಪ್ 5 ಷೇರುಗಳು
ಭಾರ್ತಿ ಏರ್ ಟೆಲ್

ಟಾಟಾ ಮೋಟಾರ್ಸ್

ಕೋಲ್ ಇಂಡಿಯಾ

ಮಾರುತಿ ಸುಜುಕಿ

ಜೆಎಸ್ ಡಬ್ಲ್ಯು ಸ್ಟೀಲ್

English summary

Nifty Crosses 15,000 And Sensex 51,000 Points; Set A New Record On February 4, 2021

Indian stock market index nifty crosses 15,000 and sensex 51,000 points and set a new record on February 4, 2021 early session.
Story first published: Friday, February 5, 2021, 10:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X