ಜಾಗತಿಕ ಮಾರುಕಟ್ಟೆಯ ಸಕಾರಾತ್ಮಕ ಪ್ರಭಾವದಿಂದಾಗಿ ನಿಫ್ಟಿ ಗಳಿಕೆ ಮುಂದುವರಿದಿದೆ. ಫೆಬ್ರವರಿ ತಿಂಗಳ ನಂತರ ಮೊದಲ ಬಾರಿ ಶುಕ್ರವಾರದಂದು (ನವೆಂಬರ್ 6, 2020) 12 ಸಾವಿರ ಪಾಯಿಂಟ್ ಗಳ ಗಡಿ ದಾಟಿದೆ ನಿಫ್ಟಿ. ಅಂದ ಹಾಗೆ ನಿಫ್ಟಿ 120 ಪಾಯಿಂಟ್ ಗಳ ಹೆಚ್ಚಳ ಕಂಡು, 12,240.35 ಪಾಯಿಂಟ್ ನಲ್ಲಿ ವ್ಯವಹರಿಸುತ್ತಿದೆ. ಇನ್ನು ಸೆನ್ಸೆಕ್ಸ್ 466.07 ಪಾಯಿಂಟ್ ಏರಿಕೆ ಕಂಡು, 41806ರಲ್ಲಿ ಇದೆ.
ನಿಫ್ಟಿ ಸೂಚ್ಯಂಕವು ಕೊನೆಯದಾಗಿ ಫೆಬ್ರವರಿ 20, 2020ರಂದು 12 ಸಾವಿರ ಪಾಯಿಂಟ್ ಗಳ ಗಡಿ ದಾಟಿತ್ತು. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಾರ್ಚ್ 23, 2020ರಂದು ಜಾಗತಿಕ ಮಾರುಕಟ್ಟೆ ಕುಸಿತ ಕಂಡಾಗ, ನಿಫ್ಟಿ ಸೂಚ್ಯಂಕವು 7583 ಪಾಯಿಂಟ್ ತಲುಪಿತ್ತು. ಆ ನಂತರ ಮಾರ್ಕೆಟ್ ಅರವತ್ತು ಪರ್ಸೆಂಟ್ ನಷ್ಟು ಹೆಚ್ಚಳ ಕಂಡಿದೆ.
ಯುಎಸ್ ಫೆಡರಲ್ ರಿಸರ್ವ್ ತನ್ನ ಎರಡು ದಿನಗಳ ಎಫ್ ಒಎಂಸಿ ಸಭೆಯಲ್ಲಿ ಸಡಿಲ ಹಣಕಾಸು ನೀತಿಯನ್ನು ಮುಂದುವರಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್ ಇಂದಿನ ಟಾಪ್ ಗೇಯ್ನರ್ ಆಗಿದೆ. ಬಜಾಜ್ ಫೈನಾನ್ಸ್ ಸರ್ವೀಸ್, ಎಚ್ ಡಿಎಫ್ ಸಿ ಕೂಡ ಏರಿಕೆ ಕಂಡಿವೆ. ಟಾಟಾ ಮೋಟಾರ್ಸ್, ಬಜಾಜ್ ಆಟೋ, ಮಹೀಂದ್ರಾ ಅಂಡ್ ಮಹೀಂದ್ರಾ, ಟೈಟಾನ್ ಕಂಪೆನಿ ಷೇರುಗಳು ಹೆಚ್ಚಳ ದಾಖಲಿಸಿವೆ.

ಪವರ್ ಗ್ರಿಡ್, ಡಾ. ರೆಡ್ಡೀಸ್ ಲ್ಯಾಬ್, ಕೊಟಕ್ ಮಹೀಂದ್ರಾ, ನೆಸ್ಟ್ಲೆ, ಆಕ್ಸಿಸ್ ಬ್ಯಾಂಕ್ ಷೇರುಗಳು ಕುಸಿತ ಕಂಡಿವೆ.


Click it and Unblock the Notifications