ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಬುಧವಾರ (ಆಗಸ್ಟ್ 26, 2020) ಏರಿಕೆ ದಾಖಲಿಸಿವೆ. ಸೆನ್ಸೆಕ್ಸ್ 230.04 ಪಾಯಿಂಟ್ ಗಳ ಏರಿಕೆ ಕಂಡು, ದಿನಾಂತ್ಯಕ್ಕೆ 39,073.92 ಅಂಶದೊಂದಿಗೆ ವ್ಯವಹಾರ ಚುಕ್ತಾ ಮಾಡಿದೆ. ಇನ್ನು ನಿಫ್ಟಿ 77.35 ಅಂಶಗಳ ಏರಿಕೆಯೊಂದಿಗೆ ದಿನದ ಕೊನೆಗೆ 11,549.60 ಅಂಶಗಳ ಜತೆ ವಹಿವಾಟು ಕೊನೆ ಮಾಡಿದೆ.
ನಿಫ್ಟಿ ಸೂಚ್ಯಂಕ 11,500 ಪಾಯಿಂಟ್ ಗಿಂತ ಮೇಲೆ ಹಾಗೂ ಸೆನ್ಸೆಕ್ಸ್ 40 ಸಾವಿರ ಪಾಯಿಂಟ್ ಗೆ ಸಮೀಪದಲ್ಲಿ ದಿನದ ವ್ಯವಹಾರ ಮುಗಿಸಲು ಕೊನೆಯ ಒಂದು ಗಂಟೆಯಲ್ಲಿ ನಡೆದ ಚಟುವಟಿಕೆ ಸಹಾಯ ಮಾಡಿದೆ. ಒಟ್ಟು 1528 ಕಂಪೆನಿಯ ಷೇರುಗಳು ಏರಿಕೆ ಕಂಡಿದ್ದರೆ, 1105 ಕಂಪೆನಿಯ ಷೇರುಗಳು ಇಳಿದಿವೆ. 124 ಕಂಪೆನಿಯ ಷೇರುಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ವಾಹನ, ಬ್ಯಾಂಕ್, ಎನರ್ಜಿ ಲೋಹ ಹಾಗೂ ಐಟಿ ವಲಯದಲ್ಲಿ ಖರೀದಿ ಚಟುವಟಿಕೆ ಕಂಡುಬಂದಿದೆ.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು
ಟಾಟಾ ಮೋಟಾರ್ಸ್
ಹೀರೋ ಮೋಟೋ ಕಾರ್ಪ್ಯಥೋಸ್
ಇಂಡಸ್ ಇಂಡ್ ಬ್ಯಾಂಕ್
ಜೀ ಎಂಟರ್ ಟೇನ್ ಮೆಂಟ್
ರಿಲಯನ್ಸ್ ಇಂಡಸ್ಟ್ರೀಸ್
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು
ಭಾರ್ತಿ ಏರ್ ಟೆಲ್
ಅಲ್ಟ್ರಾಟೆಕ್ ಸಿಮೆಂಟ್
ಬ್ರಿಟಾನಿಯಾ ಇಂಡಸ್ಟ್ರೀಸ್
ಏಷ್ಯನ್ ಪೇಂಟ್ಸ್
ಮಾರುತಿ ಸುಜುಕಿ


Click it and Unblock the Notifications