ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಹೊಸ ವರ್ಷ, 2021ರ ಮೊದಲ ದಿನ, ಜನವರಿ 1ನೇ ತಾರೀಕು ಗಳಿಕೆಯೊಂದಿಗೆ ಶುಭಾರಂಭ ಮಾಡಿವೆ. ಅಷ್ಟೇ ಅಲ್ಲ, ದಿನಾಂತ್ಯದ ಲೆಕ್ಕದಲ್ಲಿ ಗರಿಷ್ಠ ಮಟ್ಟದಲ್ಲೇ ವಹಿವಾಟು ಮುಕ್ತಾಯ ಮಾಡಿವೆ. ಸೆನ್ಸೆಕ್ಸ್ ಸೂಚ್ಯಂಕ 117.65 ಪಾಯಿಂಟ್ಸ್ ಮೇಲೇರಿ, 47,868.98 ಪಾಯಿಂಟ್ ನೊಂದಿಗೆ ದಿನಾಂತ್ಯದ ವ್ಯವಹಾರ ಕೊನೆಗೊಳಿಸಿದರೆ, ನಿಫ್ಟಿ 36.70 ಪಾಯಿಂಟ್ ಗಳಿಕೆ ಕಂಡು, 14,018.50 ಪಾಯಿಂಟ್ ನಲ್ಲಿ ವಹಿವಾಟು ಚುಕ್ತಾ ಮಾಡಿದೆ.
ಈ ಮೂಲಕ ಎರಡೂ ಸೂಚ್ಯಂಕಗಳು ಸತತ ಎಂಟನೇ ದಿನ ಏರಿಕೆಯನ್ನು ಕಂಡಂತಾಗಿದೆ. 1998 ಕಂಪೆನಿಯ ಷೇರುಗಳು ಈ ದಿನ ಏರಿಕೆಯನ್ನು ಕಂಡರೆ, 940 ಕಂಪೆನಿಯ ಷೇರುಗಳು ಇಳಿಕೆ ದಾಖಲಿಸಿದವು. ಇನ್ನು 163 ಕಂಪೆನಿಯ ಷೇರುಗಳಲ್ಲಿ ಯಾವುದೇ ಬದಲಾವಣೆ ಕಂಡುಬರಲಿಲ್ಲ.
ನಿಫ್ಟಿ ಬ್ಯಾಂಕ್ ಹೊರತುಪಡಿಸಿ, ಉಳಿದ ವಲಯದ ಸೂಚ್ಯಂಕಗಳು ಏರಿಕೆಯಲ್ಲೇ ದಿನಾಂತ್ಯದ ವಹಿವಾಟು ಮುಗಿಸಿಕೊಂಡವು. ಸಾರ್ವಜನಿಕ ವಲಯದ ಬ್ಯಾಂಕ್ ಗಳು ಮತ್ತು ವಾಹನ ವಲಯ ಷೇರುಗಳು ಗಳಿಕೆ ಮುಂಚೂಣಿಯಲ್ಲಿ ಇದ್ದವು. ಬಿಎಸ್ ಇ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು 0.9ರಿಂದ 1.2 ಪರ್ಸೆಂಟ್ ಹೆಚ್ಚಳವಾದವು.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು
ಅದಾನಿ ಪೋರ್ಟ್ಸ್
ಐಟಿಸಿ
ಟಿಸಿಎಸ್
ಮಹೀಂದ್ರಾ ಅಂಡ್ ಮಹೀಂದ್ರಾ
ಎಸ್ ಬಿಐ

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು
ಐಸಿಐಸಿಐ ಬ್ಯಾಂಕ್
ಎಸ್ ಬಿಐ ಲೈಫ್ ಇನ್ಷೂರೆನ್ಸ್
ಹಿಂಡಾಲ್ಕೋ
ಎಚ್ ಡಿಎಫ್ ಸಿ ಬ್ಯಾಂಕ್
ಟೈಟಾನ್ ಕಂಪೆನಿ


Click it and Unblock the Notifications