ಯುಎಸ್ ಷೇರುಗಳಲ್ಲಿ ಸೋಮವಾರ ರಾತ್ರೋರಾತ್ರಿ ಕಂಡ ಏರಿಕೆ ಹಾಗೂ ಕೊರೊನಾ ಲಸಿಕೆ ಭರವಸೆ ಹಿನ್ನೆಲೆಯಲ್ಲಿ ಏಷ್ಯನ್ ಮಾರುಕಟ್ಟೆಗಳ ಏರಿಕೆಗಳ ಕಾರಣಕ್ಕೆ ಮಂಗಳವಾರದಂದು (ನವೆಂಬರ್ 10, 2020) ಭಾರತದ ಮಾರುಕಟ್ಟೆಗಳು ಸಹ ಏರಬಹುದು ಎಂಬ ನಿರೀಕ್ಷೆ ಇತ್ತು.
ಆ ನಿರೀಕ್ಷೆಯಂತೆಯೇ ಮಂಗಳವಾರ ಬೆಳಗಿನ ವಹಿವಾಟಿನಲ್ಲಿ ನಿಫ್ಟಿ ಸೂಚ್ಯಂಕವು 12500 ಪಾಯಿಂಟ್ ಮೇಲ್ಪಟ್ಟು ವ್ಯವಹರಿಸಿದರೆ, ಸೆನ್ಸೆಕ್ಸ್ 134 ಪಾಯಿಂಟ್ ಏರಿ, 42731.69 ಪಾಯಿಂಟ್ ನಲ್ಲಿ ವ್ಯವಹಾರ ನಡೆಸಿದೆ.
ನಿಫ್ಟಿ ಬ್ಯಾಂಕ್ 1.72% ಹೆಚ್ಚಳವಾಗಿದೆ. ಕಳೆದ ಕೆಲವು ದಿನಗಳಿಂದ ಬ್ಯಾಂಕ್ ಷೇರುಗಳು ಸೂಚ್ಯಂಕಗಳಿಗೆ ಕೊಡುಗೆ ನೀಡುತ್ತಾ ಬಂದಿವೆ. CARE ವರದಿ ಪ್ರಕಾರ, ನಿರೀಕ್ಷೆಯ ವಿರುದ್ಧವಾಗಿ GNPAs ರೇಷಿಯೋ ಬ್ಯಾಂಕ್ ಗಳಲ್ಲಿ ಸೆಪ್ಟೆಂಬರ್ ಕೊನೆಗೆ 7.7 ಪರ್ಸೆಂಟ್ ಗೆ ಇಳಿಕೆ ಆಗಿದೆ.. ಜೂನ್ ನಲ್ಲಿ ಇದು 8.2 ಪರ್ಸೆಂಟ್ ಇದ್ದದ್ದು ಮತ್ತು 2020ರ ಮಾರ್ಚ್ ತ್ರೈಮಾಸಿಕದ ಕೊನೆಗೆ 7.9 ಪರ್ಸೆಂಟ್ ಇತ್ತು.

PIFನಿಂದ ರು. 9555 ಕೋಟಿ ರುಪಾಯಿ ಹೂಡಿಕೆ ಬರುವ ಹಿನ್ನೆಲೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಸೂಚ್ಯಂಕವನ್ನು ಎತ್ತರಕ್ಕೆ ಒಯ್ದಿತು. ರಿಲಯನ್ಸ್ ಅಂಗಸಂಸ್ಥೆಯಲ್ಲಿ ಹೂಡಿಕೆ ಬಂದಿದ್ದರಿಂದ ರಿಲಯನ್ಸ್ ಷೇರಿನ ಬೆಲೆಯಲ್ಲಿ 1% ಗೂ ಹೆಚ್ಚು ಏರಿಕೆ ಕಂಡು, ರು. 2075.5 ದಿನದ ಗರಿಷ್ಠ ಮಟ್ಟ ತಲುಪಿತು.
Pfizer ಷೇರು ಕೂಡ 20% ಹೆಚ್ಚಳ ಕಂಡು, ದಿನದ ಗರಿಷ್ಠ ಮಟ್ಟವಾದ ರು. 5900 ತಲುಪಿತ್ತು. ಆದರೆ ನಂತರ ಗಳಿಕೆಯನ್ನು ಬಿಟ್ಟುಕೊಟ್ಟಿತು. ಕಂಪೆನಿಯು ಸೋಮವಾರ ಘೋಷಣೆ ಮಾಡಿದ ಪ್ರಕಾರ, ಕೊರೊನಾ ತಡೆ ಲಸಿಕೆ ಶೇಕಡಾ 90ರಷ್ಟು ಪರಿಣಾಮಕಾರಿ ಎಂದಾದ ಮೇಲೆ ಈ ಬೆಳವಣಿಗೆ ಆಗಿದೆ.
ದಾಯಿಶ್ ಬ್ಯಾಂಕ್ ನಿಂದ ಖರೀದಿ ಸುದ್ದಿ ಮಾಡುತ್ತದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ TCS ಷೇರುಗಳು 2% ಇಳಿಕೆಯಲ್ಲಿ ವಹಿವಾಟು ನಡೆಸಿದೆ.
ಬೈಬ್ಯಾಕ್ ಸುದ್ದಿಯ ಕಾರಣಕ್ಕ್ ಕೋಲ್ ಇಂಡಿಯಾ ಷೇರುಗಳು ಇಳಿಕೆ ಕಂಡಿವೆ. ಏಕೆಂದರೆ ಈಗಿನ ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ದರ ಘೋಷಿಸುವ ಸುದ್ದಿ ಇದೆ. ಕಳೆದ ಕೆಲವು ಸಮಯದಿಂದಲೇ ಪಿಎಸ್ ಯು ವಲಯದ ಗಣಿಗಾರಿಕೆ ಹಾಗೂ ಖನಿಜ ಕ್ಷೇತ್ರಕ್ಕೆ ಸಂಬಂಧಿಸಿದ ಷೇರುಗಳು ಇಳಿಜಾರಿನ ಹಾದಿಯಲ್ಲಿವೆ.


Click it and Unblock the Notifications