ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ 9 ಕಂಪನಿಗಳಿಂದ ಒಟ್ಟಾರೆ 1,47,360.93 ಕೋಟಿ ರು ಮೌಲ್ಯ ನಷ್ಟವಾಗಿದೆ. ಕಳೆದ ವಾರದಲ್ಲಿ ಒಟ್ಟಾರೆ 9 ಕಂಪನಿಗಳು ನಷ್ಟ ಅನುಭವಿಸಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಅತ್ಯಧಿಕ ನಷ್ಟ ಅನುಭವಿಸಿವೆ.
ಬಿಎಸ್ಇಯಲ್ಲಿ 30 ಷೇರುಗಳು ಸೆನ್ಸೆಕ್ಸ್ 1,050.68 ಅಂಕ ಅಥವಾ ಶೇ 1.73 ರಷ್ಟು ಇಳಿಕೆ ಕಂಡಿತ್ತು. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಹೆಚ್ಚು ಕಂಪನಿ ಮೌಲ್ಯ ಕಳೆದುಕೊಂಡಿವೆ. ಟಾಪ್ 10 ರಲ್ಲಿ 9 ಕಂಪನಿಗಳ ಮೌಲ್ಯ ಬದಲಾಗಿದೆ. ಹಬ್ಬದ ರಜೆಗಳಿಗೂ ಮುನ್ನ ಷೇರುಪೇಟೆಯಲ್ಲಿ ಹೆಚ್ಚು ವಹಿವಾಟು ಕಂಡು ಬಂದಿರಲಿಲ್ಲ.
ಶುಕ್ರವಾರದಂದು ಗುರು ನಾನಕ್ ಜಯಂತಿ ನಿಮಿತ್ತ ಷೇರುಪೇಟೆ ವಹಿವಾಟು ಬಂದ್ ಆಗಿತ್ತು. ಟಾಪ್ ಕಂಪನಿಗಳು ಭಾರಿ ನಷ್ಟ ಅನುಭವಿಸಿವೆ. ಇನ್ಫೋಸಿಸ್ ಮಾತ್ರ ಟಾಪ್ 10 ಪಟ್ಟಿಯಲ್ಲಿ ಲಾಭ ಗಳಿಸಿದ ಸಾಧನೆ ಮಾಡಿದೆ. ಕಳೆದ ವಾರ ಹೆಚ್ಚಿನ ಲಾಭವನ್ನು ಟಾಪ್ ಕಂಪನಿಗಳು ಕಂಡಿಲ್ಲ. ದಸರಾ, ದೀಪಾವಳಿ ಹಬ್ಬದ ರಜೆಗಳ ನಡುವೆ ಷೇರುಪೇಟೆಯಲ್ಲಿ ಹೆಚ್ಚು ವಹಿವಾಟು ಹೆಚ್ಚಾಗಿದ್ದರೂ ಟಾಪ್ ಕಂಪನಿಗಳು ಭಾರಿ ನಷ್ಟ ಅನುಭವಿಸಿವೆ. ಕಳೆದ ಎರಡು ವಾರಗಳಲ್ಲಿ ಐಪಿಒಗಳ ಭರಾಟೆ ಬೇರೆ ಹೆಚ್ಚಾಗಿದೆ. ಯಾವ ಕಂಪನಿ ಮೌಲ್ಯ ಏರಿಕೆಯಾಗಿದೆ ಹಾಗೂ ಯಾವ ಕಂಪನಿ ಮೌಲ್ಯ ಕುಸಿದಿದೆ ಎಂಬ ವಿವರ ಮುಂದೆ ಓದಿ..
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆ ಮೌಲ್ಯ
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆ ಮೌಲ್ಯ 75,961.53 ಕೋಟಿ ರು ಕುಸಿತ ಕಂಡು 15,68,550.17 ರು ಆಗಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) 18,069.87 ಕೋಟಿ ರು ಕುಸಿತ ಕಂಡು 12,85,660.79 ಕೋಟಿ ರು ಮೌಲ್ಯ ಕಂಡಿದೆ. ಎಚ್‌ಡಿಎಫ್‌ಸಿ 12,321.11 ಕೋಟಿ ರು ಮೌಲ್ಯ ಇಳಿಸಿಕೊಂಡು 5,29,236.66 ಕೋಟಿ ರು ತಲುಪಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಮೌಲ್ಯ 9,816.28 ಕೋಟಿ ರು ಇಳಿಕೆ ಕಂಡು 4,01,367.04 ಕೋಟಿ ರು ಮೌಲ್ಯಕ್ಕೇರಿದೆ.
ಐಸಿಐಸಿಸಿ ಬ್ಯಾಂಕ್ ಮೌಲ್ಯ
ಐಸಿಐಸಿಸಿ ಬ್ಯಾಂಕ್ ಮೌಲ್ಯ 9,409.46 ಕೋಟಿ ರು ಇಳಿಕೆ ಕಂಡು 5,29,606.94 ಕೋಟಿ ರು ಆಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ 7,904.08 ಕೋಟಿ ರು ಇಳಿಕೆ ಕಂಡು 8,52,532.36 ಕೋಟಿ ರು ತಲುಪಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 6,514.96 ಕೋಟಿ ರು ಇಳಿಸಿಕೊಂಡು 4,49,755.80 ಕೋಟಿ ರು ಮೌಲ್ಯಕ್ಕಿಳಿದಿದೆ. ಬಜಾಜ್ ಫೈನಾನ್ಸ್ 5,166.77 ಕೋಟಿ ರು ಇಳಿಸಿಕೊಂಡು 4,52,188.74 ಕೋಟಿ ರುಗೆ ಕುಸಿತ ಕಂಡಿದೆ.
ಇನ್ಫೋಸಿಸ್ ಮೌಲ್ಯ
ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ 2,196.87 ಕೋಟಿ ರು ಇಳಿಕೆ ಕಂಡು 5,63,349.75 ಕೋಟಿ ರು ಮೌಲ್ಯ ಉಳಿಸಿಕೊಂಡಿದೆ. ಇದೇ ವೇಳೆ ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ಕಳೆದ ಒಂದು ವಾರದಲ್ಲಿ 294.39 ಕೋಟಿ ರು ಮೌಲ್ಯ ಏರಿಸಿಕೊಂಡು 7,48,875.37 ಕೋಟಿ ರು ಮೌಲ್ಯ ಹೊಂದಿದೆ.
ಒಟ್ಟಾರೆ, ಟಾಪ್ 10 ಕಂಪನಿಗಳು
ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ, ಬಜಾಜ್ ಫೈನಾನ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್.


Click it and Unblock the Notifications