For Quick Alerts
ALLOW NOTIFICATIONS  
For Daily Alerts

ಕಳೆದ ವಾರ ಟಾಪ್ 10 ಸಂಸ್ಥೆ ಮೌಲ್ಯ: RIL ಹಾಗೂ ಇನ್ಫಿಗೆ ಭಾರಿ ಲಾಭ

|

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ 9 ಕಂಪನಿಗಳು ಒಟ್ಟಾರೆ 1,91,434.41ಕೋಟಿ ರು ಮೌಲ್ಯ ಏರಿಸಿಕೊಂಡಿವೆ. ಇದಕ್ಕೂ ಹಿಂದಿನ ವಾರದಲ್ಲಿ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ (ಟಿಸಿಎಸ್) ಹೆಚ್ಚು ಲಾಭಗಳಿಸಿತ್ತು. ರಷ್ಯಾ- ಉಕ್ರೇನ್ ಯುದ್ಧದ ನಡುವೆ ಜಾಗತಿಕ ಮಾರುಕಟ್ಟೆ ಏರಿಳಿತ ಕಾಣುತ್ತಿದ್ದು, ಇದರ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲಿ ಭಾರಿ ವ್ಯತ್ಯಾಸ ಕಂಡಿವೆ.

ಜಾಗತಿಕ ವಿದ್ಯಮಾನ, ವಿದೇಶಿ ಫಂಡ್ ಹರಿವು, ಬಜೆಟ್ ನಂತರದ ಬದಲಾವಣೆಗಳು ಹೆಚ್ಚಿನ ವಹಿವಾಟು ಕಾಣದಂತೆ ಮಾಡಿವೆ. ಕಳೆದ ವಾರ ಟಿಸಿಎಸ್, ಇನ್ಫೋಸಿಸ್ ಭಾರಿ ಲಾಭ ಗಳಿಸಿದರೆ, ಐಸಿಐಸಿಸಿ ಮಾತ್ರ ನಷ್ಟ ಅನುಭವಿಸಿದೆ.

ಕಳೆದ ವಾರ, ಬೆಂಚ್ಮಾರ್ಕ್ ಸೆನ್ಸೆಕ್ಸ್ 1,216.49 ಪಾಯಿಂಟ್ ಅಥವಾ 2.23 ರಷ್ಟು ಜಿಗಿದಿದೆ.

ಕೊರೊನಾವೈರಸ್ ಹೊಸ ರೂಪಾಂತರಿ ಅಲೆಯಿಂದ ಷೇರುಪೇಟೆ ವಹಿವಾಟು ಭಾರಿ ನಷ್ಟ ಅನುಭವಿಸಿದ್ದವು, ಟಾಪ್ ಕಂಪನಿಗಳು ಭಾರಿ ನಷ್ಟ ಅನುಭವಿಸಿದ್ದವು. ಯಾವ ಕಂಪನಿ ಮೌಲ್ಯ ಎಷ್ಟಾಗಿದೆ ಎಂಬ ವಿವರ ಮುಂದೆ ಓದಿ..

ಇನ್ಫೋಸಿಸ್  ಮೌಲ್ಯ

ಇನ್ಫೋಸಿಸ್ ಮೌಲ್ಯ

ದೇಶದ ಎರಡನೇ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ 41,533.59 ಕೋಟಿ ರು ಕುಸಿತ ಕಂಡು 7,66,447.27 ಕೋಟಿ ರು ತಲುಪಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆ ಮೌಲ್ಯ 49,492.7 ಕೋಟಿ ರು ಏರಿಕೆ ಕಂಡು 16,22,543.06 ಕೋಟಿ ರು ಆಗಿದೆ.

ಏರ್ ಟೆಲ್ ಸಂಸ್ಥೆ ಮೌಲ್ಯ

ಏರ್ ಟೆಲ್ ಸಂಸ್ಥೆ ಮೌಲ್ಯ

ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ 27,927.84 ಕೋಟಿ ರು ಸೇರಿಸಿಕೊಂಡು 13,31,917.43 ಕೋಟಿ ರು ಮೌಲ್ಯಕ್ಕೆ ಏರಿದೆ. ಭಾರ್ತಿ ಏರ್ ಟೆಲ್ ಸಂಸ್ಥೆ ಮೌಲ್ಯಗಳು 22,956.67 ಕೋಟಿ ರು ಏರಿಕೆಕಂಡು 3,81,586.05 ಕೋಟಿ ರುಗೆ ಇಳಿಕೆ ಕಂಡಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಮೌಲ್ಯ

ಎಚ್‌ಡಿಎಫ್‌ಸಿ ಬ್ಯಾಂಕ್ ಮೌಲ್ಯ

ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ 17,610.19 ಕೋಟಿ ರು ಏರಿಕೆ ಕಂಡು 4,92,204.13 ಕೋಟಿ ರು ಮೌಲ್ಯ ಉಳಿಸಿಕೊಂಡಿದೆ. ಇದೇ ವೇಳೆ ಎಚ್‌ಡಿಎಫ್‌ಸಿ ಬ್ಯಾಂಕ್ 16,853.02 ಕೋಟಿ ರು ಮೌಲ್ಯ ಏರಿಕೆ ಕಂಡು 7,74,463.18 ಕೋಟಿ ರು ತಲುಪಿದೆ.

ಇದೇ ವೇಳೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 7,541.3 ಕೋಟಿ ರು ಮೌಲ್ಯ ಏರಿಕೆ ಕಂಡು 4,19,813.73ಕೋಟಿ ರು ತಲುಪಿದೆ.

ಐಸಿಐಸಿಐ ಬ್ಯಾಂಕ್ ಮೌಲ್ಯ

ಐಸಿಐಸಿಐ ಬ್ಯಾಂಕ್ ಮೌಲ್ಯ

ಬಜಾಜ್ ಫೈನಾನ್ಸ್ 5,308.61 ಕೋಟಿ ರು ಏರಿಸಿಕೊಂಡು 4,00,014.04 ಕೋಟಿ ರುಗೆ ಏರಿಕೆ ಕಂಡಿದೆ. ಎಚ್‌ಡಿಎಫ್‌ಸಿ 2,210.49 ಕೋಟಿ ರು ಏರಿಕೆ ಕಂಡು 4,04,421.20 ಕೋಟಿ ರು ತಲುಪಿದೆ.

ಐಸಿಐಸಿಐ ಬ್ಯಾಂಕ್ 7,023.32 ಕೋಟಿ ರು ಇಳಿಕೆ ಕಂಡು 4,71,047.52ಕೋಟಿ ರು ತಲುಪಿದೆ.

ರಿಲಯನ್ಸ್

ರಿಲಯನ್ಸ್

ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ, ಬಜಾಜ್ ಫೈನಾನ್ಸ್ ಹಾಗೂ ಭಾರ್ತಿ ಏರ್ ಟೆಲ್

English summary

Nine Top Firms Gain Rs 1.91 Trn in M-Cap; RIL and Infosys Biggest Winners

Nine of the 10 most valued companies together added a whopping Rs 1,91,434.41 crore in market valuation last week, with Reliance Industries, Infosys and TCS emerging as the biggest gainers.
Story first published: Sunday, March 13, 2022, 15:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X