2020-21ನೇ ಸಾಲಿನ ಕೇಂದ್ರ ಬಜೆಟ್‌ನ ನಿರೀಕ್ಷೆಗಳು ದುಪ್ಪಟ್ಟಾಗಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿಯು ಸೂಟ್‌ಕೇಸ್ ಸಂಸ್ಕೃತಿಗೆ ಮುಂದಾಗದೆ ಸಾಂಪ್ರದಾಯಿಕ 'ಬಹಿ ಖಾತಾ' ( ಭಾರತದ ಲಾಂಚನ ಹೊಂದಿರುವ ಕೆಂಪು ಹೊದಿಕೆಯಲ್ಲಿರುವ ಬಜೆಟ್ ಪ್ರತಿ)ಯೊಂದಿಗೆ ಸಂಸತ್ತಿಗೆ ಆಗಮಿಸಿದ್ದಾರೆ.
ಪ್ರತಿ ಬಾರಿ ಬಜೆಟ್ ಮಂಡನೆ ಮಾಡುವಾಗ ಹಣಕಾಸು ಸಚಿವರು ತಮ್ಮ ಭಾಷಣವನ್ನು ಮಾಡಲು ತೆರಳುವ ಮುನ್ನ ಚರ್ಮದ (ಲೆದರ್) ಬ್ರೀಫ್‌ಕೇಸ್‌ನೊಂದಿಗೆ ಪೋಸ್ ನೀಡುತ್ತಾರೆ. ಈ ಸಂಪ್ರದಾಯವೂ ಕಳೆದ ಕೆಲವು ವರ್ಷಗಳದ್ದಾಗಿಲ್ಲ. ಈ ಸಂಪ್ರದಾಯದ ಮೂಲವು ಇಂಗ್ಲೆಂಡ್‌ನ 18ನೇ ಶತಮಾನಕ್ಕೆ ಸೇರಿದೆ.

ಆದರೆ, ನಿರ್ಮಲಾ ಸೀತಾರಾಮನ್ ಕಳೆದ ವರ್ಷದಂತೆ ಸೂಟ್‌ಕೇಸ್ ಸಂಸ್ಕೃತಿಗೆ ಗುಡ್‌ಬೈ ಹೇಳಿ 'ಬಹಿ ಖಾತಾ' ಹಿಡಿದುಕೊಂಡು ನಗು ಮುಖದೊಂದಿಗೆ ಸಂಸತ್ತು ಪ್ರವೇಶಿಸಿದರು.
ಭಾರತದಲ್ಲಿ ವಿವಿಧ ವರ್ಷಗಳಲ್ಲಿ ಹಣಕಾಸು ಮಂತ್ರಿಗಳು ಸ್ವಲ್ಪ ವಿಭಿನ್ನ ಬ್ರೀಫ್‌ಕೇಸ್ ಬಳಸಿದರು. ಯಶ್ವಂತ್ ಸಿಂಗ್ ಅವರ ಬ್ರೀಫ್‌ಕೇಸ್ ಬಕಲ್ ಮತ್ತು ಪಟ್ಟಿಗಳನ್ನು ಹೊಂದಿತ್ತು, ಆದರೆ ಮನಮೋಹನ್ ಸಿಂಗ್ ಗ್ಲ್ಯಾಡ್‌ಸ್ಟೋನ್ ಪೆಟ್ಟಿಗೆಯಂತೆಯೇ ಬ್ರೀಫ್‌ಕೇಸ್ ಅನ್ನು ಕಪ್ಪು ಬಣ್ಣದಲ್ಲಿ ಸಾಗಿಸಿದರು.
ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ಬ್ರಿಟಿಷರಂತೆಯೇ ಕಡುಗೆಂಪು ಚರ್ಮದ ಬ್ರೀಫ್‌ಕೇಸ್‌ನೊಂದಿಗೆ ಕಾಣಿಸಿಕೊಂಡರು. ಇನ್ನು ದಿವಂಗತ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು 2015 ರಲ್ಲಿ ಕಂದುಬಣ್ಣದ ಬ್ರೀಫ್ಕೇಸ್ ಅನ್ನು ಹೊಂದಿದ್ದರು. ಆದರೆ ಕಳೆದ ಬಾರಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಯಾವುದೇ ಬ್ರೀಫ್‌ಕೇಸ್ ಬಳಸದೇ ಹೊಸ ಅಧ್ಯಾಯ ಆರಂಭಿಸಿದರು.
More From GoodReturns

T20 World Cup: ಟಿ20 ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 96 ರನ್ಗಳ ಗೆಲುವು...ತಂಡಕ್ಕೆ ಸಿಕ್ಕ ಬಹುಮಾನಗಳೇನು?

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

Silver Rate Today: ಬೆಳ್ಳಿ ದರಕ್ಕೂ ತಟ್ಟಿದ ಇಸ್ರೇಲ್-ಇರಾನ್ ವಾರ್ ಬಿಸಿ! ಬೆಲೆ ಭಾರೀ ಏರಿಕೆ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Gold Guidelines: ಭಾರತದಲ್ಲಿ ಚಿನ್ನಾಭರಣ ಎಷ್ಟು ಇಟ್ಟುಕೊಳ್ಳಬಹುದು? ಕಾನೂನಾತ್ಮಕವಾಗಿ ನಿರ್ವಹಿಸುವುದು ಹೇಗೆ ತಿಳಿಯಿರ

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ



Click it and Unblock the Notifications