ನಿರಂತರವಾಗಿ ಏರುತ್ತಲೇ ಸಾಗಿದ್ದ ಐಆರ್ ಸಿಟಿಸಿ ಷೇರು ಬೆಲೆಯಲ್ಲಿ 39 ಪರ್ಸೆಂಟ್ ಇಳಿಕೆಯಾಗಿದೆ. ಇತ್ತೀಚೆಗಷ್ಟೇ ಐಆರ್ ಸಿಟಿಸಿ ವಾರ್ಷಿಕ ಗರಿಷ್ಠ ಮಟ್ಟ ತಲುಪಿತ್ತು. ಷೇರು ಮಾರುಕಟ್ಟೆಯಲ್ಲಿನ ಕೊರೊನಾ ಆತಂಕವಿದ್ದು, ಹೂಡಿಕೆದಾರರಿಗೆ ಈ ಷೇರಿನ ಬಗ್ಗೆ ಮೊದಲಿನ ಆಕರ್ಷಣೆ ಇಲ್ಲ. ಅದೇ ಕಾರಣದಿಂದಲೋ ಏನೋ ಗುರುವಾರದಂದು ಒಂದೇ ಒಂದು 'ಖರೀದಿ' ಆರ್ಡರ್ ಕೂಡ ಬಂದಿಲ್ಲ.
ಸರ್ಕಾರಿ ಸ್ವಾಮ್ಯದ ಐಆರ್ ಸಿಟಿಸಿ ಷೇರು 1221.10ಗೆ ಕುಸಿದಿದೆ. ಫೆಬ್ರವರಿ 25ನೇ ತಾರೀಕಷ್ಟೇ ಈ ಷೇರು ವಾರ್ಷಿಕ ಗರಿಷ್ಠ ಮಟ್ಟವಾದ 1994 ರುಪಾಯಿ ತಲುಪಿತ್ತು. ಕೇವಲ 10 ಟ್ರೇಡಿಂಗ್ ನಲ್ಲೇ ಈ ಪರಿ ಇಳಿಕೆ ಕಂಡಿದೆ. ಗುರುವಾರ ಮಧ್ಯಾಹ್ನದ ಹೊತ್ತಿಗೆ ಈ ಷೇರಿಗೆ 2.5 ಲಕ್ಷ 'ಮಾರಾಟ'ದ ಆರ್ಡರ್ ಹಾಕಲಾಗಿತ್ತು. ಆದರೆ ಒಂದೇ ಒಂದು ಖರೀದಿ ಆರ್ಡರ್ ಇರಲಿಲ್ಲ.
ಕೊರೊನಾದ ಕಾರಣಕ್ಕೆ ಭಾರತದಲ್ಲಿ ಪ್ರವಾಸಿಗರ ಎಲ್ಲ ಷೆಡ್ಯೂಲ್ ರದ್ದು ಮಾಡಲಾಗುತ್ತಿದೆ. ಇದರಿಂದ ಭಾರತೀಯ ಕಂಪೆನಿಗಳಿಗೆ ಭಾರೀ ನಷ್ಟವಾಗಬಹುದು ಎಂಬ ಅಂದಾಜಿದೆ. ಇಂಡಿಗೋ ಏರ್ ಲೈನ್ಸ್ ಬುಧವಾರ ನೀಡಿರುವ ಮಾಹಿತಿ ಪ್ರಕಾರ, ಕಳೆದ ಕೆಲ ದಿನಗಳಲ್ಲಿ ಹದಿನೈದರಿಂದ ಇಪ್ಪತ್ತು ಪರ್ಸೆಂಟ್ ನಷ್ಟು ಬುಕ್ಕಿಂಗ್ ನಲ್ಲಿ ಇಳಿಕೆ ಆಗಿದೆ. ಇದರಿಂದ ತ್ರೈಮಾಸಿಕ ಗಳಿಕೆ ಮೇಲೆ ಭಾರೀ ಪ್ರಭಾವ ಆಗಲಿದೆ ಎಂದು ತಿಳಿಸಿದೆ.

ಭಾರತದ ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಆಗುವುದರಿಂದ ಐಆರ್ ಸಿಟಿಸಿ ಲಾಭದ ಮೇಲೂ ಪ್ರಭಾವ ಆಗಲಿದೆ. ಭಾರತದಲ್ಲಿ ಒಟ್ಟಾರೆ ಕೊರೊನಾ ಪ್ರಕರಣಗಳ ಸಂಖ್ಯೆ 73 ತಲುಪಿದೆ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications