ನವದೆಹಲಿ, ಜೂನ್ 27: ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಬಗ್ಗೆ ಎದ್ದಿರುವ ಊಹಾಪೋಹ ಸುದ್ದಿಗೆ ವಿತ್ತ ಸಚಿವಾಲಯ ಸ್ಪಷ್ಟನೆ ನೀಡಿದೆ. ಡಿಎ ಹೆಚ್ಚಳ, ಡಿಆರ್ ಬದಲಾವಣೆ ಬಗ್ಗೆ ಕೇಂದ್ರ ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ ಹೊರ ಬಂದಿಲ್ಲ, ಸಾಮಾಜಿಕ ಜಾಲ ತಾಣಗಳಲ್ಲಿ ಬಂದಿರುವ ವರದಿಗಳೂ ಸತ್ಯಕ್ಕೆ ದೂರವಾಗಿದೆ ಎಂದು ವಿತ್ತ ಸಚಿವಾಲಯ ಸ್ಪಷ್ಟಪಡಿಸಿದೆ.
ಜುಲೈ 2021ರಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಮತ್ತೊಮ್ಮೆ ಆರಂಭಿಸಲಾಗುತ್ತಿದ್ದು, ಪಿಂಚಣಿದಾರರಿಗೆ ತುಟ್ಟಿ ಪರಿಹಾರ ಸಿಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ದಾಖಲೆಯೊಂದು ಹರಿದಾಡುತ್ತಿದೆ. ಈ ಕುರಿತಂತೆ ವರದಿಗಳಲ್ಲಿರುವ ಜ್ಞಾಪನಾ ಪತ್ರ ನಕಲಿಯಾಗಿದ್ದು, ಕೇಂದ್ರ ಸರ್ಕಾರರಿಂದ ಯಾವುದೇ Office memorandum ನೀಡಿಲ್ಲ ಎಂದು ವಿತ್ತ ಸಚಿವಾಲಯ ಹೇಳಿದೆ.

ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ವಿತ್ತ ಸಚಿವಾಲಯ ಮಹತ್ವದ ತೀರ್ಮಾನ ಕೈಗೊಂಡಿದ್ದು, ಕೋವಿಡ್ 19 ಸಾಂಕ್ರಾಮಿಕದ ಕಾರಣದಿಂದ ತುಟ್ಟಿಭತ್ಯೆಯನ್ನು ಜೂನ್ 30, 2021ರ ತನಕ ತಡೆ ಹಿಡಿಯಲಾಗಿತ್ತು. ಇದರಿಂದ 50 ಲಕ್ಷ ಕೇಂದ್ರ ಸರ್ಕಾರಿ ಸಿಬ್ಬಂದಿ ಹಾಗೂ 61 ಲಕ್ಷ ಪಿಂಚಣಿದಾರರಿಗೆ ಇದು ಅನ್ವಯವಾಗಿದೆ. ಇದರ ಜೊತೆಗೆ ಜನವರಿ 1, 2021ರಿಂದ ಅನ್ವಯವಾಗುವಂತೆ ತುಟ್ಟಿಭತ್ಯೆ ಪರಿಹಾರ (ಡಿಆರ್) ಕೂಡಾ ತಡೆ ಹಿಡಿಯಲಾಗಿತ್ತು. ಡಿಎ, ಡಿಆರ್ ತಡೆದಿದ್ದರಿಂದ ಸರ್ಕಾರಕ್ಕೆ ಒಟ್ಟಾರೆ, 37,530.08 ಕೋಟಿ ರು ಉಳಿತಾಯವಾಗಲಿದೆ ಎಂದು ಹೇಳಿದರು
ಸದ್ಯದ ಮಾಹಿತಿಯಂತೆ ಡಿಎ ಶೇ 17ರಿಂದ ಶೇ 28ಕ್ಕೇರಿಕೆಯಾಗಿದೆ. ಜನವರಿ 1 (4%), ಜುಲೈ 1 2020(3%) ಹಾಗೂ ಜನವರಿ 1, 2021 (4%) ಗೆ ಮೂರು ಬಾರಿ ಏರಿಕೆಯಾಗಿ ಶೇ 25ಕ್ಕೇರಿದೆ. ಜುಲೈ 1, 2021ಕ್ಕೆ ಪರಿಷ್ಕರಣೆಗೊಳ್ಳಲಿದೆ. ಆದರೆ, 18 ತಿಂಗಳ ಬಾಕಿ ಮೊತ್ತ ಸಿಗುವುದಿಲ್ಲ.


Click it and Unblock the Notifications