For Quick Alerts
ALLOW NOTIFICATIONS  
For Daily Alerts

ಸಾರ್ವಜನಿಕ ಬ್ಯಾಂಕ್ ಗಳ ಸೇವಾ ಶುಲ್ಕ ಹೆಚ್ಚಿಸುವುದಿಲ್ಲ ಎಂದ ಕೇಂದ್ರ ಸರ್ಕಾರ

|

ಸಾರ್ವಜನಿಕ ಸ್ವಾಮ್ಯದ ಯಾವುದೇ ಬ್ಯಾಂಕ್ ನಿಂದ ಸೇವಾ ಶುಲ್ಕಗಳನ್ನು ಹೆಚ್ಚಳ ಮಾಡುವುದಿಲ್ಲ ಎಂದು ಹಣಕಾಸು ಸಚಿವಾಲಯ ಮಂಗಳವಾರ ತಿಳಿಸಿದೆ. ಬ್ಯಾಂಕ್ ಆಫ್ ಬರೋಡಾ ಕೂಡ ಪ್ರತಿ ತಿಂಗಳು ನಗದು ಡೆಪಾಸಿಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಹಾಕಲು ತೀರ್ಮಾನಿಸಿದ್ದ ಶುಲ್ಕವನ್ನು ಹಿಂಪಡೆಯಲು ನಿರ್ಧಾರ ಮಾಡಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

 

ನವೆಂಬರ್ ಒಂದರಿಂದ ನಗದು ಡೆಪಾಸಿಟ್ ಹಾಗೂ ವಿಥ್ ಡ್ರಾ ಉಚಿತ ವ್ಯವಹಾರಗಳಿಗೆ ಸಂಬಂಧಿಸಿದಂತೆ ಕೆಲ ಬದಲಾವಣೆ ಮಾಡುವುದಾಗಿ ಬ್ಯಾಂಕ್ ಆಫ್ ಬರೋಡಾ ಘೋಷಣೆ ಮಾಡಿತ್ತು. ಪ್ರತಿ ತಿಂಗಳು ಐದು ಕ್ಯಾಶ್ ಡೆಪಾಸಿಟ್ ಮತ್ತು ವಿಥ್ ಡ್ರಾ ಉಚಿತವಿತ್ತು. ಅದನ್ನು ತಲಾ ಮೂರಕ್ಕೆ ಇಳಿಸಲಾಗಿದೆ. ಆ ಉಚಿತ ವ್ಯವಹಾರದ ನಂತರ ವಿಧಿಸುತ್ತಿದ್ದ ಶುಲ್ಕದಲ್ಲಿ ಯಾವ ಬದಲಾವಣೆ ಮಾಡಿಲ್ಲ ಎಂದು ಹೇಳಲಾಗಿದೆ.

 

ಎಂಎಸ್ ಎಂಇಗಳಿಗೆ ತುರ್ತು ಸಾಲ ಯೋಜನೆ ಅವಧಿ ಒಂದು ತಿಂಗಳು ವಿಸ್ತರಣೆಎಂಎಸ್ ಎಂಇಗಳಿಗೆ ತುರ್ತು ಸಾಲ ಯೋಜನೆ ಅವಧಿ ಒಂದು ತಿಂಗಳು ವಿಸ್ತರಣೆ

ಕೊರೊನಾ ಹಿನ್ನೆಲೆಯಲ್ಲಿ ಬ್ಯಾಂಕ್ ಆಫ್ ಬರೋಡಾದಿಂದ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಅದನ್ನು ವಾಪಸ್ ಪಡೆಯಲು ತೀರ್ಮಾನಿಸಿದೆ. ಇನ್ನು ಇತರ ಯಾವುದೇ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ಈಚೆಗೆ ಶುಲ್ಕದಲ್ಲಿ ಅಂಥ ಬದಲಾವಣೆ ಮಾಡಿಲ್ಲ ಎಂದು ತಿಳಿಸಲಾಗಿದೆ.

ಸಾರ್ವಜನಿಕ ಬ್ಯಾಂಕ್ ಗಳ ಸೇವಾ ಶುಲ್ಕ ಹೆಚ್ಚಿಸುವುದಿಲ್ಲ ಎಂದ ಕೇಂದ್ರ

ಆದರೂ ಆರ್ ಬಿಐ ನಿಯಮಾನುಸಾರ, ಎಲ್ಲ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳೂ ಸೇವಾ ಶುಲ್ಕವನ್ನು ನ್ಯಾಯಸಮ್ಮತವಾಗಿ, ಪಾರದರ್ಶಕ ಹಾಗೂ ತಾರತಮ್ಯ ಇಲ್ಲದೆ ವಿಧಿಸಬಹುದು. ಅದು ಕೂಡ ತಗುಲುವ ವೆಚ್ಚವನ್ನು ಅವಲಂಬಿಸಿ ನಿರ್ಧಾರ ಕೈಗೊಳ್ಳಬಹುದು. ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡೆಪಾಸಿಟ್ (BSBD)ಗೆ ಸಂಬಂಧಿಸಿದಂತೆ 60.4 ಕೋಟಿ ಅಂಥ ಖಾತೆಗಳಿದ್ದು, ಅದರಲ್ಲಿ 41.13 ಕೋಟಿ ಜನ್ ಧನ್ ಖಾತೆಗಳು ಬಡವರಿಗಾಗಿಯೇ ತೆರೆಯಲಾಗಿದೆ.

English summary

No Service Charge Hike By Any Public Sector Bank, Says Finance Ministry

Finance ministry on Tuesday says, there will be no service charge hike by any public sector bank.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X