ಇ ಕಾಮರ್ಸ್ ಕಂಪೆನಿ ಫ್ಲಿಪ್ ಕಾರ್ಟ್ ಜತೆಗೂಡಿ ನೋಕಿಯಾದಿಂದ ಸ್ಮಾರ್ಟ್ ಟೀವಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ. ಮೋಟೋರೊಲಾ ನಂತರ ಇದೀಗ ನೋಕಿಯಾ ಫ್ಲಿಪ್ ಕಾರ್ಟ್ ಸಹಭಾಗಿತ್ವ ವಹಿಸಿದೆ. ಇಷ್ಟು ಸಮಯ ಮೊಬೈಲ್ ಫೋನ್ ಮಾರುಕಟ್ಟೆಯಲ್ಲಿ ಮಾತ್ರ ಇದ್ದ ನೋಕಿಯಾ ಈಗ ಗೃಹೋಪಯೋಗಿ ವಸ್ತುಗಳನ್ನು ಸಹ ಮಾರಾಟ ಮಾಡಲಿದೆ.
ನೋಕಿಯಾ ಕಂಪೆನಿ ಜತೆಗೆ ವ್ಯೂಹಾತ್ಮಕ ಒಪ್ಪಂದಕ್ಕೆ ಫ್ಲಿಪ್ ಕಾರ್ಟ್ ಬಂದಿದೆ. ಈ ಮೂಲಕ ನೋಕಿಯಾ ಬ್ರ್ಯಾಂಡ್ ನ ಸ್ಮಾರ್ಟ್ ಟೀವಿಗಳನ್ನು ಭಾರತದಲ್ಲಿ ಮಾರಾಟ ಮಾಡಲಿದೆ. ಜಾಗತಿಕ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ಟೀವಿ ವಿಭಾಗದಲ್ಲಿ ಬ್ರ್ಯಾಂಡ್ ವೊಂದರ ಜತೆಗೆ ಫ್ಲಿಪ್ ಕಾರ್ಟ್ ಒಪ್ಪಂದ ಮಾಡಿಕೊಂಡಿದೆ ಎಂದು ಬುಧವಾರ ತಿಳಿಸಲಾಗಿದೆ.
ಭಾರತೀಯ ಗ್ರಾಹಕರ ಅಗತ್ಯಗಳ ಬಗ್ಗೆ ತಿಳಿವಳಿಕೆ ಇರುವ ಫ್ಲಿಪ್ ಕಾರ್ಟ್ ನಿಂದ ನೋಕಿಯಾ ಬ್ರ್ಯಾಂಡ್ ನ ಸ್ಮಾರ್ಟ್ ಟೀವಿಗಳ ಮಾರಾಟಕ್ಕೆ ಅಗತ್ಯ ಇರುವ ಎಲ್ಲ ಮಾರುಕಟ್ಟೆ ತಂತ್ರಗಳನ್ನು ಅನುಸರಿಸಲಾಗುತ್ತದೆ ಎಂದು ಕೂಡ ಹೇಳಲಾಗಿದೆ. ಎರಡೂ ಕಂಪೆನಿಗಳು ಉತ್ಪನ್ನಗಳ ಬಗ್ಗೆಯಾಗಲೀ ಬೆಲೆ ಹಾಗೂ ಮಾರಾಟ ಆರಂಭದ ಬಗ್ಗೆಯಾಗಲೀ ಯಾವುದೇ ಮಾಹಿತಿ ಬಹಿರಂಗ ಮಾಡಿಲ್ಲ.

ಹಲವು ಫೋನ್ ತಯಾರಿಕೆ ಕಂಪೆನಿಗಳು ಈಗಾಗಲೇ ಸ್ಮಾರ್ಟ್ ಟೀವಿ ಮಾರಾಟ ಆರಂಭಿಸಿವೆ. ಸ್ಯಾಮ್ಸಂಗ್, ಮೈಕ್ರೋಮಾಕ್ಸ್, ಇಂಟೆಕ್ಸ್, ಶಿಯೋಮಿ, ಮೋಟೋರೊಲಾ ಹಾಗೂ ಒನ್ ಪ್ಲಸ್ ಈಗಾಗಲೇ ಆ ಕ್ಷೇತ್ರದಲ್ಲಿದೆ.
ಕಳೆದ ಸೆಪ್ಟೆಂಬರ್ ನಲ್ಲಿ ಫ್ಲಿಪ್ ಕಾರ್ಟ್ ಜತೆಗಿನ ಸಹಭಾಗಿತ್ವದಲ್ಲಿ ಭಾರತದಲ್ಲಿ ಸ್ಮಾರ್ಟ್ ಟೀವಿ ಮಾರಾಟ ಮಾಡುವ ಬಗ್ಗೆ ಘೋಷಣೆ ಮಾಡಿದೆ. 32ರಿಂದ 65 ಇಂಚಿನ ತನಕದ ಟೀವಿಯನ್ನು ಮಾರಾಟ ಮಾಡಲಿದೆ. ಅವುಗಳ ಬೆಲೆ 13,999 ರುಪಾಯಿಯಿಂದ ಆರಂಭವಾಗಲಿದೆ.
ಇನ್ನು ನೋಕಿಯಾ ಬ್ರ್ಯಾಂಡ್ ನ ಟೀವಿಯಲ್ಲಿ ಜೆಬಿಎಲ್ ಸೌಂಡ್ ಪ್ರೋಗ್ರಾಂ ಇರಲಿದೆ. ಫ್ಲಿಪ್ ಕಾರ್ಟ್ ನಿಂದ ಖಾಸಗಿ ಲೇಬಲ್ MarQ ಹೆಸರಿನಲ್ಲಿ 24ರಿಂದ 65 ಇಂಚಿನ ಯುಎಚ್ ಡಿ ಟೀವಿ ಮಾರಾಟ ಮಾಡಲಿದೆ. ಬೆಲೆಯು 6,999ರಿಂದ 64,999 ರುಪಾಯಿ ತನಕ ಇರುತ್ತದೆ.


Click it and Unblock the Notifications