'ಮೇಡ್ ಇನ್ ಚೀನಾ' ಗಣೇಶ ಮೂರ್ತಿ ಒಂದು ಸಹ ಭಾರತಕ್ಕೆ ಬಂದಿಲ್ಲ: CAIT

ಈ ವರ್ಷ 'ಮೇಡ್ ಇನ್ ಚೀನಾ' ಗಣೇಶ ಮೂರ್ತಿಗಳನ್ನು ಒಂದೇ ಒಂದು ಸಹ ಆಮದು ಮಾಡಿಕೊಂಡಿಲ್ಲ ಎಂದು ಶನಿವಾರ ಕಾನ್ಫಡರೇಷನ್ ಆಫ್ ಆಲ್ ಇಂಡಿಯಾ ಟೇಡರ್ಸ್ (ಸಿಎಐಟಿ) ತಿಳಿಸಿದೆ. ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ ವಾಲ್ ಮಾತನಾಡಿ, ಪ್ರತಿ ವರ್ಷ ದೇಶದಾದ್ಯಂತ 30 ಕೋಟಿ ಗಣಪತಿ ಮೂರ್ತಿಗಳನ್ನು ಖರೀದಿಸಲಾಗುತ್ತಿತ್ತು ಎಂದಿದ್ದಾರೆ.

ಅಂದಾಜಿನ ಪ್ರಕಾರ, ಪ್ರತಿ ವರ್ಷ ಚೀನಾ ದೇಶದಿಂದ ಭಾರತಕ್ಕೆ 500 ಕೋಟಿ ಮೌಲ್ಯದ ಗಣೇಶ ಮೂರ್ತಿಗಳು ಆಮದಾಗುತ್ತಿತ್ತು. ಆದರೆ ಚೈನೀಸ್ ವಸ್ತುಗಳ ನಿಷೇಧಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಈ ವರ್ಷ ಗಣೇಶ ಮೂರ್ತಿಯನ್ನು ಆಮದು ಮಾಡಿಕೊಂಡಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

ಚೈನೀಸ್ ವಸ್ತುಗಳನ್ನು ನಿಷೇಧಿಸುವಂತೆ ಹಾಗೂ ಭಾರತೀಯ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವಂತೆ ಈ ಹಿಂದೆ ಸಿಎಐಟಿ ಕರೆ ನೀಡಿತ್ತು. ಖಂಡೇಲ್ ವಾಲ್ ಅವರು ಹೇಳುವಂತೆ, ಈ ವರ್ಷ ಗಣೇಶನ ಸಣ್ಣ ಮೂರ್ತಿಗಳನ್ನು ಕೂರಿಸುವುದಕ್ಕೆ ಆದ್ಯತೆ ನೀಡಲಾಗಿದೆ. ಗಣೇಶ ಹಬ್ಬ ಆಚರಣೆ ಶನಿವಾರದಿಂದ (ಆಗಸ್ಟ್ 22, 2020) ಶುರುವಾಗಿದೆ.

'ಮೇಡ್ ಇನ್ ಚೀನಾ' ಗಣೇಶ ಮೂರ್ತಿ ಒಂದು ಸಹ ಭಾರತಕ್ಕೆ ಬಂದಿಲ್ಲ: CAIT

ಈ ವರ್ಷ ದೇವಾಲಯಗಳಿಗೆ ತೆರಳುವ ಭಕ್ತರ ಸಂಖ್ಯೆಯೂ ಕಡಿಮೆಯಾಗಿದೆ. ಮನೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಪೂಜಿಸಿದ್ದಾರೆ ಎಂದು ಖಂಡೇಲ್ ವಾಲ್ ಅವರು ಹೇಳಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+