ಮುಂಬೈ, ಏಪ್ರಿಲ್ 23: ಭಾರತದಿಂದ ಆಮದು ಮಾಡಿಕೊಳ್ಳಲಾಗಿದ್ದ ಜನಪ್ರಿಯ ಉತ್ಪನ್ನ ಎವರೆಸ್ಟ್ ಫಿಶ್ ಕರಿ ಮಸಾಲಾದಲ್ಲಿ ಕೀಟನಾಶಕ ಅಂಶ ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಸಿಂಗಾಪುರ ಆ ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ನಿಷೇಧಿಸಿದ ಬೆನ್ನಲ್ಲೇ ಹಾಂಗ್ ಕಾಂಗ್‌ನ ಆಹಾರ ನಿಯಂತ್ರಣ ಪ್ರಾಧಿಕಾರವೂ ಭಾರತದಲ್ಲಿನ ಮೂರು ಮಸಾಲೆ ಉತ್ಪನ್ನಗಳಲ್ಲಿ ಎಥಿಲೀನ್ ಆಕ್ಸೈಡ್ ಎಂದು ಕರೆಯಲ್ಪಡುವ ಕೀಟನಾಶಕವನ್ನು ಹೊಂದಿರುವ ಕ್ಯಾನ್ಸರ್-ಉಂಟುಮಾಡುವ ರಾಸಾಯನಿಕಗಳಿವೆ ಎಂದು ಹೇಳಿದೆ.
ಹೌದು ಇತ್ತೀಚೆಗೆ, ಹಾಂಗ್ ಕಾಂಗ್‌ನ ಆಹಾರ ನಿಯಂತ್ರಣ ಪ್ರಾಧಿಕಾರ ಸೆಂಟರ್ ಫಾರ್ ಫುಡ್ ಸೇಫ್ಟಿ (CFS) ಅಧಿಕೃತ ವೆಬ್‌ಸೈಟ್‌ನಲ್ಲಿ ಏಪ್ರಿಲ್ 5 ರಂದು ಪ್ರಕಟವಾದ ವರದಿಯಲ್ಲಿ ಭಾರತದಲ್ಲಿನ ಮೂರು ಮಸಾಲೆ ಉತ್ಪನ್ನಗಳಲ್ಲಿ ಎಥಿಲೀನ್ ಆಕ್ಸೈಡ್ ಇದೆ ಎಂದು ಹೇಳಿದೆ.ಈ ಆಘಾತಕಾರಿ ವರದಿಯ ಬಗ್ಗೆ ಮಾಹಿತಿ ಇಲ್ಲಿದೆ.

ಹಾಂಗ್ ಕಾಂಗ್ ಮತ್ತು ಸಿಂಗಾಪುರದ ಆಹಾರ ನಿಯಂತ್ರಕರು ಏಪ್ರಿಲ್ ಮೊದಲ ವಾರದಲ್ಲಿ ವರದಿಯನ್ನು ಬಿಡುಗಡೆ ಮಾಡಿದ್ದು ಕ್ಯಾನ್ಸರ್ ಉಂಟುಮಾಡುವ ಎಥಿಲೀನ್ ಆಕ್ಸೈಡ್ ಅನ್ನು ಪರೀಕ್ಷಿಸಿದ ಕಾರಣ ಭಾರತದ ಮಸಾಲೆ ಉತ್ಪನ್ನಗಳನ್ನುಸೇವಿಸುವುದನ್ನು ನಿಲ್ಲಿಸುವಂತೆ ಜನಸಾಮಾನ್ಯರಿಗೆ ಎಚ್ಚರಿಕೆ ನೀಡಿದೆ.
ಮಸಾಲೆಗಳ ಪಟ್ಟಿಯಲ್ಲಿ ಎರಡು ದೊಡ್ಡ ಭಾರತೀಯ ಕಂಪನಿಗಳಾದ MDH ನ ಮೂರು ಮಸಾಲೆ ಉತ್ಪನ್ನಗಳು ಮತ್ತು ಎವರೆಸ್ಟ್ ಸಂಸ್ಥೆಯ ಒಂದು ಉತ್ಪನ್ನದಲ್ಲಿ ಮಿತಿ ಮೀರಿದ ರಾಸಾಯನಿಕಗಳನ್ನು ಹೊಂದಿದೆ ಎಂದು ಹೇಳಿದೆ. ಆದರೆ ಈ ವರದಿಗಳ ಬಗ್ಗೆ ಎರಡು ಕಂಪನಿಗಳು ಕೂಡಾ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ಎಥಿಲೀನ್ ಆಕ್ಸೈಡ್ ಅನ್ನು 'ಗ್ರೂಪ್ 1 ಕಾರ್ಸಿನೋಜೆನ್' ಎಂದು ವರ್ಗೀಕರಿಸಿದೆ.ಹಾಂಗ್ ಕಾಂಗ್‌ನ ಆಹಾರ ನಿಯಂತ್ರಣ ಪ್ರಾಧಿಕಾರ, MDH ನ ಮೂರು ಮಸಾಲೆ ಉತ್ಪನ್ನಗಳಾದ ಮದ್ರಾಸ್ ಕರಿ ಪೌಡರ್ , ಸಾಂಬಾರ್ ಮಸಾಲಾ , ಮತ್ತು ಕರಿ ಪುಡಿ ಜೊತೆಗೆ ಎವರೆಸ್ಟ್‌ನ ಫಿಶ್ ಕರಿ ಮಸಾಲಾ ಕೀಟನಾಶಕ, ಎಥಿಲೀನ್ ಆಕ್ಸೈಡ್ ಅನ್ನು ಹೊಂದಿದೆ ಎಂದು ತಿಳಿಸಿದೆ.
ಈ ಪರೀಕ್ಷೆಗಳನ್ನು ಎಂದಿನಂತೆ ವಾಡಿಕೆಯ ಆಹಾರ ಕಣ್ಗಾವಲು ಕಾರ್ಯಕ್ರಮದ ಅಡಿಯಲ್ಲಿ ನಡೆಸಲಾಯಿತು. ಸೆಂಟರ್ ಫಾರ್ ಫುಡ್ ಸೇಫ್ಟಿ ಹಾಂಗ್ ಕಾಂಗ್‌ನಲ್ಲಿರುವ ಮೂರು ರಿಟೇಲ್ ಮಳಿಗೆಗಳಿಂದ ಉತ್ಪನ್ನಗಳನ್ನು ತೆಗ್ದುಕೊ ಂಡು ಪರೀಕ್ಷೆಗೆ ಒಳಪಡಿಸಿತ್ತು. "ಪರೀಕ್ಷೆಯ ಫಲಿತಾಂಶಗಳು ಮಾದರಿಗಳಲ್ಲಿ ಕೀಟನಾಶಕ, ಎಥಿಲೀನ್ ಆಕ್ಸೈಡ್ ಅನ್ನು ಒಳಗೊಂಡಿವೆ ಎಂದು ತೋರಿಸಿದೆ" ಎಂದು ಸಿಎಫ್ಎಸ್ ವಕ್ತಾರರು ಹೇಳಿದ್ದಾರೆ.
"ಈ ಉತ್ಪನ್ನ ಗಳನ್ನು ತಮ್ಮ ದೇಶದಲ್ಲಿ ಮಾರಾಟವನ್ನು ನಿಲ್ಲಿಸಲು ಮತ್ತು ಈಗಾಗಲೇ ಮಾಲ್/ ಸ್ಟೋರ್ ಗಳಲ್ಲಿರುವ ಉತ್ಪನ್ನಗಳನ್ನು ಹಿಂಪಡೆಯಲು ಮಾರಾಟಗಾರರಿಗೆ ಸೂಚನೆ ನೀಡಲಾಗಿದೆ. ಆಹಾರ ನಿಯಂತ್ರಣದಲ್ಲಿನ ಕೀಟನಾಶಕ ಅವಶೇಷಗಳ ಪ್ರಕಾರ (ಕ್ಯಾಪ್. 132CM), ಆಹಾರದ ಸೇವನೆಯು ಅಪಾಯಕಾರಿ ಅಥವಾ ಆರೋಗ್ಯಕ್ಕೆ ಹಾನಿಕರವಲ್ಲದಿದ್ದರೆ ಮಾತ್ರ ಕೀಟನಾಶಕ ಅತ್ಯಂತ ಕಡಿಮೆ ಪ್ರಮಾಣ(ಶೇಷ) ವನ್ನು ಹೊಂದಿರುವ ಮಾನವ ಬಳಕೆಗಾಗಿ ಆಹಾರವನ್ನು ಮಾರಾಟ ಮಾಡಬಹುದು. ಇಲ್ಲವಾದಲ್ಲಿ ಅಪರಾಧಿಯು ಗರಿಷ್ಠ $ 50,000 ದಂಡ ಮತ್ತು ಆರು ತಿಂಗಳ ಜೈಲು ಶಿಕ್ಷೆಗೆ ಗುರಿಯಾಗುತ್ತಾನೆ" ಎಂದು ಸಿಎಫ್ಎಸ್ ವಕ್ತಾರರು ಹೇಳಿದರು.


Click it and Unblock the Notifications