ಮುಂಬೈ, ನವೆಂಬರ್ 02: ದೀಪಾವಳಿ ಹಬ್ಬಕ್ಕೂ ಮುನ್ನ ಮಂಗಳವಾರ ಮಾರುಕಟ್ಟೆ ಚೇತರಿಕೆ ಕಾಣುತ್ತಿದೆ. ಮುಂಬೈ ಷೇರು ಮಾರುಕಟ್ಟೆಯಲ್ಲಿ ಪ್ರಮುಖ ಷೇರುಗಳು ಹಸಿರು ಟ್ಯಾಗ್ ಪಡೆದು ಸುಸ್ಥಿತಿಯಲ್ಲಿವೆ. ಟಾಟಾ ಮೋಟರ್ಸ್ ಷೇರುಗಳು ಶೇ 5 ರಷ್ಟು ಏರಿಕೆ ಕಂಡಿವೆ.
ಉಳಿದಂತೆ ನಿಫ್ಟಿಯಲ್ಲಿ ಎನ್ ಟಿ ಪಿಎಸ್ , ಟೈಟಾನ್, ಎಲ್ ಅಂಡ್ ಟಿ ಹಾಗೂ ಕೋಲ್ ಇಂಡಿಯಾ ಆರಂಭಿಕ ಮುನ್ನಡೆ ಪಡೆದುಕೊಂಡಿವೆ.
ಮಂಗಳವಾರ(ನ.2) ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 228.13 ಸೂಚ್ಯಂಕ ಏರಿಕೆಯೊಂದಿಗೆ ಆರಂಭವಾಗಿದ್ದು, 60,366.59 ಸೂಚ್ಯಂಕಕ್ಕೆ ತಲುಪಿದೆ. ಅದೇ ನಿಫ್ಟಿಯಲ್ಲೂ 73.50 ಸೂಚ್ಯಂಕ ಏರಿಕೆಯೊಂದಿಗೆ 18,003.15 ಅಂಶಕ್ಕೆ ತಲುಪಿದೆ.
ಕಳೆದ ವಾರ ಷೇರು ಮಾರುಕಟ್ಟೆಯಲ್ಲಿ ಸತತ ಕುಸಿತವಾಗಿತ್ತು, ಒಂದು ದಿನ ಸಾವಿರಕ್ಕೂ ಅಧಿಕ ಸೂಚ್ಯಂಕ ಕೆಳಗಿಳಿದಿತ್ತು, ಸೋಮವಾರದಂದು ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 357.85 ಸೂಚ್ಯಂಕ ಅಥವಾ ಶೇ.0.60 ಏರಿಕೆಯೊಂದಿಗೆ ಆರಂಭವಾಗಿದ್ದು, 59,577.48 ಸೂಚ್ಯಂಕಕ್ಕೆ ತಲುಪಿದೆ. ನಿಫ್ಟಿಯಲ್ಲೂ 135 ಸೂಚ್ಯಂಕ ಅಥವಾ 0.76ರ ಏರಿಕೆಯೊಂದಿಗೆ ಮಾರುಕಟ್ಟೆ ಆರಂಭವಾಗಿದೆ. ಇದರೊಂದಿಗೆ ನಿಫ್ಟಿ ಸೂಚ್ಯಂಕವು 17,806.40ಗೆ ತಲುಪಿದೆ.

ತ್ರೈಮಾಸಿಕ ವರದಿ ಪ್ರಕಟ: ಭಾರ್ತಿ ಏರ್ ಟೆಲ್, ಸನ್ ಫಾರ್ಮಾಸ್ಯೂಟಿಕಲ್ಸ್ ಇಂಡಸ್ಟ್ರೀಸ್, ಬ್ಯಾಂಕ್ ಆಫ್ ಇಂಡಿಯಾ, ಗೋದ್ರೇಜ್ ಪ್ರಾಪರ್ಟಿಸ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬಜಾಜ್ ಹೆಲ್ತ್ ಕೇರ್, ಭಾರತ್ ಗೇರ್ಸ್, ಬಾಂಬೆ ಡೈಯಿಂಗ್, ಡಾಬರ್ ಇಂಡಿಯಾ, ಜಿಲೆಟ್ ಇಂಡಿಯಾ, ಜಿಂದಾಲ್ ಸ್ಟೀಲ್ಸ್, ಜ್ಯೋತಿ ಲ್ಯಾಬ್ಸ್, ಪಿಎನ್ ಬಿ ಹೌಸಿಂಗ್ ಸೇರಿದಂತೆ ಹಲವು ಕಂಪನಿಗಳ ತ್ರೈಮಾಸಿಕ ವರದಿ ಫಲಿತಾಂಶ ಪ್ರಕಟಣೆಯಾಗಲಿದ್ದು, ಷೇರುಪೇಟೆಯಲ್ಲಿ ಹೆಚ್ಚಿನ ಚೇತರಿಕೆ ಕಾಣಬಹುದಾಗಿದೆ.
ಏಷ್ಯಾದ ಮಾರುಕಟ್ಟೆ ಮಂಗಳವಾರ ಉತ್ತಮ ಆರಂಭ ಪಡೆದುಕೊಂಡಿಲ್ಲ. ಜಪಾನ್ ನಿಕ್ಕಿ ಶೇ 0.2ರಷ್ಟು ಕುಸಿತ ಹಾಗೂ ಆಸ್ಟ್ರೇಲಿಯಾದ ಎಸ್ ಅಂಡ್ ಪಿ/ಎಎಸ್ ಎಕ್ಸ್ ಶೇ 0.6 ರಷ್ಟು ಇಳಿಕೆಯಾಗಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್ ಸೆಂಟ್ರಲ್ ಬ್ಯಾಂಕ್ ಸಭೆ, ನಿರ್ಣಯದ ನಿರೀಕ್ಷೆಯಲ್ಲಿರುವ ಮಾರುಕಟ್ಟೆಗಳು ಇನ್ನೂ ಚೇತರಿಕೆ ಕಂಡಿಲ್ಲ.
ನವೆಂಬರ್ ಮೊದಲ ದಿನದ ಚೇತರಿಕೆ ಬಳಿಕ ಮತ್ತೆ ಮಂಗಳವಾರ ಷೇರು ಮಾರುಕಟ್ಟೆಯಲ್ಲಿ ಕುಸಿತವಾಗಿದೆ. ಕಳೆದ ಒಂದು ವಾರದಿಂದ ಭಾರತೀಯ ಶೇರು ಮಾರುಕಟ್ಟೆಯಲ್ಲಿ ಕುಸಿತ ಕಾಣಿಸುತ್ತಿದ್ದು, ಇಂದು ಕೂಡ ನಿಫ್ಟಿ ಹಾಗೂ ಸೆನ್ಸೆಕ್ಸ್‌ನಲ್ಲಿ ಇಳಿಕೆ ಕಂಡುಬಂದಿದೆ.
ದಿನ ಅಂತ್ಯದ ವಹಿವಾಟಿಗೆ ಸೆನ್ಸೆಕ್ಸ್ ಸೂಚ್ಯಂಕವು 190.40 ಇಳಕೆ ಅಂದರೆ ಶೇ.0.18 ಇಳಿಕೆಯೊಂದಿಗೆ 60,029.06ಕ್ಕೆ ತಲುಪಿದೆ ಹಾಗೆಯೇ ನಿಫ್ಟಿಯಲ್ಲಿಯೂ 40.7 ಸೂಚ್ಯಂಕದ ಇಳಿಕೆಯೊಂದಿಗೆ ಅಂದರೆ ಶೇ.02.3 ಇಳಿಕೆಯಲ್ಲಿ 17,889ಕ್ಕೆ ಬಂದು ತಲುಪಿದೆ.
ಲೋಹ, ತೈಲ ಹಾಗೂ ಕಮಾಡಿಟಿ ಸ್ಟಾಕ್ಸ್‌ನಲ್ಲಿ ಇಳಿಕೆಯಾಗಿರುವುದು ಈ ಷೇರು ಮಾರುಕಟ್ಟೆಯಲ್ಲಿನ ಕುಸಿತಕ್ಕೆ ಕಾರಣವಾಗಿದೆ.


Click it and Unblock the Notifications