ಚಿಕನ್ ಗಿಂತ ಹಲಸಿನಕಾಯಿಗೆ ಡಿಮ್ಯಾಂಡ್, ಕಾಸ್ಟ್ಲಿ; ಕೇಜಿಗೆ 120 ರು.

ಕೊರೊನಾ ವೈರಾಣು ಆತಂಕದಲ್ಲಿ ಚಿಕನ್ ಮತ್ತು ಮಟನ್ ಮಾರಾಟ ನೆಲ ಕಚ್ಚಿದೆ. ಅದಕ್ಕೆ ಪರ್ಯಾಯವಾಗಿ ಹಲಸಿನಕಾಯಿಗೆ ಡಿಮ್ಯಾಂಡ್ ಬಂದಿದೆ. ಇದು ಉತ್ತರಪ್ರದೇಶದಿಂದ ಬಂದಿರುವ ಸುದ್ದಿ. ಹಲಸಿನಕಾಯಿ ಪ್ರತಿ ಕೇಜಿಗೆ 120 ರುಪಾಯಿಯಂತೆ ಮಾರಾಟವಾಗುತ್ತಿದೆ. ಸಾಮಾನ್ಯವಾಗಿ ಕೇಜಿಗೆ 50 ರುಪಾಯಿಯಂತೆ ಇರುವ ಬೆಲೆ 120 ಪರ್ಸೆಂಟ್ ಏರಿಕೆಯಾಗಿದೆ.

ಚಿಕನ್ ಗಿಂತಲೂ ಹಲಸಿನಕಾಯಿ ದುಬಾರಿಯಾಗಿದೆ. ಸದ್ಯಕ್ಕೆ ಚಿಕನ್ ಕೇಜಿಗೆ 80 ರುಪಾಯಿಯಂತೆ ಮಾರಾಟ ಆಗುತ್ತಿದೆ. "ಮಟನ್ ಬಿರಿಯಾನಿ ಬದಲಿಗೆ ಹಲಸಿನಕಾಯಿ ಬಿರಿಯಾನಿ ಈಗ ಸೇಫ್. ರುಚಿ ಕೂಡ ಚೆನ್ನಾಗಿರುತ್ತದೆ. ಹಲಸಿನಕಾಯಿ ಹುಡುಕುವುದು ಕಷ್ಟ ಅನ್ನೋದು ಬಿಟ್ಟರೆ ಇನ್ಯಾವ ಸಮಸ್ಯೆಯೂ ಇಲ್ಲ" ಎನ್ನುತ್ತಾರೆ ಮಾಂಸಾಹಾರಪ್ರಿಯರು.

ಚಿಕನ್ ಗಿಂತ ಹಲಸಿನಕಾಯಿಗೆ ಡಿಮ್ಯಾಂಡ್, ಕಾಸ್ಟ್ಲಿ; ಕೇಜಿಗೆ 120 ರು.

ಕೊರೊನಾದಿಂದ ಪೌಲ್ಟ್ರಿ ವ್ಯವಹಾರಕ್ಕೂ ಭರ್ತಿ ಪೆಟ್ಟು ಬಿದ್ದಿದೆ. ಈಚೆಗೆ ಪೌಲ್ಟ್ರಿ ಫಾರಂ ಅಸೋಸಿಯೇಷನ್ ನವರು ಗೋರಖ್ ಪುರ್ ನಲ್ಲಿ ಚಿಕನ್ ಮೇಳ ಆಯೋಜಿಸಿ, ಈ ಬಗ್ಗೆ ಇರುವ ತಪ್ಪು ಕಲ್ಪನೆ ಹೋಗಲಾಡಿಸಲು ಪ್ರಯತ್ನಿಸಿದರು. "ನಾವು ಒಂದು ಪ್ಲೇಟ್ ಚಿಕನ್ ಖಾದ್ಯವನ್ನು 30 ರುಪಾಯಿಯಂತೆ ಕೊಟ್ಟೆವು. ಮೇಳಕ್ಕಾಗಿ ಒಂದು ಸಾವಿರ ಟನ್ ಕೋಳಿ ಬೇಯಿಸಿದ್ದಿವಿ. ಎಲ್ಲವೂ ಮಾರಾಟವಾಯಿತು" ಎಂದಿದ್ದಾರೆ ಚಿಕನ್ ಮೇಳದ ಆಯೋಜಕರು.

ಆದರೆ, ಮೇಳದಿಂದ ಚಿಕನ್, ಮಟನ್ ಅಥವಾ ಮೀನಿನ ಮಾಂಸದ ಬಗ್ಗೆ ಇರುವ ಆತಂಕ ಪೂರ್ತಿ ಹೋಗಲಾಡಿಸಲು ಸಾಧ್ಯವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+