ಟೊಯೊಟಾವನ್ನು ಸೈಡ್ ಹೊಡೆದ ಟೆಸ್ಲಾ ಈಗ ವಿಶ್ವದ ನಂಬರ್ ಒನ್

ವಿಶ್ವದ ಅತ್ಯಂತ ಮೌಲ್ಯಯುತ ವಾಹನ ತಯಾರಿಕಾ ಕಂಪೆನಿಯ ಸಿಂಹಾಸನದಲ್ಲಿ ಈಗ ಟೆಸ್ಲಾ ಬಂದಿದೆ. ಈ ವರೆಗೆ ಆ ಸ್ಥಾನ ಅಲಂಕರಿಸಿದ್ದು ಟೊಯೊಟಾ ಮೋಟಾರ್ ಕಾರ್ಪೊರೇಷನ್. 130 ವರ್ಷಕ್ಕೂ ಹೆಚ್ಚು ಸಮಯದಿಂದ ವಾಹನ ಕೈಗಾರಿಕೆಗಳು ಅವಲಂಬಿಸಿರುವುದು ಇಂಟರ್ನಲ್ ಕಂಬಷನ್ ಎಂಜಿನ್ ಮೇಲೆ. ಅದರಲ್ಲೇ ಬದಲಾವಣೆ ತರುವುದಕ್ಕೆ ಪ್ರಯತ್ನಿಸುತ್ತಿದೆ.

ಈ ವರ್ಷದ ಆರಂಭದಿಂದ ಈಚೆಗೆ ಟೆಸ್ಲಾ ಕಂಪೆನಿ ಷೇರುಗಳ ಬೆಲೆ ದುಪ್ಪಟ್ಟಾಗಿದೆ. ಮಾರುಕಟ್ಟೆ ಬಂಡವಾಳ ಮೌಲ್ಯವು 20,720 ಕೋಟಿ ಅಮೆರಿಕನ್ ಡಾಲರ್ ಇದೆ. ಇತ್ತ ಟೊಯೊಟಾದ ಮೌಲ್ಯ 20,190 ಕೋಟಿ ಅಮೆರಿಕನ್ ಡಾಲರ್ ನಷ್ಟಿದೆ. ಅಂದ ಹಾಗೆ ಟೆಸ್ಲಾದ ಸಿಇಒ ಎಲಾನ್ ಮಸ್ಕ್ ವಾಹನ ಉತ್ಪಾದನೆ ವಲಯದ ಹಲವು ನಿಯಮಗಳು ಹಾಗೂ ನಿಬಂಧನೆಗಳನ್ನು ಕಳೆದ ಹತ್ತು ವರ್ಷದಲ್ಲಿ ಮುರಿದಿದ್ದಾರೆ.

ಆನ್ ಲೈನ್ ನಲ್ಲಿ ಕಾರು ಮಾರಾಟ, ಹೆಚ್ಚು ದುಬಾರಿಯಾದ ಕ್ಯಾಲಿಫೋರ್ನಿಯಾದಲ್ಲಿ ಕಾರು ಜೋಡಣೆ ಇತ್ಯಾದಿ ಪ್ರಯೋಗದ ಹೊರತಾಗಿಯೂ ಕಂಪೆನಿ ಷೇರುಗಳು ಏರುತ್ತಲೇ ಸಾಗಿವೆ. ವಿಶ್ವದ ಅತಿ ದೊಡ್ಡ ಕಾರು ತಯಾರಿಕಾ ಕಂಪೆನಿ ಎಂಬ ಶ್ರೇಯ ಅದಕ್ಕೆ ಮುಂದುವರಿದಿದೆ.

ಟೊಯೊಟಾವನ್ನು ಸೈಡ್ ಹೊಡೆದ ಟೆಸ್ಲಾ ಈಗ ವಿಶ್ವದ ನಂಬರ್ ಒನ್

ಟೆಸ್ಲಾದಿಂದ 1,03,000 ವಾಹನವನ್ನು ಮೊದಲ ತ್ರೈಮಾಸಿಕದಲ್ಲಿ ಉತ್ಪಾದಿಸಲಾಗಿದೆ. ಇತ್ತ ಟೊಯೊಟಾದಿಂದ 24 ಲಕ್ಷ ಕಾರುಗಳ ಮಾರಾಟ ಮಾಡಲಾಗಿದೆ. ಆದರೆ ಅದು ಕೈಗೆಟುಕುವ ಬೆಲೆಯದ್ದೂ ಆಗಿವೆ. ಕಳೆದ ಜನವರಿಯಲ್ಲಿ ಫೋಕ್ಸ್ ವ್ಯಾಗನ್ ಎಜಿಯನ್ನು ದಾಟಿದಾಗ ವಿಶ್ವದ ಎರಡನೇ ಅತ್ಯಂತ ಮೌಲ್ಯಯುತ ಕಾರು ತಯಾರಿಕಾ ಕಂಪೆನಿ ಎಂಬ ಸ್ಥಾನಕ್ಕೆ ಟೆಸ್ಲಾ ಬಂದಿತ್ತು. ಇದೀಗ ಆ ಕಾರಿನ ಮೌಲ್ಯದ ಎರಡರಷ್ಟನ್ನು ಟೆಸ್ಲಾ ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+