For Quick Alerts
ALLOW NOTIFICATIONS  
For Daily Alerts

ಚಿನ್ನದ ಮೌಲ್ಯದ ಶೇ 90ರ ತನಕ ಸಾಲ ಸಿಗಲು ನಿಯಮ ರೂಪಿಸಿದ RBI

|

ಬ್ಯಾಂಕ್ ಗಳು ಇನ್ನು ಮುಂದೆ ಚಿನ್ನದ ಆಭರಣಗಳ ಮೌಲ್ಯದ 90% ತನಕ ಸಾಲ ನೀಡಲಿವೆ. ಇಷ್ಟು ಸಮಯ 75% ನಷ್ಟು ನೀಡುತ್ತಿದ್ದವು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗುರುವಾರ ಹೇಳಿದೆ. ಸಾಲಗಾರರಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ LTV (ಲೋನ್ ಟು ವ್ಯಾಲ್ಯೂ) ಪ್ರಮಾಣವನ್ನು ಹೆಚ್ಚಿಸಿದೆ.

ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಚಿನ್ನದ ಮೇಲೆ ಸಾಲ ಪಡೆಯುವಂಥವರಿಗೆ ಹೆಚ್ಚಿನ ಮೊತ್ತ ಸಿಗಲಿ ಎಂದು ಮಾರ್ಚ್ 31, 2021ರ ತನಕ ಈ ವಿನಾಯಿತಿಯನ್ನು ನೀಡಲಾಗಿದೆ. ಸದ್ಯಕ್ಕೆ ಇರುವ ನಿಯಮಾವಳಿ ಪ್ರಕಾರ ಕೃಷಿಯೇತರ ಉದ್ದೇಶಗಳಿಗೆ ಚಿನ್ನದ ಮೌಲ್ಯ ಏನಿದೆ, ಅದರ ಶೇಕಡಾ 75ಕ್ಕಿಂತ ಹೆಚ್ಚಿನ ಮೊತ್ತ ನೀಡುವಂತಿಲ್ಲ. ಆದರೆ ಕೊರೊನಾ ಕಾರಣಕ್ಕೆ ಕುಟುಂಬಗಳಿಗೆ, ವ್ಯಾಪಾರಸ್ಥರಿಗೆ, ಸಣ್ಣ- ಪುಟ್ಟ ವ್ಯವಹಾರ ನಡೆಸುವವರಿಗೆ ಆರ್ಥಿಕ ಸಮಸ್ಯೆ ಆಗಿದೆ. ಆದ್ದರಿಂದ LTV ಹೆಚ್ಚಿಸಲಾಗಿದೆ ಎಂದು ತಿಳಿಸಲಾಗಿದೆ.

ಚಿನ್ನ 10 ಗ್ರಾಮ್ ಗೆ 56 ಸಾವಿರಕ್ಕೆ, ಬೆಳ್ಳಿ ಕೇಜಿ 75 ಸಾವಿರಕ್ಕೆಚಿನ್ನ 10 ಗ್ರಾಮ್ ಗೆ 56 ಸಾವಿರಕ್ಕೆ, ಬೆಳ್ಳಿ ಕೇಜಿ 75 ಸಾವಿರಕ್ಕೆ

ಕೃಷಿಯೇತರ ಉದ್ದೇಶಗಳಿಗೂ ಚಿನ್ನದ ಆಭರಣ ಅಡಮಾನ ಮಾಡಿದಾಗ ಈಗಿರುವ 75% ಮೌಲ್ಯದ ಲೆಕ್ಕವನ್ನು 90%ಗೆ ಹೆಚ್ಚಳ ಮಾಡಲಾಗಿದೆ. ಈ ವಿನಾಯಿತಿಯು ಮಾರ್ಚ್ 31, 2021ರ ತನಕ ಸಿಗಲಿದೆ ಎಂದು ತಿಳಿಸಲಾಗಿದೆ.

ಚಿನ್ನದ ಮೌಲ್ಯದ ಶೇ 90ರ ತನಕ ಸಾಲ ಸಿಗಲು ನಿಯಮ ರೂಪಿಸಿದ RBI

ಚಿನ್ನದ ಮೇಲಿನ ಸಾಲ ಎಂಬುದು ಸೆಕ್ಯೂರ್ಡ್ ಲೋನ್. ಸಾಲ ಪಡೆಯುವಂಥವರು ತಮ್ಮ ಬಳಿ ಇರುವ ಚಿನ್ನದ ಆಭರಣ, ವಸ್ತುಗಳು ಮುಂತಾದವನ್ನು ಬ್ಯಾಂಕ್ ಗಳು/ಎನ್ ಬಿಎಫ್ ಸಿಗಳಲ್ಲಿ ಅಡಮಾನ ಮಾಡಿ ಸಾಲ ಪಡೆಯಬಹುದು. ಚಿನ್ನದ ಮೇಲೆ ಎಷ್ಟು ಮೊತ್ತದ ಸಾಲ ಸಿಗುತ್ತದೆ ಎಂಬುದು ಒಂದು ಬ್ಯಾಂಕ್ ನಿಂದ ಮತ್ತೊಂದಕ್ಕೆ ವ್ಯತ್ಯಾಸ ಆಗುತ್ತದೆ.

ಉದಾಹರಣೆಗೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 20 ಸಾವಿರ ರುಪಾಯಿಯಿಂದ 20 ಲಕ್ಷದ ತನಕ ಸಾಲ ನೀಡಿದರೆ, ಮುತ್ತೂಟ್ ಫೈನಾನ್ಸ್ ನಿಂದ ಕನಿಷ್ಠ 1500 ರುಪಾಯಿಯಿಂದ ಗರಿಷ್ಠ ಎಂಬುದಕ್ಕೆ ಯಾವುದೇ ಮಿತಿ ಇಲ್ಲ. ಇನ್ನು ಸಾಲ ನೀಡುವ ಸಂಸ್ಥೆಗಳು ಮಾಡಿಕೊಂಡಿರುವ ನಿಯಮಾವಳಿಗಳಂತೆ ಕೆಲವು ದಾಖಲೆಗಳನ್ನು ಕೇಳಬಹುದು. ಚಿನ್ನದ ಸಾಲ ಪಡೆಯಲು ಪ್ರೊಸೆಸಿಂಗ್ ಶುಲ್ಕ ನೀಡಬೇಕಾಗುತ್ತದೆ. ಅದು ಚಿನ್ನದ ಗುಣಮಟ್ಟ ಪರೀಕ್ಷೆ ಮಾಡುವವರಿಗೆ ನೀಡಬೇಕಾಗುತ್ತದೆ. ಅದನ್ನು ಸಾಲ ಪಡೆಯುವವರೇ ಕೊಡಬೇಕು.

English summary

Now You Can Get Gold Loan Up To Value Of 90 Percent

Now gold jewelry get loan up to value of 90 percent from banks and NBFC's. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X