ಒಂದು ಕಡೆ ಭಾರತದಲ್ಲಿ ತಮ್ಮ ವಿದ್ಯಾಭ್ಯಾಸಕ್ಕೆ ಅನುಗುಣವಾದ ಸೂಕ್ತ ಉದ್ಯೋಗ ಲಭಿಸುತ್ತಿಲ್ಲ ಅಥವಾ ಹೆಚ್ಚಿನ ವೇತನದ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಭಾರತೀಯರು ವಿದೇಶಿ ರಾಷ್ಟ್ರಗಳತ್ತ ಮುಖಮಾಡುವುದು ಸಹಜ ಪ್ರಕ್ರಿಯೆಯಾಗಿದೆ. ಹೀಗೆ ತೆರಳಿದ ಭಾರತೀಯರು ಹಲವು ವರ್ಷಗಳ ಕಾಲ ಅಲ್ಲೇ ಕೆಲಸ ಮಾಡುತ್ತಾ, ಮುಂದೊಂದು ದಿನ ಅದೇ ದೇಶದ ನಾಗರಿಕರಾಗಿ ಬದಲಾಗುತ್ತಾರೆ. ಅಥವಾ ಭಾರತೀಯ ನಾಗರಿಕರಾಗಿದ್ದರೂ ಹೆಚ್ಚಿನ ಸಮಯವನ್ನೇ ಅಲ್ಲೇ ಕಳೆಯುತ್ತಾರೆ.
ಇಂತಹ ಭಾರತೀಯರನ್ನು ಸಾಮಾನ್ಯವಾಗಿ ಅನಿವಾಸಿ ಭಾರತೀಯರು ಎಂದು ಕರೆಯಲಾಗುತ್ತದೆ. ಎಲ್ಲರಿಗೂ ತಿಳಿದಿರುವಂತೆ ಇವರು ಪ್ರತೀ ತಿಂಗಳು ಅಥವಾ ಇಂತಿಷ್ಟೇ ಸಮಯಕ್ಕೆ ತಾವು ದುಡಿದ ಮೊತ್ತವನ್ನು ಭಾರತದಲ್ಲಿರುವ ತಮ್ಮ ಕುಟುಂಬಿಕರ ಖಾತೆಗೆ ರವಾನಿಸುತ್ತಾರೆ. ಈ ಮೂಲಕ ವಿದೇಶಗಳಲ್ಲಿ ಇದ್ದುಕೊಂಡೇ ಅವರು ಭಾರತದಲ್ಲಿರುವ ತಮ್ಮ ಕುಟುಂಬದ ಸದಸ್ಯರಿಗೆ ಆಧಾರವಾಗುತ್ತಾರೆ.

ಇನ್ನು ಸದ್ಯದ ಸಂಗತಿ ಎಂದರೆ ಇಂಥ ನಾಗರಿಕರು 2025ರ ಹಣಕಾಸು ವರ್ಷದಲ್ಲಿ ಅನಿವಾಸಿ ಭಾರತೀಯ ಠೇವಣಿ ಯೋಜನೆಗಳಲ್ಲಿ ಕಳೆದ ಏಪ್ರಿಲ್-ಅಕ್ಟೋಬರ್‌ನಲ್ಲಿ ಸುಮಾರು 12 ಶತಕೋಟಿ ಡಾಲರ್ ಮೊತ್ತವನ್ನು ಠೇವಣಿ ಮಾಡಿರುವುದು ಬಹಿರಂಗವಾಗಿದೆ. ಈ ಮೂಲಕ ಕಳೆದ ಇದೇ ಅವಧಿಗಿಂತ ಸದ್ಯದ ಮೊತ್ತವು ದ್ವಿಗುಣವಾಗಿದೆ ಎನ್ನಲಾಗಿದೆ.
ಇದು ಭಾರತದಲ್ಲಿರುವ ಸರ್ಕಾರದ ಮೇಲಿನ ನಂಬಿಕೆಯನ್ನು ಕೂಡ ಪ್ರತಿಬಿಂಬಿಸುತ್ತಿದೆ ಎನ್ನಲಾಗಿದೆ. ಯಾಕೆಂದರೆ ಯಾವುದೇ ರಾಷ್ಟ್ರದಲ್ಲಿ ಉತ್ತಮ ಆಡಳಿತ ನಡೆಸುವ ರಾಷ್ಟ್ರಗಳ ನಾಯಕರ ಆಡಲಿತ ವೈಖರಿ ಬಗ್ಗೆ ಆಯಾ ದೇಶದ ನಾಗರಿಕರು ನಂಬಿಕೆ ಹೊಂದಿರಬೇಕಾಗಿರುವುದು ಅಗತ್ಯವಾಗಿದೆ. ಇನ್ನು NRI ಠೇವಣಿ ಯೋಜನೆಗಳಲ್ಲಿ ವಿದೇಶಿ ಕರೆನ್ಸಿ ಅನಿವಾಸಿ (FCNR) ಠೇವಣಿಗಳು, ಅನಿವಾಸಿ ಬಾಹ್ಯ (NRE) ಠೇವಣಿಗಳು ಮತ್ತು ಅನಿವಾಸಿ ಸಾಮಾನ್ಯ (NRO) ಠೇವಣಿಗಳನ್ನು ಕೂಡ ಒಳಗೊಂಡಿದೆ.
ದ್ವಿಗುಣಗೊಂಡ ಒಳಹರಿವು
ಇನ್ನು ಸದ್ಯದ ಏಪ್ರಿಲ್-ಅಕ್ಟೋಬರ್ (FY25) ನಲ್ಲಿ NRI ಯೋಜನೆಗಳಿಗೆ $11.89 ಶತಕೋಟಿ ಡಾಲರ್ ಒಳಹರಿವು (ಡೆಪಾಸಿಟ್) ದಾಖಲಾಗಿದೆ. ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ 6.11 ಶತಕೋಟಿ ಡಾಲರ್ ದಾಖಲಾಗಿತ್ತು. ಇದರೊಂದಿಗೆ, ಅಕ್ಟೋಬರ್ 2024 ರಂತೆ ಒಟ್ಟು ಬಾಕಿ ಇರುವ ಎನ್‌ಆರ್‌ಐ ಠೇವಣಿಗಳು 162.69 ಬಿಲಿಯನ್ ಡಾಲರ್ ಆಗಿದೆ.
ಅದರಲ್ಲೂ ಕಳೆದ ವರ್ಷದ ಇದೇ ಅವಧಿಗೆ ಮೊತ್ತವನ್ನು ಹೋಲಿಕೆ ಮಾಡಿದರೆ 143.48 ಶತಕೋಟಿ ಡಾಲರ್ ಇತ್ತು. ಅಕ್ಟೋಬರ್‌ನಲ್ಲಿಯೇ, ಸಾಗರೋತ್ತರ ಭಾರತೀಯರು ವಿವಿಧ NRI ಠೇವಣಿ ಯೋಜನೆಗಳಲ್ಲಿ 1 ಶತಕೋಟಿ ಡಾಲರ್‌ಗಿಂತ ಸ್ವಲ್ಪ ಹೆಚ್ಚು ಹಣವನ್ನು ಠೇವಣಿ ಮಾಡಿದ್ದಾರೆ. ಈಗಾಗಲೇ ಹೇಳಿದಂತೆ ಎನ್‌ಆರ್‌ಐ ಠೇವಣಿ ಯೋಜನೆಗಳು ವಿದೇಶಿ ಕರೆನ್ಸಿ ಅನಿವಾಸಿ (ಎಫ್‌ಸಿಎನ್‌ಆರ್) ಠೇವಣಿಗಳು, ಅನಿವಾಸಿ ಬಾಹ್ಯ (ಎನ್‌ಆರ್‌ಇ) ಠೇವಣಿಗಳು ಮತ್ತು ಅನಿವಾಸಿ ಸಾಮಾನ್ಯ (ಎನ್‌ಆರ್‌ಒ) ಠೇವಣಿಗಳನ್ನು ಒಳಗೊಂಡಿವೆ.
ಇನ್ನು ಪ್ರಸಕ್ತ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಹಣದ ಒಳಹರಿವು FCNR (B) ಠೇವಣಿಗಳಿಗೆ ಬಂದಿವೆ. RBI ಮಾಹಿತಿಯ ಪ್ರಕಾರ, ಈ ಅವಧಿಯಲ್ಲಿ ಸುಮಾರು 6.1 ಶತಕೋಟಿ ಡಾಲರ್ ಈ ಖಾತೆಗಳಿಗೆ ಬಂದಿದೆ. ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ 2.06 ಶತಕೋಟಿ ಡಾಲರ್ ಇತ್ತು. ಇನ್ನು
FCNR (B) ಖಾತೆಯು ಗ್ರಾಹಕರಿಗೆ ಒಂದರಿಂದ ಐದು ವರ್ಷಗಳವರೆಗೆ ಮುಕ್ತವಾಗಿ ಪರಿವರ್ತಿಸಬಹುದಾದ ವಿದೇಶಿ ಕರೆನ್ಸಿಗಳಲ್ಲಿ ಸ್ಥಿರ ಠೇವಣಿ ಇರಿಸಿಕೊಳ್ಳಲು ಅನುಮತಿ ನೀಡುತ್ತದೆ. ಖಾತೆಯನ್ನು ವಿದೇಶಿ ಕರೆನ್ಸಿಯಲ್ಲಿ ನಿರ್ವಹಿಸುವುದರಿಂದ, ಠೇವಣಿಯ ಅವಧಿಯಲ್ಲಿ ಕರೆನ್ಸಿ ಏರಿಳಿತಗಳ ಸಮಯದಲ್ಲೂ ಇದು ಹಣವನ್ನು ಸುರಕ್ಷಿತಗೊಳಿಸುತ್ತದೆ. ಹಾಗಾಗಿ ವಿದೇಶದಲ್ಲಿರುವ ಭಾರತೀಯರು ಯಾವುದೇ ಆತಂಕವನ್ನು ಹೊಂದಬೇಕಾದ ಅಗತ್ಯತೆ ಇರುವುದಿಲ್ಲ.
ಬಡ್ಡಿದರ ಮಿತಿ ಹೆಚ್ಚಳದಿಂದ ನೆರವು
ಇತ್ತೀಚೆಗೆ ಮುಕ್ತಾಯಗೊಂಡ ಹಣಕಾಸು ನೀತಿ ಸಭೆಯಲ್ಲಿ RBI ಯು ವಿದೇಶಿ ಕರೆನ್ಸಿ ಅನಿವಾಸಿ ಬ್ಯಾಂಕ್ [FCNR (B)] ಠೇವಣಿಗಳ ಮೇಲಿನ ಬಡ್ಡಿದರದ ಮಿತಿಗಳನ್ನು ಹೆಚ್ಚಿಸಿತು. ಆರ್‌ಬಿಐನ ಈ ಕ್ರಮವು ಬ್ಯಾಂಕ್‌ಗಳಿಗೆ ನಿಧಿಯನ್ನು ಸಂಗ್ರಹಿಸಲು ಹೆಚ್ಚುವರಿ ಮಾರ್ಗವನ್ನು ಒದಗಿಸುವ ಗುರಿಯನ್ನು ಹೊಂದಿದೆ, ಇದರಿಂದಾಗಿ ಹೆಚ್ಚಿನ ಡಾಲರ್ ಒಳಹರಿವು ಉತ್ತೇಜಿಸುತ್ತದೆ, ಇದು ಯುಎಸ್ ಡಾಲರ್ ವಿರುದ್ಧ ತೀವ್ರವಾಗಿ ಕುಸಿಯುತ್ತಿರುವ ಸಮಯದಲ್ಲಿ ರೂಪಾಯಿಗೆ ಹೆಚ್ಚಿನ ನೆರವು ನೀಡುತ್ತದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications