ನವದೆಹಲಿ, ಜುಲೈ 19: ಭಾರತದ ಅತಿದೊಡ್ಡ ಸ್ಟಾಕ್ ಎಕ್ಸ್‌ಚೇಂಜ್(ಎನ್‌ಎಸ್‌ಇ)ಯ ಗೌಪ್ಯ ಮಾಹಿತಿ ಹಂಚಿಕೆ, ಷೇರು ಪರಭಾರೆ ಪ್ರಕರಣಕ್ಕೆ ಪೂರಕವಾಗಿ ಅಕ್ರಮ ಫೋನ್ ಟ್ಯಾಪಿಂಗ್ ಪ್ರಕರಣದ ತನಿಖೆ ಜೋರಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ಬಂಧಿಸಿದ್ದಾರೆ. ಮುಂಬೈ ನಗರ ಮಾಜಿ ಪೊಲೀಸ್ ಆಯುಕ್ತ ಸಂಜಯ್ ಪಾಂಡೆರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಎನ್‌ಎಸ್‌ಇ ಫೋನ್ ಟ್ಯಾಪಿಂಗ್ ಮಾಡಿದ ಆರೋಪ ಮೇಲೆ ಎನ್‌ಎಸ್‌ಇ ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ, ರವಿ ನಾರಾಯಣ್, ಮುಂಬೈನ ಮಾಜಿ ಪೊಲೀಸ್ ಆಯುಕ್ತ ಸಂಜಯ್ ಪಾಂಡೆ ವಿರುದ್ಧ ಸಿಬಿಐ ಹೊಸದಾಗಿ ಪ್ರಕರಣ ದಾಖಲಿಸಿಕೊಂಡಿದೆ. 2009ರಿಂದ 2017ರ ಅವಧಿಯಲ್ಲಿಎನ್‌ಎಸ್‌ಇ ಫೋನ್ ಟ್ಯಾಪಿಂಗ್ ನಡೆದಿದೆ ಎಂದು ಆರೋಪಿಸಲಾಗಿದೆ.
ಸಿಬಿಐ ನಂತರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಂಜಯ್ ಪಾಂಡೆ ವಿಚಾರಣೆ ನಡೆಸಿದ್ದರು. ಮನಿಲಾಂಡ್ರಿಂಗ್ ನಿಯಂತ್ರಣ ಕಾಯ್ದೆ(PMLA) ಉಲ್ಲಂಘನೆ ಆರೋಪದಡಿಯಲ್ಲಿ ನಡೆದ ವಿಚಾರಣೆ ಬಳಿಕ ಬಂಧನವಾಗಿದೆ.

1986 ಬ್ಯಾಚ್ ಅಧಿಕಾರಿ ಸಂಜಯ್ ಪಾಂಡೆ ಜೂನ್ 30 ರಂದು ನಿವೃತ್ತರಾಗಿದ್ದಾರೆ. ಇದಕ್ಕೂ ಮೊದಲು ನಾಲ್ಕು ತಿಂಗಳ ಕಾಲ ಮುಂಬೈ ಪೊಲೀಸ್ ಕಮಿಷನರ್, ಮಹಾರಾಷ್ಟ್ರದ ಹಾಲಿ ಪೊಲೀಸ್ ಮಹಾನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಜುಲೈ 5 ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ದೆಹಲಿ ಕಚೇರಿಯಲ್ಲಿ ವಿಚಾರಣೆಗೆ ಕರೆಸಿಕೊಳ್ಳಲಾಗಿತ್ತು.
ಪಾಂಡೆ ಹುಟ್ಟು ಹಾಕಿದ್ದ ಐಸೆಕ್ ಸರ್ವೀಸ್ ಮೂಲಕ ಎನ್ಎಸ್ಇ ಉದ್ಯೋಗಿಗಳ ಮೇಲೆ ನಿಗಾ ಇಡಲಾಗುತ್ತಿತ್ತು. ಈ ರೀತಿ ಗುಪ್ತ ಕಾರ್ಯಾಚರಣೆ ಮಾಡಲು ಎನ್ಎಸ್ಇ ಮಾಜಿ ಮುಖ್ಯಸ್ಥರಿಂದಲೇ ಆದೇಶ ಬಂದಿತ್ತು ಎಂಬ ಆರೋಪವಿದೆ. ಸಂಸ್ಥೆಯಲ್ಲಿ ಅವ್ಯವಹಾರ ನಡೆದರೆ ತಕ್ಷಣದ ಅಲರ್ಟ್ ನೀಡಬೇಕಾದ್ದು, ಐಸೆಕ್ ಸರ್ವೀಸ್ ಮುಖ್ಯ ಕಾರ್ಯವಾಗಿತ್ತು. ಆದರೆ, ಅದನ್ನು ಬಿಟ್ಟು ಉದ್ಯೋಗಿಗಳ ಮೇಲೆ ನಿಗಾ ಇಡಲಾಗುತ್ತಿತ್ತು ಎಂದು ಸಿಬಿಐ ಹಾಗೂ ಇಡಿ ತನ್ನ ವರದಿಯಲ್ಲಿ ತಿಳಿಸಿವೆ.
2018 ರಿಂದ NSE ಸಹ-ಸ್ಥಳ ಹಗರಣದ ತನಿಖೆ ನಡೆಸುತ್ತಿದೆ. 2010 ಮತ್ತು 2015 ರ ನಡುವೆ ರಾಮಕೃಷ್ಣ ಸಿಇಒ ಆಗಿದ್ದಾಗ ಹಲವಾರು ಸ್ಟಾಕ್ ಬ್ರೋಕಿಂಗ್ ಕಂಪನಿಗಳು NSE ಯ ಸರ್ವರ್‌ಗೆ ಆದ್ಯತೆಯ ಪ್ರವೇಶವನ್ನು ಪಡೆದಿವೆ ಎಂದು ಆರೋಪಿಸಲಾಗಿದೆ.
ಎನ್‌ಎಸ್‌ಇ ಸ್ಥಳ ಪರಭಾರೆ ಪ್ರಕರಣದಲ್ಲಿ, ಆರೋಪಿ ರಾಮಕೃಷ್ಣ ತನ್ನ ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಆರೋಪಿ ಆನಂದ್ ಸುಬ್ರಮಣಿಯನ್ ಅವರನ್ನು ಗ್ರೂಪ್ ಆಪರೇಟಿಂಗ್ ಆಫೀಸರ್ ಮತ್ತು ಎಂಡಿ ಸಲಹೆಗಾರರನ್ನಾಗಿ ಮರು ನೇಮಕ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಸಿಬಿಐ ಹೇಳಿದೆ. ಏಪ್ರಿಲ್ 1, 2015 ರಿಂದ, NRC ಮತ್ತು ಮಂಡಳಿಯ ಗಮನಕ್ಕೆ ತರದೆ ನೇಮಕಾತಿ ಮಾಡಲಾಗಿದೆ ಎಂದು ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.


Click it and Unblock the Notifications