ಒಡಿಶಾದಲ್ಲಿ ನಡೆದ ಭೀಕರ ರೈಲು ಅಪಘಾತದ ಬಳಿಕ ಭಾರತದ ವಿಮಾ ದೈತ್ಯ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಲು ಮುಂದಾಗಿದೆ. ಎಲ್‌ಐಸಿ ತ್ವರಿತ ಕ್ರಮದ ಅಗತ್ಯವನ್ನು ಗುರುತಿಸಿದೆ. ಎಲ್‌ಐಸಿಯು ಪೀಡಿತ ಕುಟುಂಬಗಳಿಗೆ ಕ್ಲೈಮ್ ಪ್ರಕ್ರಿಯೆಯನ್ನು ಸರಳಗೊಳಿಸಿದೆ.
ಶನಿವಾರ ಸಂಜೆಯ ವೇಳೆಗೆ ಈ ಬಗ್ಗೆ ಭಾರತೀಯ ಜೀವ ವಿಮಾ ನಿಗಮ ಹೇಳಿಕೆಯನ್ನು ನೀಡಿದೆ. "ಬಾಲಸೋರ್ ರೈಲು ಅಪಘಾತದ ಬಗ್ಗೆ ನಮ್ಮ ಸಂತಾಪವನ್ನು ನಾವು ವ್ಯಕ್ತಪಡಿಸುತ್ತೇವೆ. ಈ ರೈಲು ಅಪಘಾತದಿಂದ ಪ್ರಭಾವಕ್ಕೆ ಒಳಗಾದವರ ಪರವಾಗಿ ನಿಲ್ಲಲು ಎಲ್ಐಸಿಯು ಬದ್ಧವಾಗಿದೆ," ಎಂದು ಎಲ್‌ಐಸಿ ಅಧ್ಯಕ್ಷ ಸಿದ್ಧಾರ್ಥ್ ಮೊಹಾಂತಿ ಪುನರುಚ್ಚರಿಸಿದ್ದಾರೆ.

ಸಂತ್ರಸ್ತ ಕುಟುಂಬಗಳಿಗೆ ಆರ್ಥಿಕ ಸಹಾಯವನ್ನು ನೀಡುವ ನಿಟ್ಟಿನಲ್ಲಿ ಎಲ್‌ಐಸಿ ಕ್ರಮವನ್ನು ಕೈಗೊಂಡಿದೆ. ಎಲ್‌ಐಸಿಯು ಕ್ಲೈಮ್ ಇತ್ಯರ್ಥ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ತ್ವರಿತವಾಗಿ ಕ್ಲೈಮ್ ಮಾಡಲು ಸಾಧ್ಯವಾಗುವಂತೆ ಪ್ರಕ್ರಿಯೆ ಸರಳಗೊಳಿಸಲಾಗಿದೆ ಎಂದು ಎಲ್‌ಐಸಿ ಅಧ್ಯಕ್ಷ ಸಿದ್ಧಾರ್ಥ್ ಮೊಹಾಂತಿ ಹೇಳಿದ್ದಾರೆ.
ರಿಜಿಸ್ಟಾರ್ಡ್ ಡೆತ್ ಬೆನಿಫಿಟ್ ಅಗತ್ಯವಿಲ್ಲ!
ಭಾರತೀಯ ಜೀವ ವಿಮಾ ನಿಗಮವು ಎಲ್‌ಐಸಿ ಪಾಲಿಸಿಗಳು ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಡಿ ಪಾಲಿಸಿದಾರರಿಗೆ ರಿಯಾಯಿತಿಗಳನ್ನು ಘೋಷಿಸಿದೆ. ಇನ್ನು ಗಮನಾರ್ಹವಾಗಿ ರಿಜಿಸ್ಟಾರ್ಡ್ ಡೆತ್ ಬೆನಿಫಿಟ್ ಅಗತ್ಯವಿಲ್ಲ. ರೈಲ್ವೇ, ಪೊಲೀಸ್ ಅಥವಾ ಯಾವುದೇ ರಾಜ್ಯ ಮತ್ತು ಕೇಂದ್ರ ಪ್ರಾಧಿಕಾರದಿಂದ ನೀಡಲಾದ ಪಟ್ಟಿಗಳನ್ನು ಸಾವಿನ ಪುರಾವೆಯನ್ನು ಸ್ವೀಕಾರ ಮಾಡಲು ಎಲ್‌ಐಸಿ ನಿರ್ಧರಿಸಿದೆ.
ತಮ್ಮ ಕುಟುಂಬದ ವ್ಯಕ್ತಿಯು ಸಾವನ್ನಪ್ಪಿದ ಬಳಿಕ ಡೆತ್ ಬೆನಿಫಿಟ್ ಅನ್ನು ಪಡೆಯಲು ಸಹಾಯವಾಗುವಂತೆ ಎಲ್‌ಐಸಿಯು ಈ ಡೆತ್ ಸರ್ಟಿಫಿಕೇಟ್ ನಿಯಮವನ್ನು ಸರಳಗೊಳಿಸಿದೆ. ಇನ್ನು ರೈಲ್ವೆ ದುರಂತದಲ್ಲಿ ಸಾವನ್ನಪ್ಪಿದವರಿಗೆ ಕ್ಲೈಮ್ ಮಾಡಲು ಸಹಾಯವಾಗಲು ಎಲ್‌ಐಸಿಯು ಸಹಾಯ ಕೇಂದ್ರವನ್ನು ಸ್ಥಾಪನೆ ಮಾಡಿದೆ.
ಕ್ಲೈಮ್ ಪ್ರಕ್ರಿಯೆಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳು ಅಥವಾ ಸಮಸ್ಯೆಗಳನ್ನು ಪರಿಹರಿಸಲು ಸಹಾಯವನ್ನು ಕೂಡಾ ಎಲ್‌ಐಸಿ ಮಾಡುತ್ತಿದೆ. ಹೆಚ್ಚುವರಿಯಾಗಿ, ಸಹಾಯ ಕೇಂದ್ರವನ್ನು ಆರಂಭಿಸಿದ್ದು, ಎಲ್‌ಐಸಿ ಕಾಲ್ ಸೆಂಟರ್ ಸಂಖ್ಯೆಯನ್ನು (022-68276827) ಒದಗಿಸಿದೆ. ಸಂತ್ರಸ್ತರ ಕುಟುಂಬಕ್ಕೆ ಕ್ಲೈಮ್ ಮೊತ್ತ ಲಭ್ಯವಾಗುವಂತೆ ಎಲ್ಲ ಪ್ರಯತ್ನವನ್ನು ಎಲ್‌ಐಸಿ ಮಾಡುತ್ತಿದೆ ಎಂದು ಸ್ಪಷ್ಟಪಡಿಸಿದೆ.
ಒಡಿಶಾದ ಬಾಲಸೋರ್‌ನಲ್ಲಿ ಮೂರು ರೈಲುಗಳು ಡಿಕ್ಕಿ ಹೊಡೆದು 288 ಮಂದಿ ಜೀವವನ್ನು ಕಳೆದುಕೊಂಡಿದ್ದಾರೆ. ಇನ್ನು ಸುಮಾರು 900 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಸರಣಿ ರೈಲು ಅಪಘಾತದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ಸಹಾಯ ಮಾಡಲು ಎಲ್‌ಐಸಿ ಮುಂದಾಗಿದೆ.
ಡೆತ್ ಬೆನಿಫಿಟ್ ಅನ್ನು ಕ್ಲೈಮ್ ಮಾಡಲು ಬೇಕಾದ ಮೂಲ ದಾಖಲೆಗಳು
* ಕೆಲವೊಂದು ದಾಖಲೆಗಳು ಕಡ್ಡಾಯವಾಗಿ ಬೇಕಿದೆ.
* ಪಾಲಿಸಿಯ ಒರಿಜಿನಲ್ ದಾಖಲೆಗಳು ಬೇಕಾಗಿದೆ.
* ಸ್ಥಳೀಯ ಅಧಿಕಾರಿಗಳು ಸಹಿ ಮಾಡಿದ ಅಥವಾ ನೀಡಿದ ಡೆತ್ ಸರ್ಟಿಫಿಕೇಟ್ ಪ್ರತಿ
* ಡೆತ್ ಕ್ಲೈಮ್ ಅರ್ಜಿ ಫಾರ್ಮ್ (ಫಾರ್ಮ್ ಎ)
* ರದ್ದುಪಡಿಸಿದ ಚೆಕ್ ಅಥವಾ ಬ್ಯಾಂಕ್ ಖಾತೆಯ ಪಾಸ್‌ಬುಕ್ ಜೊತೆಗೆ ಬ್ಯಾಂಕ್ ಅಧಿಕಾರಿಗಳು ದೃಢೀಕರಿಸಿದ ನೆಫ್ಟ್ ಆದೇಶ ನಮೂನೆ
* ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಆಧಾರ್ (ಯುಐಡಿ) ಕಾರ್ಡ್, ನಾಮಿನಿಯ ಫೋಟೊ ಗುರುತಿನ ಪುರಾವೆ ಇತ್ಯಾದಿ
ಇತ್ತೀಚಿನ ಅಪಘಾತದ ನಂತರ, ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ತಕ್ಷಣವೇ ಎಕ್ಸ್-ಗ್ರೇಷಿಯಾ ಪಾವತಿ ಯೋಜನೆಯನ್ನು ಘೋಷಿಸಿದ್ದಾರೆ. ಪ್ರಯಾಣಿಕರು ಮೃತಪಟ್ಟರೆ ಪರಿಹಾರ ಮೊತ್ತ 10 ಲಕ್ಷ ರೂಪಾಯಿ ಹಾಗೂ ತೀವ್ರವಾಗಿ ಗಾಯಗೊಂಡವರಿಗೆ 2 ಲಕ್ಷ ರೂಪಾಯಿ, ಸಣ್ಣಪುಟ್ಟ ಗಾಯಗಳಾದವರಿಗೆ 50,000 ರೂಪಾಯಿ ನೀಡಲಾಗುವುದು ಎಂದು ಕೂಡಾ ಘೋಷಣೆ ಮಾಡಿದ್ದಾರೆ.


Click it and Unblock the Notifications