ತೈಲ ದರ ಸಮರ ಸಾರಿದ ಸೌದಿ; 20 ವರ್ಷದಲ್ಲೇ ಅತಿ ದೊಡ್ಡ ಬೆಲೆ ಇಳಿಕೆ

ತೈಲ ಬೆಲೆ ಸೋಮವಾರದಂದು 20 ಪರ್ಸೆಂಟ್ ಗೂ ಹೆಚ್ಚು ಕುಸಿಯಿತು. ತೈಲದ ಪ್ರಮುಖ ಪೂರೈಕೆದಾರ ರಾಷ್ಟ್ರವಾದ ಸೌದಿ ಅರೇಬಿಯಾ ದರ ಸಮರಕ್ಕೆ ಇಳಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಕಂಡುಬಂದಿದೆ. ಇಂಧನ ಮಾರುಕಟ್ಟೆಗೆ ಬೆಂಬಲ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾವು ಈ ರೀತಿಯ ಪ್ರತಿಕ್ರಿಯೆ ನೀಡಿದೆ.

ಎರಡು ಪ್ರಮುಖ ಕಾಂಟ್ರ್ಯಾಕ್ಟ್ ಗಳು ಏಷ್ಯನ್ ಮಾರುಕಟ್ಟೆಯ ಸೋಮವಾರ ಬೆಳಗ್ಗೆ ವ್ಯವಹಾರದಲ್ಲಿ 20 ಪರ್ಸೆಂಟ್ ಕುಸಿದವು. ವೆಸ್ಟ್ ಟೆಕ್ಸಾಸ್ ಬ್ಯಾರಲ್ ಗೆ 32 ಅಮೆರಿಕನ್ ಡಾಲರ್ ನಷ್ಟು ಇಳಿದರೆ, ಬ್ರೆಂಟ್ ಕಚ್ಚಾ ತೈಲ ಬ್ಯಾರಲ್ 33 ಡಾಲರ್ ಗೂ ಹೆಚ್ಚು ಇಳಿಕೆ ಕಂಡಿತು. ಸೌದಿ ಅರೇಬಿಯಾವು ಭಾನುವಾರ ತೈಲ ಸಮರವನ್ನೇ ಶುರು ಮಾಡಿದ್ದು, ಕಳೆದ ಇಪ್ಪತ್ತು ವರ್ಷದಲ್ಲೇ ಅತಿ ದೊಡ್ಡ ದರ ಕಡಿತ ಮಾಡಿದೆ.

ತೈಲ ಉತ್ಪಾದನೆ ಕಡಿತ ಮಾಡಲು ಒಪ್ಪದ ರಷ್ಯಾ

ತೈಲ ಉತ್ಪಾದನೆ ಕಡಿತ ಮಾಡಲು ಒಪ್ಪದ ರಷ್ಯಾ

ತೈಲ ಉತ್ಪಾದನೆ ಕಡಿಮೆ ಮಾಡುವ ವಿಚಾರದಲ್ಲಿ ಒಪೆಕ್ ಮತ್ತು ಅದರ ಸಹವರ್ತಿಗಳ ಜತೆಗೆ ಮಾತುಕತೆ ವಿಫಲವಾಗಿದೆ. ಹೊಸ ಕೊರೊನಾ ವೈರಾಣು ಪ್ರಭಾವದ ವಿರುದ್ಧ ಹೋರಾಡಲು ದೊಡ್ಡ ಮಟ್ಟದ ಉತ್ಪಾದನೆ ಕಡಿತ ಮಾಡಲು ಪ್ರಮುಖ ತೈಲ ಉತ್ಪಾದಕರ ಸಭೆ ನಡೆದಿತ್ತು. ಆದರೆ ಪೂರೈಕೆ ಕಡಿಮೆ ಮಾಡುವುದಕ್ಕೆ ರಷ್ಯಾ ಒಪ್ಪಲಿಲ್ಲ. ಅದಕ್ಕೆ ಪ್ರತಿಕ್ರಿಯೆಯಾಗಿ ಸೌದಿ ಅರೇಬಿಯಾವು ಏಪ್ರಿಲ್ ನಲ್ಲಿ ನೀಡಲಿರುವ ತೈಲವನ್ನು ಬ್ಯಾರಲ್ ಗೆ 4ರಿಂದ 6 ಡಾಲರ್ ಕಡಿಮೆ ಮಾಡಿ ಏಷ್ಯನ್ ರಾಷ್ಟ್ರಗಳಿಗೆ ಮತ್ತು 7 ಡಾಲರ್ ಕಡಿಮೆಗೆ ಯುನೈಟೆಡ್ ಸ್ಟೇಟ್ಸ್ ಗೆ ಪೂರೈಸಲಿದೆ. ಯುರೋಪ್ ಗೆ ಬ್ರೆಂಟ್ ಗಿಂತ ಬ್ಯಾರಲ್ ಗೆ 10.25 ಡಾಲರ್ ಕಡಿಮೆ ದರಕ್ಕೆ ತೈಲ ಪೂರೈಸಲಿದೆ.

ತೈಲ ದರದ ಮೇಲೆ ಮಿತಿ ವಿಧಿಸಲಾಗುವುದು

ತೈಲ ದರದ ಮೇಲೆ ಮಿತಿ ವಿಧಿಸಲಾಗುವುದು

ರಷ್ಯಾಗೆ ಬುದ್ಧಿ ಕಲಿಸಬೇಕು ಎಂಬ ಕಾರಣಕ್ಕೆ ಸೌದಿ ಅರೇಬಿಯಾ ಈ ಕೆಲಸ ಮಾಡಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಮುಂದಿನ ಕೆಲ ತಿಂಗಳ ಕಾಲ ತೈಲ ದರದ ಮೇಲೆ ಮಿತಿ ವಿಧಿಸಲಾಗುವುದು. ಏಕೆಂದರೆ, ಕೊರೊನಾ ವೈರಾಣು ಆರ್ಥಿಕ ಪ್ರಗತಿ ಮೇಲೆ ಪರಿಣಾಮ ಬೀರಿದೆ ಮತ್ತು ಸೌದಿ ಅರೇಬಿಯಾವು ವಿವಿಧ ಗುಣಮಟ್ಟದ ತೈಲವನ್ನು ಮುಕ್ತವಾಗಿ ಮಾರಾಟಕ್ಕೆ ಇಟ್ಟು, ಭಾರೀ ರಿಯಾಯಿತಿ ನೀಡುತ್ತಿದೆ ಎನ್ನಲಾಗಿದೆ. ಕೊರೊನಾ ವೈರಾಣು ಆತಂಕಕ್ಕೆ ಜಾಗತಿಕ ಮಾರುಕಟ್ಟೆಯು ಇತ್ತೀಚಿನ ವಾರಗಳಲ್ಲಿ ಭಾರೀ ಇಳಿಕೆಯಾಗಿದೆ. ಟೊಕಿಯೋ ಷೇರು ಮಾರುಕಟ್ಟೆ ಸೋಮವಾರದ ಪ್ರಾರಂಭದಲ್ಲಿ ಭಾರೀ ಇಳಿಕೆ ಕಂಡಿದ್ದು, ತೈಲ ಬೆಲೆಯಲ್ಲೂ ಕುಸಿತವಾಗಿದೆ. ಯೆನ್ ವಿರುದ್ಧ ಡಾಲರ್ ಮೌಲ್ಯವು ಕುಸಿತ ಕಂಡಿದೆ.

1991ರ ಗಲ್ಫ್ ಯುದ್ಧದ ನಂತರ ಕಂಡ ಅತಿ ದೊಡ್ಡ ಬೆಲೆ ಇಳಿಕೆ

1991ರ ಗಲ್ಫ್ ಯುದ್ಧದ ನಂತರ ಕಂಡ ಅತಿ ದೊಡ್ಡ ಬೆಲೆ ಇಳಿಕೆ

ಮಾರುಕಟ್ಟೆ ಶುರುವಾದ ಕೆಲ ಸಮಯಕ್ಕೆ ಕಚ್ಚಾ ತೈಲ ಬೆಲೆಯಲ್ಲಿ 30 ಪರ್ಸೆಂಟ್ ನಷ್ಟು ಕುಸಿತ ಕಂಡಿತು. ಆ ನಂತರ ಸ್ವಲ್ಪ ಚೇತರಿಕೆ ಕಂಡಿತು. 1991ರ ಗಲ್ಫ್ ಯುದ್ಧದ ನಂತರ ಕಂಡ ಅತಿ ದೊಡ್ಡ ಬೆಲೆ ಇಳಿಕೆ ಇದಾಗಿದೆ. 2014ರಲ್ಲೂ ಇದೇ ರೀತಿ ತೈಲ ದರ ಸಮರ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು. ಆಗ ತೈಲ ದರವು ಬ್ಯಾರಲ್ ಗೆ 30 ಅಮೆರಿಕನ್ ಡಾಲರ್ ಗಿಂತಲೂ ಕೆಳಗಿಳಿದಿತ್ತು.

ಗಲ್ಫ್ ರಾಷ್ಟ್ರಗಳ ಆದಾಯಕ್ಕೆ ಹೊಡೆತ

ಗಲ್ಫ್ ರಾಷ್ಟ್ರಗಳ ಆದಾಯಕ್ಕೆ ಹೊಡೆತ

ತೈಲ ಬೆಲೆಯಲ್ಲಿ ಇಳಿಕೆ ಆಗಿರುವುದು ಗಲ್ಫ್ ರಾಷ್ಟ್ರಗಳ ಆದಾಯಕ್ಕೆ ಹೊಡೆತ ನೀಡಿದೆ. ಕೆಲವು ಅನಿವಾರ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಾಡಿದೆ. ಬಜೆಟ್ ನ ಕೊರತೆ ನೀಗಿಸಲು ಸಾಲ ಪಡೆಯುವಂತೆ ಆಗಿದೆ. ಇಂಧನದ ಮೇಲೆ ಅವಲಂಬಿತವಾಗಿರುವ ಗಲ್ಫ್ ದೇಶದ ಆರ್ಥಿಕತೆಗೆ ಭಾನುವಾರ ಅಲ್ಲಿನ ಷೇರು ಮಾರುಕಟ್ಟೆ ಹಲವು ವರ್ಷಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+