For Quick Alerts
ALLOW NOTIFICATIONS  
For Daily Alerts

ಕೈಗೆಟುಕುವ ದರದಲ್ಲಿ ಒನ್ ಪ್ಲಸ್ U, Y ಸಿರೀಸ್ ಹೊಸ ಟಿವಿ ಬಿಡುಗಡೆ

|

ಒನ್ ಪ್ಲಸ್ ನಿಂದ ಭಾರತದಲ್ಲಿ ಗುರುವಾರ U ಹಾಗೂ Y ಸಿರೀಸ್ ನಲ್ಲಿ ಸ್ಮಾರ್ಟ್ ಟಿವಿ ಬಿಡುಗಡೆ ಆಗಿದೆ. ಈ ಹಿಂದಿನ ಒನ್ ಪ್ಲಸ್ ಟಿವಿ Q ಸ್ಮಾರ್ಟ್ ಟಿವಿಗಿಂತ ಇದು ವಿಭಿನ್ನವಾಗಿ ಇರಲಿದೆ. ಇನ್ನು ಯು ಸಿರೀಸ್ ನಲ್ಲಿ ಒಂದೇ ಗಾತ್ರ ಅಥವಾ ಆಯ್ಕೆ ಇದೆ. ಅದು 55U1 ಮಾತ್ರ. ಅದನ್ನು ಭಾರತದಲ್ಲಿ 49,999 ರುಪಾಯಿಗೆ ಬಿಡುಗಡೆ ಮಾಡಲಾಗಿದೆ.

ಸ್ಯಾಮ್ಸಂಗ್ ನಿಂದ ಕಾಸ್ಟ್ಲಿ ಟಿವಿ ಬಿಡುಗಡೆ; ಆರಂಭದ ಬೆಲೆಯೇ 3.5 ಕೋಟಿಸ್ಯಾಮ್ಸಂಗ್ ನಿಂದ ಕಾಸ್ಟ್ಲಿ ಟಿವಿ ಬಿಡುಗಡೆ; ಆರಂಭದ ಬೆಲೆಯೇ 3.5 ಕೋಟಿ

ಇನ್ನು ವೈ ಸಿರೀಸ್ ನಲ್ಲಿ 43 ಹಾಗೂ 32 ಇಂಚಿನ ಎರಡು ಆಯ್ಕೆಗಳಿವೆ. ಬೆಲೆಯು ಕ್ರಮವಾಗಿ 22,999 ಹಾಗೂ 12,999 ರುಪಾಯಿ ಇದೆ. ವೈ ಹಾಗೂ ಯು ಸಿರೀಸ್ ಟಿವಿಗಳನ್ನು ಒನ್ ಪ್ಲಸ್ ಜುಲೈ 5ನೇ ತಾರೀಕಿನಿಂದ ಮಾರಾಟ ಮಾಡಲು ಶುರು ಆಗುತ್ತದೆ. ಅಮೆಜಾನ್ ಇಂಡಿಯಾ ವೆಬ್ ಸೈಟ್ ನಲ್ಲಿ ಹಾಗೂ ರಿಲಯನ್ಸ್ ಡಿಜಿಟಲ್ ಮತ್ತು ಒನ್ ಪ್ಲಸ್ ಸ್ಟೋರ್ ಆಫ್ ಲೈನ್ ನಲ್ಲೂ ಲಭ್ಯ ಇವೆ.

ಕೈಗೆಟುಕುವ ದರದಲ್ಲಿ ಒನ್ ಪ್ಲಸ್ U, Y ಸಿರೀಸ್ ಹೊಸ ಟಿವಿ ಬಿಡುಗಡೆ

ಯು ಸಿರೀಸ್ 55 ಇಂಚಿನ ಟಿವಿ 4K ರೆಸಲ್ಯೂಷನ್ ನಲ್ಲಿ ದೊರೆಯಲಿದೆ. ಡಾಲ್ಬಿ ವಿಷನ್ ಮತ್ತು ಡಾಲ್ಬಿ ಅಟ್ಮೋಸ್ ಫೀಚರ್ ಇದೆ. ಇನ್ನು ವೈ ಸಿರೀಸ್ 43 ಇಂಚಿನ ಟಿವಿ ಎಫ್ ಎಚ್ ಡಿ ರೆಸಲ್ಯೂಷನ್ ಹಾಗೂ 32 ಇಂಚಿನ ಟಿವಿ ಎಚ್ ಡಿ ರೆಡಿಯೊಂದಿಗೆ ಲಭ್ಯವಿದೆ. ಈ ಟಿವಿ 6.9 ಎಂ.ಎಂ. ಮಾತ್ರ ದಪ್ಪ ಇದೆ. ಇದರ ಗಾತ್ರ ಒನ್ ಪ್ಲಸ್ 8 ಸ್ಮಾರ್ಟ್ ಫೋನ್ ಗಿಂತ ಕಡಿಮೆ ಇದೆ.

English summary

One Plus Affordable Price Smart TV Two Series Launched In India

One Plus affordable price smart tv 2 series launched in India on July 2, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X