ಮನುಷ್ಯನಾದವನು ವಿದ್ಯಭ್ಯಾಸವನ್ನು ಮುಗಿಸಿದ ಮೇಲೆ ಮಾಡುವದೇ ಕೆಲಸದ ಹುಡುಕಾಟ. ವೈಕ್ತಿ ತಾನು ಕಲಿತ ವಿದ್ಯೆಗೆ ಅನುಸಾರವಾಗಿ ಸಂಬಳವನ್ನು ಪಡೆಯುತ್ತಾನೆ. ಈ ಸಂಬಳವನ್ನೇ ವಾರ್ಷಿಕ ಲೆಕ್ಕಾಚಾರದಲ್ಲಿ ಹೇಳುವಾಗ ಸಾಮಾನ್ಯವಾಗಿ ಪ್ಯಾಕೇಜ್ ಎಂಬ ಪದ ಕೇಳುತ್ತದೆ.
ಸಂಬಳವನ್ನು ಪಡೆದು ವ್ಯಕ್ತಿ ಸ್ವಚ್ಛಂದವಾಗಿ ಜೀವನ ನಡೆಸಲು ಬಯಸುತ್ತಾನೆ. ಅಲ್ಲದೆ ತಾನು ಸಹ ಸ್ಟಾರ್ ವ್ಯಕ್ತಿಗಳ ರೀತಿ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಲು ಬಯಸುತ್ತಾನೆ. ಭಾರತದಲ್ಲಿ ಅದೆಷ್ಟೋ ಉದಯೋನ್ಮುಖ ಉದ್ಯಮಿಗಳಿಗೆ ತಮ್ಮ ಉದ್ಯಮವೂ ದೊಡ್ಡದಾಗ ಬೇಕೆಂಬ ಆಸೆ ಇದ್ದೇ ಇರತ್ತದೆ. ಅಂತೆಯೆ ಪ್ರತಿಯೊಬ್ಬರು ಒಬ್ಬ ಒಬ್ಬ ಬಿಸಿನೆಸ್ ಮ್ಯಾನ್‌ರನ್ನು ತನ್ನ ರೋಲ್ ಮಾಡಲ್ ಆಗಿ ಹೊಂದಿರುತ್ತಾರೆ. ಅದೆಷ್ಟೋ ಉದ್ಯಮಿಗಳ ರೋಲ್ ಮಾಡೆಲ್ ಎಲೆನ್ ಮಸ್ಕ್..

ಮಸ್ಕ್ ಪ್ರತಿ ದಿನಗ ಗಳಿಕೆ ಎಷ್ಟು?
ಎಲೆನ್ ಮಸ್ಕ್ ಅವರ ಸಂಪತ್ತು ಎಷ್ಟಿದೆ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಹಾಗಾಗಿ ಹೊಸ ವರದಿಯೊಂದರಲ್ಲಿ ಇದು ಬಹಿರಂಗವಾಗಿದೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೆನ್ ಮಸ್ಕ್ ಪ್ರತಿ ನಿಮಿಷಕ್ಕೆ ಎಷ್ಟು ಸಂಪಾದಿಸುತ್ತಾರೆ ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ. ಎಲೆನ್ ಮಸ್ಕ್ ಅವರ ಪ್ರತಿ ಗಂಟೆ, ಪ್ರತಿ ದಿನ ಮತ್ತು ಪ್ರತಿ ವಾರದ ಗಳಿಕೆಯು ಭಾರತದ ಅನೇಕ ದುಡಿಯುವ ಜನರ ವಾರ್ಷಿಕ ಸಂಬಳಕ್ಕಿಂತ ಹೆಚ್ಚಾಗಿರುತ್ತದೆ.
ಎಲೆನ್ ಮಸ್ಕ್ ಪ್ರತಿ ಸೆಕೆಂಡ್, ನಿಮಿಷ, ಗಂಟೆ ಮತ್ತು ದಿನಕ್ಕೆ ದೊಡ್ಡ ಮೊತ್ತವನ್ನು ತಮ್ಮ ಜೇಬಿಗೆ ಹಾಕಿಕೊಳ್ಳುತ್ತಾರೆ. ಟೆಕ್ ಬಿಲಿಯನೇರ್ ಎಲೋನ್ ಮಸ್ಕ್ ಪ್ರತಿ ನಿಮಿಷಕ್ಕೆ ಸರಿಸುಮಾರು $6887, ಪ್ರತಿ ಗಂಟೆಗೆ $4,13,220, ಪ್ರತಿ ದಿನ $99,17,280 ಮತ್ತು ಪ್ರತಿ ವಾರ $6,94,20,960 ಗಳಿಸುತ್ತಾರೆ.
ಒಂದು ನಿಮಿಷದ ಗಳಿಕೆ ಎಷ್ಟು?
ಪ್ರತಿ ಸೆಕೆಂಡಿಗೆ ಗಳಿಕೆಯನ್ನು ಲೆಕ್ಕಾಚಾರ ಮಾಡಲು, ಅವರ ಒಟ್ಟು ಗಳಿಕೆಗಳನ್ನು ಒಂದು ವರ್ಷದಲ್ಲಿ (31,536,000) ಸೆಕೆಂಡುಗಳ ಸಂಖ್ಯೆಯಿಂದ ಭಾಗಿಸಲಾಗಿದೆ. ಇದರ ಪರಿಣಾಮವಾಗಿ ಪ್ರತಿ ಸೆಕೆಂಡಿಗೆ ಎಲೆನ್ ಮಾಸ್ಕ್ $114.80 ಎಂದು ಅಂದಾಜಿಸಲಾಗಿದೆ.

ಫಿನ್‌ಬೋಲ್ಡ್ ವರದಿಗಳು ಭಾರತೀಯ ರೂಪಾಯಿಗಳಲ್ಲಿ, ಎಲೋನ್ ಮಸ್ಕ್ ಪ್ರತಿ ಸೆಕೆಂಡಿಗೆ ರೂ 9529 ಗಳಿಸುತ್ತಾರೆ, ಪ್ರತಿ ನಿಮಿಷಕ್ಕೆ ಅವರು 5,71,659 ರೂಪಾಯಿಗಳನ್ನು ಗಳಿಸುತ್ತಾರೆ. ಅಂದರೆ ಐದೂವರೆ ಲಕ್ಷ ರೂಪಾಯಿಗಳಿಗಿಂತ ಹೆಚ್ಚು. ಭಾರತದ ಕೋಟಿಗಟ್ಟಲೆ ಸಂಬಳ ಪಡೆಯುವ ಕಾರ್ಮಿಕರ ವಾರ್ಷಿಕ ಪ್ಯಾಕೇಜ್ ಕೂಡ ಅಷ್ಟು ಅಲ್ಲ.
ಎಲೋನ್ ಮಸ್ಕ್ ಅವರ ಆದಾಯವು ಅನೇಕ ದೇಶಗಳ ಜಿಡಿಪಿಗಿಂತ ಹೆಚ್ಚಾಗಿದೆ
ಫಿನ್‌ಬೋಲ್ಡ್ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ. ಫೆಬ್ರವರಿ 2024 ರ ಮಧ್ಯದ ವೇಳೆಗೆ, ಎಲೋನ್ ಮಸ್ಕ್ ಅವರ ಒಟ್ಟು ಸಂಪತ್ತು 198.9 ಶತಕೋಟಿ ಡಾಲರ್ ಎಂದು ಹೇಳಲಾಗಿದೆ. ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್ ಪಟ್ಟಿಯ ಪ್ರಕಾರ ಈ ಅಂಕಿ ಅಂಶವನ್ನು ತೆಗೆದುಕೊಳ್ಳಲಾಗಿದೆ.
ಯಾವ ವ್ಯವಹಾರ ಮಾಡುತ್ತಾರೆ?
ಎಲೆನ್ ಮಸ್ಕ್ ಅವರ ಒಟ್ಟು ನಿವ್ವಳ ಮೌಲ್ಯವನ್ನು ಅನೇಕ ಕಂಪನಿಗಳಲ್ಲಿನ ಅವರ ಷೇರುಗಳ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಅವರ ಪಾಲನ್ನು ಟೆಸ್ಲಾದಲ್ಲಿ 20.5 ಪ್ರತಿಶತ, ಸ್ಟಾರ್‌ಲಿಂಕ್‌ನಲ್ಲಿ 54 ಪ್ರತಿಶತ, ಸ್ಪೇಸ್‌ಎಕ್ಸ್‌ನಲ್ಲಿ 42 ಪ್ರತಿಶತ, ಎಕ್ಸ್‌ನಲ್ಲಿ ಅಂದಾಜು 74 ಪ್ರತಿಶತ, ದಿ ಬೋರಿಂಗ್ ಕಂಪನಿಯಲ್ಲಿ 90 ಪ್ರತಿಶತಕ್ಕಿಂತ ಹೆಚ್ಚು ಮತ್ತು ಎಕ್ಸ್‌ಎಐನಲ್ಲಿ 25 ಪ್ರತಿಶತಕ್ಕಿಂತ ಹೆಚ್ಚು. ಎಲೆನ್ ಮಸ್ಕ್ ನ್ಯೂರಾಲಿಂಕ್‌ನಲ್ಲಿ 50 ಪ್ರತಿಶತಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿದ್ದಾರೆ.
ಬಿಲಿಯನೇರ್‌ಗಳ ಜಗತ್ತಿನಲ್ಲಿ, ಜಾಗತಿಕ ಐಷಾರಾಮಿ ಸರಕುಗಳ ಕಂಪನಿ LVMH ನ ಮಾಲೀಕ ಮತ್ತು ಸಿಇಒ ಬರ್ನಾರ್ಡ್ ಅರ್ನಾಲ್ಟ್‌ನಿಂದ ಎಲೆನ್ ಮಸ್ಕ್ ಕಠಿಣ ಸ್ಪರ್ಧೆಯನ್ನು ಎದುರಿಸುತ್ತಿದ್ದಾರೆ. ಫೆಬ್ರವರಿ ಮಧ್ಯದ ಹೊತ್ತಿಗೆ, ವಿಶ್ವದ ನಂಬರ್ ಒನ್ ಶ್ರೀಮಂತ ವ್ಯಕ್ತಿ ಬರ್ನಾರ್ಡ್ ಅರ್ನಾಲ್ಟ್ $219.1 ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿರಲಿದ್ದಾರೆ ಎಂದು ಅಂದಾಜಿಸಲಾಗಿದೆ. ಮತ್ತು ನಂಬರ್ ಒನ್ ಶ್ರೀಮಂತ ಎಂಬ ಹಣೆ ಪಟ್ಟಿಯನ್ನು ಇವರೇ ಹೊಂದಿದ್ದಾರೆ.


Click it and Unblock the Notifications