For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ 44% ಮಂದಿ ಬಳಿ ಮಾತ್ರ ಜೀವವಿಮೆ ಪ್ಲಾನ್: ಸಮೀಕ್ಷೆ

|

ಬೆಂಗಳೂರು, ಅಕ್ಟೋಬರ್ 30: ಅಖಿಲ ಭಾರತ ಪಟ್ಟದಲ್ಲಿರುವ ಗ್ರಾಹಕರ ಪೈಕಿ ಶೇಕಡ 44ರಷ್ಟು ಮಂದಿ ಅವಧಿ ಜೀವ ವಿಮೆಯ ಸುರಕ್ಷೆಯನ್ನು(term insurance plan) ಹೊಂದಿದ್ದಾರೆ ಎನ್ನುವುದು ಪಾಲಿಸಿ ಬಜಾರ್ ನ ಆ್ಯಪ್‍ಗೆ ಭೇಟಿ ನೀಡಿದ ಸಂದರ್ಶಕರ ಆನ್‍ಲೈನ್ ಸಮೀಕ್ಷೆಯಿಂದ ತಿಳಿದುಬರುತ್ತದೆ.

ಭಾರತದ ಅತಿದೊಡ್ಡ ಆನ್‍ಲೈನ್ ವಿಮಾ ಮಾರುಕಟ್ಟೆ ಎನಿಸಿದ ಪಾಲಿಸಿಬಜಾರ್ ನಡೆಸಿದ ಸಮೀಕ್ಷೆಯ ಭಾಗವಾಗಿದೆ. ಇದು ಗ್ರಾಹಕರ ತಿಳಿವಳಿಕೆಯನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ಮತ್ತು ಅವಧಿ ಜೀವವಿಮಾ ಪಾಲಿಸಿಗಳಿಗೆ ಸಂಬಂಧಿಸಿದಂತೆ ಅವರ ಮಾಲೀಕತ್ವ ಮಟ್ಟವನ್ನು ಅಳೆಯುವ ಸಲುವಾಗಿ ನಡೆಸಿದ ಸಮೀಕ್ಷೆಯಾಗಿತ್ತು. ಪಾಲಿಸಿಬಜಾರ್ ಮೊಬೈಲ್ ಅಪ್ಲಿಕೇಶನ್ ಅನ್ನು 2020ರ ಸೆಪ್ಟೆಂಬರ್ 10ರಿಂದ 25ರ ಅವಧಿಯಲ್ಲಿ ಬಳಸಿಕೊಂಡ ಸುಮಾರು 22726 ಮಂದಿ ವಿಮಾ ಖರೀದಿದಾರರನ್ನು ಸಮೀಕ್ಷೆಗೆ ಗುರಿಪಡಿಸಿದೆ.

ಈ ಹಿಂದಿನ ಸಲಕ್ಕಿಂತ ಭಿನ್ನವಾಗಿ, ವಿಮೆಯು ಇದೀಗ ಹೆಚ್ಚು ಮಾರಾಟದ ಒತ್ತಡವಿಲ್ಲದೇ ಗ್ರಾಹಕರು ಖರೀದಿಸಲು ಹೆಚ್ಚಾಗಿ ಇಚ್ಛಿಸುವ ಉತ್ಪನ್ನವಾಗಿದೆ. ಈ ಸಮೀಕ್ಷೆಯಿಂದ ತಿಳಿದುಬಂದಂತೆ, ಶೇಕಡ 50ರಷ್ಟು ಗ್ರಾಹಕರು ತಮ್ಮ ಪ್ರೀತಿಪಾತ್ರರಿಗೆ ಹಣಕಾಸು ಸುರಕ್ಷೆಯನ್ನು ನೀಡುವ ಉದ್ದೇಶದಿಂದ ಸುಮಾರು ಒಂದು ಕೋಟಿ ರೂಪಾಯಿ ಅಥವಾ ಹೆಚ್ಚಿನ ವಿಮಾ ಸುರಕ್ಷೆ ಇರುವ ಅವಧಿ ಪಾಲಿಸಿಗಳನ್ನು ಖರೀದಿಸಿದ್ದಾರೆ. ಇದು ಜನತೆ ಹೇಗೆ ತಮ್ಮ ಸುರಕ್ಷಾ ಅಗತ್ಯತೆಯ ಬಗ್ಗೆ ಅರಿವು ಹೊಂದಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ ಹಾಗೂ ಆನ್‍ಲೈನ್‍ನಲ್ಲಿ ಲಭ್ಯವಿರುವ ಕೈಗೆಟುವ ಬೆಲೆಯ ಅಂದರೆ ಮಾಸಿಕ ವಿಮಾಕಂತು ರೂ. 1000 ದಿಂದ 1200 ರೂಪಾಯಿ ಇರುವ ಅಧಿಕ ಸುರಕ್ಷೆ ಒದಗಿಸುವ ಪಾಲಿಸಿಗಳಲ್ಲಿ ಹೂಡಿಕೆ ಮಾಡುವುದನ್ನು ಇದು ಸೂಚಿಸುತ್ತದೆ.

ಪಾಲಿಸಿಬಜಾರ್.ಕಾಮ್‍ನ ಸಿಇಓ ಸರ್ವವೀರ್ ಸಿಂಗ್

ಪಾಲಿಸಿಬಜಾರ್.ಕಾಮ್‍ನ ಸಿಇಓ ಸರ್ವವೀರ್ ಸಿಂಗ್

ಈ ಸಮೀಕ್ಷೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಪಾಲಿಸಿಬಜಾರ್.ಕಾಮ್‍ನ ಸಿಇಓ ಸರ್ವವೀರ್ ಸಿಂಗ್, "ಗ್ರಾಹಕರು ಅವಧಿ ಜೀವವಿಮಾ ಪಾಲಿಸಿಗಳನ್ನು ಸ್ವೀಕರಿಸಿರುವುದು ನಿಜಕ್ಕೂ ಹೃದಯಸ್ಪರ್ಶಿಯಾಗಿದೆ. ಇಂಥ ಕ್ಲಿಷ್ಟ ಪರಿಸ್ಥಿತಿಯಲ್ಲಿ, ಗ್ರಾಹಕರಿಗೆ ವಿಮಾ ಉತ್ಪನ್ನಗಳನ್ನು ಖರೀದಿಸುವ ಮುನ್ನ ಅವಧಿ ಜೀವವಿಮೆಯ ವಿವಿಧ ಬ್ರಾಂಡ್ ಮೌಲ್ಯಗಳನ್ನು ಹೋಲಿಕೆ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಅವಧಿ ಜೀವವಿಮಾ ಯೋಜನೆಗಳಲ್ಲಿ ಹೂಡಿಕೆ ಮಾಡುವಾಗ, ಹೆಚ್ಚು ಸಂಶೋಧನೆ ಅಗತ್ಯವಾಗುತ್ತದೆ. ವ್ಯಕ್ತಿಯೊಬ್ಬ 30-40 ವರ್ಷಗಳ ಕಾಲ ಪಾವತಿ ಮಾಡಬೇಕಿದ್ದು, ಆದ್ದರಿಂದ ಯಾವುದೇ ಬೆಲೆ ವ್ಯತ್ಯಯವು ಅವಧಿ ಪಾಲಿಸಿಯ ಅರ್ಥಪೂರ್ಣ ಉಳಿತಾಯಕ್ಕೆ ಸೇರ್ಪಡೆಯಾಗುತ್ತದೆ. ಈ ಸಮೀಕ್ಷೆಯಿಂದ ಕಂಡುಬಂದ ಅಂಶವೆಂದರೆ, ಬಹುತೇಕ ಗ್ರಾಹಕರು ಅವಧಿ ಜೀವವಿಮೆಯನ್ನು ಖರೀದಿಸುವಾಗ ಸಾಮಾನ್ಯವಾಗಿ, ಖರೀದಿಗೆ ಮುಂಚಿತವಾಗಿ ಎರಡು ಅಥವಾ ಮೂರು ರಾಷ್ಟ್ರೀಯ ಬ್ರಾಂಡ್‍ಗಳ ನಡುವೆ ಹೋಲಿಕೆ ಮಾಡುತ್ತಾರೆ. ಇದರಲ್ಲಿ ಬೆಲೆ ಶ್ರೇಷ್ಠತೆ, ಸುಲಭವಾಗಿ ಲಭ್ಯತೆ ಮತ್ತು ಕ್ಲೇಮ್ ನೆರವು ಮತ್ತಿತರ ಅಂಶಗಳನ್ನು ಪರಿಗಣಿಸುತ್ತಾರೆ" ಎಂದು ವಿವರಿಸಿದರು.

ಆನ್‍ಲೈನ್ ಮಾರುಕಟ್ಟೆಯಿಂದ ವಿಮೆ ಖರೀದಿ
 

ಆನ್‍ಲೈನ್ ಮಾರುಕಟ್ಟೆಯಿಂದ ವಿಮೆ ಖರೀದಿ

ಈ ಸಮೀಕ್ಷೆಯು ಗ್ರಾಹಕ ಆದ್ಯತೆ ಖರೀದಿ ವಾಹಿನಿಗಳ ಬಗ್ಗೆ ಮತ್ತು ಅವರು ಅವಧಿ ವಿಮೆ ಪಾಲಿಸಿಗಳ ಮಾಹಿತಿಗಳನ್ನು ಪಡೆಯಲು ಅತಿಹೆಚ್ಚು ವಿಶ್ವಾಸ ಇರುವ ಬ್ರಾಂಡ್/ ವೆಬ್‍ಸೈಟ್‍ಗಳ ಬಗ್ಗೆಯೂ ಆಳವಾದ ಅಧ್ಯಯನ ನಡೆಸಿದೆ. ಅವಧಿ ವಿಮೆಗಳನ್ನು ಹೊಂದಿರುವ ಪಾಲಿಸಿದಾರರನ್ನು ಅವಧಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವ ವಾಹಿನಿಯ ಬಗ್ಗೆ ಕೇಳಿದಾಗ, ಶೇಕಡ 57ರಷ್ಟು ಮಂದಿ ಹಾಲಿ ಇರುವ ಅವಧಿ ಜೀವ ವಿಮಾ ಪಾಲಿಸಿಗಳನ್ನು ಆನ್‍ಲೈನ್ ಮಾರುಕಟ್ಟೆಯಿಂದ ಖರೀದಿ ಮಾಡಿರುವುದಾಗಿ ಹೇಳಿದ್ದಾರೆ. ಶೇಕಡ 93ರಷ್ಟು ಮಂದಿ ತಮ್ಮ ಅವಧಿ ಯೋಜನೆಗಳನ್ನು ಪಾಲಿಸಿಬಜಾರ್ ನಲ್ಲಿ ಖರೀದಿಸಿದ್ದಾರೆ. ಇದರಿಂದ ಸ್ಪಷ್ಟವಾಗಿ ತಿಳಿದುಬರುವುದೇನೆಂದರೆ, ಗ್ರಾಹಕರು ವಿಮಾ ಕಂಪನಿಗಳನ್ನಷ್ಟೇ ಅಲ್ಲದೇ ಸದಾ ಅತ್ಯುತ್ತಮ ಮೌಲ್ಯವನ್ನು ನೀಡುವ ಮೂಲದಿಂದಲೇ ಖರೀದಿ ಮಾಡಲು ಆದ್ಯತೆ ನೀಡುತ್ತಾರೆಎನ್ನುವುದು.

ನೀಲ್ಸನ್ ಅಧ್ಯಯನದ ಅಂಶ

ನೀಲ್ಸನ್ ಅಧ್ಯಯನದ ಅಂಶ

ಇದರ ಜತೆಗೆ ಪ್ರತಿ 10 ಮಂದಿಯ ಪೈಕಿ ಆರು ಮಂದಿ ವಿಮಾ ಮಾಲೀಕರು, ಅವಧಿ ಯೋಜನೆಯ ಬಗ್ಗೆ ಹೋಲಿಕೆ ಮಾಡಲು ಅಥವಾ ಲಭ್ಯವಿರುವ ವಿವಿಧ ಪಾಲಿಸಿ ಆಯ್ಕೆಗಳ ಬಗ್ಗೆ ಮಾಹಿತಿ ಪಡೆಯಲು ಪಾಲಿಸಿಬಜಾರ್ ವೆಬ್‍ಸೈಟ್‍ಗೆ ಕನಿಷ್ಠ ಪಕ್ಷ ಒಂದು ಬಾರಿ ಭೇಟಿ ನೀಡಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇಕಡ 45ರಷ್ಟು ಮಂದಿ, ಪಾಲಿಸಿಬಜಾರ್ ಅನ್ನು ಅವಧಿ ವಿಮೆಗೆ ಸಂಬಂಧಿಸಿದ ಸೂಕ್ತ ಮಾಹಿತಿಗಳಿಗಾಗಿ ಮೊದಲ ಆದ್ಯತೆಯಾಗಿ ಆರಿಸಿಕೊಂಡಿದ್ದಾರೆ.

ಈ ಅಂಶಗಳಿಂದ ಕಂಡುಬಂದಂತೆ, ಪಾಲಿಸಿಬಜಾರ್ ಪ್ರತ್ಯೇಕವಾಗಿ ನಡೆಸಿದ ನೀಲ್ಸನ್ ಅಧ್ಯಯನದ ಅಂಶಗಳನ್ನು ಇದು ಸಮರ್ಥಿಸುವಂತಿದೆ. ಈ ಬ್ರಾಂಡ್ ಟ್ರ್ಯಾಕ್ ಸಮೀಕ್ಷೆಯು ಅವಧಿ ವಿಮೆಗಳನ್ನು ಹೊಂದಿರುವ 782 ಮಂದಿಯ ಮಾದರಿಯನ್ನು ಸಮೀಕ್ಷೆ ಮಾಡಿದ್ದು, 2020ರ ಜೂನ್-ಜುಲೈ ತಿಂಗಳಲ್ಲಿ ಮೆಟ್ರೋಪಾಲಿಟನ್ ನಗರಗಳಲ್ಲಿ ಈ ಸಮೀಕ್ಷೆ ನಡೆಸಿತ್ತು. ಗ್ರಾಹಕರ ಅರಿವಿನ ಬಗ್ಗೆ ಅರ್ಥ ಮಾಡಿಕೊಳ್ಳಲು ಮತ್ತು ಬ್ರಾಂಡ್ ಗುರುತಿಸುವಿಕೆಗಾಗಿ ಈ ಸಮೀಕ್ಷೆ ನಡೆಸಿತ್ತು.

ಸುರಕ್ಷೆಯ ವ್ಯಾಪ್ತಿಯಂಥ ಅಂಶಗಳನ್ನು ಹೋಲಿಕೆ

ಸುರಕ್ಷೆಯ ವ್ಯಾಪ್ತಿಯಂಥ ಅಂಶಗಳನ್ನು ಹೋಲಿಕೆ

ಈ ಸಮೀಕ್ಷೆಯನ್ನು ಅವಧಿ ಜೀವವಿಮೆಯ ಆನ್‍ಲೈನ್ ಮತ್ತು ಆಫ್‍ಲೈನ್ ಗ್ರಾಹಕರಲ್ಲಿ ನಡೆಸಿದ್ದು, ಪ್ರತಿ 10 ಮಂದಿ ಅವಧಿ ವಿಮೆ ಮಾಲೀಕರ ಪೈಕಿ 5 ಮಂದಿ ಈ ಸಮೀಕ್ಷೆ ನಡೆಸಿದ ವೆಬ್‍ಸೈಟ್‍ಗೆ ತಮ್ಮ ಇತ್ತೀಚೆಗೆ ಖರೀದಿಸಿದ ಅವಧಿ ಪಾಲಿಸಿಗಳನ್ನು ಹೋಲಿಕೆ ಮಾಡಿಕೊಳ್ಳಲು ಭೇಟಿ ನೀಡಿದ್ದಾರೆ. ಈ ಸಮೀಕ್ಷೆಯಿಂದ ತಿಳಿದುಬಂದ ಅಂಶದಿಂದ ಸ್ಪಷ್ಟವಾಗಿ ವ್ಯಕ್ತವಾಗುವುದೇನೆಂದರೆ, ಅವಧಿ ವಿಮೆಯೋಜನೆಯನ್ನು ಖರೀದಿಸುವ ಪ್ರತಿ ಇಬ್ಬರ ಪೈಕಿ ಒಬ್ಬ ಗ್ರಾಹಕರು ಆನ್‍ಲೈನ್ ವಿಮೆ ಪ್ಲಾಟ್‍ಫಾರಂಗೆ ಭೇಟಿ ನೀಡಿ, ವಿವಿಧ ಪ್ಲಾನ್‍ಗಳನ್ನು ಪ್ರಮುಖ ಆಯಾಮಗಳಾದ ವಿಶೇಷತೆಗಳು, ಬೆಲೆಗಳು, ಕ್ಲೇಮ್ ವಿಲೇವಾರಿ ಅನುಪಾತ ಮತ್ತು ಸುರಕ್ಷೆಯ ವ್ಯಾಪ್ತಿಯಂಥ ಅಂಶಗಳನ್ನು ಹೋಲಿಕೆ ಮಾಡುತ್ತಾರೆ.

English summary

Online survey revealed 44 % of customers covered by a term life insurance plan

An online survey conducted by Policybazaar to understand consumer perception and gauge ownership level for the term insurance category has revealed that around 44 % of customers pan-India are currently covered by a term life insurance plan.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X