ಗುರುವಾರದಂದು ವಹಿವಾಟಿನ ಆರಂಭದಲ್ಲಿ ಮೈಂಡ್ ಟ್ರೀ ಮೊದಲ ತ್ರೈಮಾಸಿಕ ವರದಿ ಪ್ರಕಟವಾದ ಬಳಿಕ ಕುಸಿತ ಕಂಡಿದೆ.ಇನ್ನು ಜಾಗತಿಕವಾಗಿ ಕಚ್ಚಾತೈಲ ಬೆಲೆಯು ಸತತವಾಗಿ ಬ್ಯಾರೆಲ್‌ಗೆ 100 ಡಾಲರ್‌ಗಿಂತ ಕೆಳಕ್ಕೆ ಕುಸಿತ ಕಂಡಿದ್ದು, ಈ ನಡುವೆ ಷೇರು ಮಾರುಕಟ್ಟೆ ಚೇತರಿಕೆ ಕಂಡಿದೆ. ಈ ದಿನ ಆಟೋಮೊಬೈಲ್ಸ್, ಫಾರ್ಮಾ, ತೈಲ ಕಂಪನಿ ಷೇರುಗಳ ಮೇಲೆ ಎಲ್ಲರ ಗಮನ ನೆಟ್ಟಿದೆ.
30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 340 ಪಾಯಿಂಟ್‌ಗಳನ್ನು ಗಳಿಸಿ 53854.48ಕ್ಕೆ ತಲುಪಿ ವಹಿವಾಟು ಆರಂಭ ಮಾಡಿದೆ. ಇನ್ನು ಎನ್‌ಎಸ್‌ಇ ನಿಫ್ಟಿ 100.10 ಅಂಕ ಏರಿಕೆಯಾಗಿ 16066.80. ಕ್ಕೆ ತಲುಪಿದೆ. 1655 ಷೇರುಗಳು ಮೇಲಕ್ಕೇರಿದ್ದರೆ, 1025 ಷೇರುಗಳು ಕುಸಿತ ಕಾಣುತ್ತಿವೆ.110 ಷೇರುಗಳ ಸ್ಥಿತಿ ಬದಲಾಗಿಲ್ಲ.
ಜಾಗತಿಕವಾಗಿ ಆರ್ಥಿಕ ಕುಸಿತದ ಭೀತಿಯ ನಡುವೆಯೇ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ಗಿಂತ ಕಡಿಮೆಯಾಗಿದೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರವಾದ ಕಾರಣದಿಂದಾಗಿ ಈ ತೈಲ ಬೆಲೆ ಬದಲಾವಣೆಯು ಭಾರತದಲ್ಲಿ ಹೂಡಿಕೆದಾರರ ಮೇಲೆ ಪ್ರಭಾವ ಉಂಟು ಮಾಡಿದೆ.

ಫೆಡರಲ್ ರಿಸರ್ವ್ ನೀತಿ ಬಿಗಿಗೊಳಿಸುವಿಕೆ ಮತ್ತು ಹಿಂಜರಿತದ ಆತಂಕಗಳು ಬೆಳೆಯುತ್ತಿರುವುದರಿಂದ ಡಾಲರ್ ಬೆಲೆ ಏರಿಳಿತ ನಿರೀಕ್ಷಿತವಾಗಿದೆ.ಆರಂಭಿಕ ವಹಿವಾಟಿನಲ್ಲಿ ರೂಪಾಯಿಯು ಡಾಲರ್‌ಗೆ 79.75/76 ನಲ್ಲಿ ವಹಿವಾಟು ನಡೆಸುತ್ತಿದೆ, ಇದು ಬುಧವಾರದ 79.63 ಕ್ಕೆ ಹೋಲಿಸಿದರೆ. ಯುನಿಟ್ 79.77 ರಷ್ಟು ಕಡಿಮೆ ಎನ್ನಬಹುದು.
ಹಿಂದೂಸ್ತಾನ್ ಝಿಂಕ್ ಬೋರ್ಡ್ 2022-23 ರ ಹಣಕಾಸು ವರ್ಷದಲ್ಲಿ 8,873.17 ಕೋಟಿ ರೂಪಾಯಿಗಳ ಪ್ರತಿ ಇಕ್ವಿಟಿ ಷೇರಿಗೆ 21 ರೂಪಾಯಿಗಳ ಮಧ್ಯಂತರ ಲಾಭಾಂಶವನ್ನು ಅನುಮೋದಿಸಿದೆ. ಮಧ್ಯಂತರ ಲಾಭಾಂಶ ಪಾವತಿಯ ದಾಖಲೆ ದಿನಾಂಕ ಜುಲೈ 21 ಆಗಿದೆ.
ಬೆಳಗ್ಗೆ ಆರಂಭಿಕ ವಹಿವಾಟಿನಲ್ಲಿ ಪೆಟ್ರೋನೆಟ್, ಗೇಲ್, ರಿಲಯನ್ಸ್, ಎಟಿಜಿಎಲ್, ಬಿಪಿಸಿಎಲ್, ಐಒಸಿ, ಐಜಿಎಲ್,ಒಎನ್ ಜಿಸಿ,ಹಿಂದ್ ಪೆಟ್ರೋ ಷೇರುಗಳು ಹಸಿರು ಬಣ್ಣ ತಿರುಗಿ ಹೂಡಿಕೆದಾರರಿಗೆ ಹರ್ಷ ತಂದಿವೆ.ದಿನವಿಡಿ ಪೆಟ್ರೋ, ಆಟೋ ಇಂಡಸ್ಟ್ರೀ ಷೇರುಗಳ ಮೌಲ್ಯ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ.


Click it and Unblock the Notifications