ಹಣದುಬ್ಬರವನ್ನು ನಿಯಂತ್ರಣ ಮಾಡಲು ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ನಡುವೆ ಆರ್‌ಬಿಐ ಮತ್ತೆ ರೆಪೋ ದರವನ್ನು ಏರಿಕೆ ಮಾಡಿದೆ. ಈ ನಡುವೆ ಷೇರು ಮಾರುಕಟ್ಟೆಯು ಇಂದು ನಷ್ಟದೊಂದಿಗೆ ವಹಿವಾಟು ಆರಂಭ ಮಾಡಿದೆ. ಆದರೆ ರೆಪೋ ದರ ಏರಿಕೆ ಆಗುತ್ತಿದ್ದಂತೆ ನಿಫ್ಟಿ, ಸೆನ್ಸೆಕ್ಸ್ ಚೇತರಿಸಿಕೊಂಡಿದೆ.
ರೆಪೋ ದರ ಏರಿಕೆ ಸುಳಿವಿನ ಹಿನ್ನೆಲೆ ಆರಂಭಿಕ ವಹಿವಾಟಿನಲ್ಲೇ ಬಿಎಸ್‌ಇ ಸೆನ್ಸೆಕ್ಸ್ ಸುಮಾರು 60 ಅಂಕ ಅಥವಾ ಶೇಕಡ 0.11 ಕುಸಿದು 55,047ಕ್ಕೆ ತಲುಪಿದೆ. ಈ ವೇಳೆಯಲ್ಲೇ ನಿಫ್ಟಿ 18 ಅಂಕ ಅಥವಾ ಶೇಕಡ 0.10 ಕುಸಿದು 16,397ಕ್ಕೆ ಇಳಿದಿದೆ.
ಆದರೆ ಆರಂಭಿಕ ವಹಿವಾಟಿನಲ್ಲಿ ನಿಫ್ಟಿ ಮಿಡ್‌ಕ್ಯಾಪ್ ಹಾಗೂ ಸ್ಮಾಲ್ ಕ್ಯಾಪ್ ಏರಿಕೆ ಕಂಡಿದೆ. ಕ್ರಮವಾಗಿ ಶೇಕಡ 0.21 ಹಾಗೂ ಶೇಕಡ 0.03 ಹೆಚ್ಚಾಗಿದೆ. ಇನ್ನು ಈ ವೇಳೆಯಲ್ಲೇ ಬ್ರಿಟಾನಿಯಾ ಟಾಪ್ ಲೂಸರ್ ಆಗಿದೆ.

ಟಾಟಾ ಕನ್ಸ್ಯೂಮರ್ ಪ್ರೊಡೆಕ್ಟ್, ಅಪೋಲೋ ಆಸ್ಪತ್ರೆ, ನೆಸ್ಟ್ಲೆ ಇಂಡಿಯಾ, ಸನ್ ಫಾರ್ಮಾ ಷೇರುಗಳು ಕುಸಿದಿದೆ. ಇನ್ನು ಏಷ್ಯನ್ ಪೇಂಟ್ಸ್, ಮಾರುತಿ, ಭಾರ್ತಿ ಏರ್‌ಟೆಲ್, ರಿಲಾಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್, ಎಲ್&ಟಿ, ಡಾ. ರೆಡ್ಡೀಸ್, ಅಲ್ಟ್ರಾ ಟೆಕ್ ಸಿಮೆಂಟ್ ಷೇರುಗಳು ಕೂಡಾ ಕುಸಿದಿದೆ.
ಆದರೆ ರೆಪೋ ದರ ಏರಿಕೆ ಬೆನ್ನಲ್ಲೇ ಸೆನ್ಸೆಕ್ಸ್ 200 ಅಂಕ ಚೇತರಿಕೆ ಕಂಡಿದೆ. ನಿಫ್ಟಿ 16500ಕ್ಕೆ ಏರಿಕೆ ಕಂಡಿದೆ. ನಿಫ್ಟಿ ಶೇಕಡ ಶೇಕಡ 1.11 ಏರಿಕೆ ಕಂಡಿದೆ. ಆರ್‌ಬಿಐ ವಸತಿ ವಲಯಕ್ಕೆ ಸಾಲದ ಹರಿವು ಅಧಿಕ ಮಾಡುವ ನಿಟ್ಟಿನಲ್ಲಿ ವಸತಿ ಯೋಜನೆಗೆ ಹಣಕಾಸು ವಿಸ್ತರಣೆ ಮಾಡಲು ಗ್ರಾಮೀಣ ಸಹಕಾರಿ ಬ್ಯಾಂಕ್‌ಗಳಿಗೆ ಅನುಮತಿ ನೀಡಿದೆ. ಈ ಬೆನ್ನಲ್ಲೇ ನಿಪ್ಟಿ ಏರಿಕೆ ಕಂಡಿದೆ.
ಎಲ್‌ಐಸಿ ಷೇರು ಭಾರೀ ಕುಸಿತ
ಎಲ್‌ಐಸಿ ಷೇರು ನಿರಂತರವಾಗಿ ಕುಸಿತ ಕಾಣುತ್ತಿದೆ. ಇಂದು ಆರಂಭಿಕ ವಹಿವಾಟಿನಲ್ಲಿ ಶೇಕಡ 1.70ರಷ್ಟು ಕುಸಿದು ರೂಪಾಯಿ 740ಕ್ಕೆ ಇಳಿದಿದೆ. ಈ ನಡುವೆ ಟಾಟಾ ಸ್ಟೀಲ್, ಎನ್‌ಟಿಪಿಸಿ, ಟೈಟಾನ್, ಆಕ್ಸಿಸ್ ಬ್ಯಾಂಕ್, ಎಸ್‌ಬಿಐ, ಟಿಸಿಎಸ್ ಲಾಭವನ್ನು ಕಂಡಿದೆ.


Click it and Unblock the Notifications