ಮಂಗಳವಾರ ವಹಿವಾಟಿನ ಅಂತ್ಯದಲ್ಲಿ ಕುಸಿತ ಕಂಡಿದ್ದ ಷೇರು ಮಾರುಕಟ್ಟೆ ಬುಧವಾರ ವಹಿವಾಟಿನ ಆರಂಭದಲ್ಲಿ ಏರಿಕೆಯನ್ನು ದಾಖಲಿಸಿದೆ. ಬ್ಯಾಂಕ್, ಆಟೋ ಮೊಬೈಲ್, ಟೆಕ್ನಾಲಜಿ ಸ್ಟಾಕ್‌ಗಳ ಹೆಚ್ಚಳದಿಂದಾಗಿ ಸ್ಟಾಕ್ ಮಾರುಕಟ್ಟೆ ಮತ್ತೆ ಪುಟಿದೆದ್ದಿದೆ.
ಜಾಗತಿಕ ವಹಿವಾಟಿನಲ್ಲಿ ಯುರೋಪಿಯನ್ ಸ್ಟಾಕ್‌ಗಳು ಶೇಕಡ 2ರಷ್ಟು ಕುಸಿತ ಕಂಡಿದೆ. ಯುರೋ ಸುಮಾರು ಶೇಕಡ 1.5 ಕುಸಿದು, 1.0236 ಡಾಲರ್‌ಗೆ ಇಳಿದಿದೆ. ಇದು 2002 ಬಳಿಕ ಅತೀ ಕನಿಷ್ಠ ಮಟ್ಟವಾಗಿದೆ. ಈ ನಡುವೆ ಯುಎಸ್ ಡಾಲರ್ 20 ವರ್ಷದಲ್ಲೇ ಅತೀ ಬಲಗೊಂಡಿದೆ.
ಮಂಗಳವಾರ ವಹಿವಾಟಿನ ಅಂತ್ಯದಲ್ಲಿ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 100 ಅಂಕ ಅಥವಾ ಶೇಕಡ 0.19ರಷ್ಟು ಕುಸಿತ ಕಂಡಿದ್ದು, 53,134ಕ್ಕೆ ತಲುಪಿದೆ. ಇನ್ನು ಎನ್‌ಎಸ್‌ಇ ನಿಫ್ಟಿ 25 ಅಂಕ ಅಥವಾ ಶೇಕಡ 0.15ರಷ್ಟು ಕುಸಿದು 15,811ಕ್ಕೆ ವಹಿವಾಟು ಅಂತ್ಯ ಮಾಡಿದೆ.
ಬುಧವಾರದ ವಹಿವಾಟಿನಲ್ಲಿ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 267 ಅಂಕ ಅಥವಾ ಶೇಕಡ 0.49ರಷ್ಟು ಏರಿಕೆಯಾಗಿದ್ದು, 53,397ಕ್ಕೆ ತಲುಪಿದೆ. ಇನ್ನು ಎನ್‌ಎಸ್‌ಇ ನಿಫ್ಟಿ 58 ಅಂಕ ಅಥವಾ ಶೇಕಡ 0.36ರಷ್ಟು ಜಿಗಿದು 15,868ಕ್ಕೆ ವಹಿವಾಟು ಆರಂಭ ಮಾಡಿದೆ.
ನಿಫ್ಟಿ ಬ್ಯಾಂಕ್, ನಿಫ್ಟಿ ಆಟೋ ಏರಿಕೆ
ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 0.61 ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 0.50 ರಷ್ಟು ಏರಿದೆ. 15 ಸೆಕ್ಟರ್ ಗೇಜ್‌ಗಳಲ್ಲಿ 12 ಲಾಭವನ್ನು ಕಂಡಿದೆ. ಇನ್ನು ಉಪ ಸೂಚ್ಯಂಕಗಳಾದ ನಿಫ್ಟಿ ಬ್ಯಾಂಕ್, ನಿಫ್ಟಿ ಆಟೋ ಮತ್ತು ನಿಫ್ಟಿ ಐಟಿ ಕ್ರಮವಾಗಿ ಶೇ.0.89, ಶೇ.0.98 ಮತ್ತು ಶೇ.0.51ರಷ್ಟು ಏರಿಕೆಯಾಗಿದೆ.
ಏಷ್ಯನ್ ಪೇಂಟ್ಸ್ ಟಾಪ್ ಸ್ಟಾಕ್
ಏಷ್ಯನ್ ಪೇಂಟ್ಸ್ ಟಾಪ್ ನಿಫ್ಟಿ ಸ್ಟಾಕ್ ಆಗಿದೆ. ಏಷ್ಯನ್ ಪೇಂಟ್ಸ್ ಷೇರು ಶೇಕಡಾ 2.62 ರಷ್ಟು ಏರಿಕೆಯಾಗಿ ರೂಪಾಯಿ 2,839 ಕ್ಕೆ ತಲುಪಿದೆ. ಈ ಸಂದರ್ಭದಲ್ಲೇ ಬಜಾಜ್ ಫಿನಾನ್ಸ್, ಈಚರ್ ಮೋಟಾರ್ಸ್, ಬಿಪಿಸಿಎಲ್ ಮತ್ತು ಹೀರೋ ಮೋಟೋಕಾರ್ಪ್ ಕೂಡ ಲಾಭ ಗಳಿಸಿದೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ 1,570 ಷೇರುಗಳು ಏರಿಕೆ ಕಂಡಿದ್ದರೆ, 698 ಷೇರುಗಳು ಕುಸಿತ ಕಂಡಿದೆ.
ಯಾವ ಷೇರು ಏರಿಕೆ, ಯಾವುದಕ್ಕೆ ಕುಸಿತ?
30-ಷೇರುಗಳ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಸೂಚ್ಯಂಕದಲ್ಲಿ ಬಜಾಜ್ ಫಿನಾನ್ಸ್, ಏಷ್ಯನ್ ಪೇಂಟ್ಸ್, ಬಜಾಜ್ ಫಿನ್‌ಸರ್ವ್, ಆಕ್ಸಿಸ್ ಬ್ಯಾಂಕ್, ಎಲ್ & ಟಿ, ಎಸ್‌ಬಿಐ, ಮಾರುತಿ, ಇಂಡಸ್‌ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಟಿಸಿ, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಸ್ಟಾಕ್‌ಗಳು ಏರಿಕೆ ಕಂಡಿದೆ. ಇದೇ ಸಂದರ್ಭದಲ್ಲಿ ಟಾಟಾ ಸ್ಟೀಲ್, ಎನ್‌ಟಿಪಿಸಿ ಮತ್ತು ಪವರ್‌ಗ್ರಿಡ್ ಸ್ಟಾಕ್‌ಗಳು ನಷ್ಟವನ್ನು ಕಂಡಿದೆ.
ಸತತ 3ನೇ ಸೆಷನ್‌ನಲ್ಲಿ ಎಲ್‌ಐಸಿ ಷೇರು ಏರಿಕೆ
ದೇಶದ ಅತಿದೊಡ್ಡ ವಿಮಾ ಸಂಸ್ಥೆ ಮತ್ತು ಅತಿದೊಡ್ಡ ದೇಶೀಯ ಹಣಕಾಸು ಹೂಡಿಕೆದಾರರಾದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ಶೇ 0.92 ರಷ್ಟು ಏರಿಕೆಯಾಗಿ ರೂಪಾಯಿ 709.30 ಕ್ಕೆ ವಹಿವಾಟು ಆರಂಭ ಮಾಡಿದೆ. ಸತತ ಮೂರನೇ ಸೆಷನ್‌ನಲ್ಲಿ ಎಲ್‌ಐಸಿ ಷೇರು ಏರಿಕೆಯಾಗಿದೆ. ಮಂಗಳವಾರ ವಹಿವಾಟಿನ ಅಂತ್ಯದಲ್ಲಿ ಷೇರು ಮಾರುಕಟ್ಟೆ ಕುಸಿತ ಕಂಡರೂ ಕೂಡಾ ಎಲ್‌ಐಸಿ ಷೇರು ಮಾತ್ರ ಏರಿಕೆ ಕಂಡಿತ್ತು. ಶೇಕಡ 1.49ರಷ್ಟು ಏರಿಕೆ ಕಂಡು ರೂಪಾಯಿ 702.80ಕ್ಕೆ ತಲುಪಿತ್ತು.


Click it and Unblock the Notifications