ಷೇರು ಪೇಟೆ ಶುಭಾರಂಭ: ಮತ್ತೆ ಎಲ್‌ಐಸಿ ಸ್ಟಾಕ್ ಜಿಗಿತ

ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮ ಸೂಚನೆ ಅನುಸರಿಸಿ ಭಾರತೀಯ ಷೇರು ಮಾರುಕಟ್ಟೆಯು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಉತ್ತಮವಾಗಿ ವಹಿವಾಟು ನಡೆಸಿದೆ. ಚೀನಾದಿಂದ ಆಮದು ಮಾಡಲಾಗುವ ಸರಕುಗಳ ಮೇಲೆ ಅಮೆರಿಕಾದ ಸುಂಕ ನೀತಿಯಲ್ಲಿ ಪರಿಷ್ಕರಣೆಯಾಗಬಹುದು ಎಂಬ ವರದಿಗಳ ಮಧ್ಯೆ ಜಾಗತಿಕ ಮಾರುಕಟ್ಟೆಯಲ್ಲಿ ಏಷ್ಯನ್ ಷೇರುಗಳು ಜಿಗಿತ ಕಾಣುವ ಸಾಧ್ಯತೆ ಇದೆ. ಜುಲೈ 4ರಂದು ಯುಎಸ್ ಷೇರು ಮಾರುಕಟ್ಟೆಯು ಮುಚ್ಚಲಾಗಿತ್ತು.

30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 267 ಅಂಕ ಅಥವಾ ಶೇಕಡಾ 0.50 ರಷ್ಟು ಜಿಗಿದು 53,501 ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 67 ಅಂಕ ಅಥವಾ 0.42 ರಷ್ಟು ಏರಿಕೆಯಾಗಿ 15,903 ಕ್ಕೆ ವಹಿವಾಟು ಆರಂಭ ಮಾಡಿದೆ. ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 0.49 ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 0.75 ರಷ್ಟು ಏರಿಕೆ ಕಂಡಿದೆ.

15 ಸೆಕ್ಟರ್ ಗೇಜ್‌ಗಳು ಕೂಡಾ ವಹಿವಾಟಿನ ಆರಂಭದಲ್ಲೇ ಏರಿಕೆಯಾಗಿ ವಹಿವಾಟು ನಡೆಸುತ್ತಿದೆ. ನಿಫ್ಟಿ ಮೆಟಲ್, ನಿಫ್ಟಿ ಆಟೋ ಮತ್ತು ನಿಫ್ಟಿ ಫೈನಾನ್ಶಿಯಲ್ ಸರ್ವಿಸಸ್ ಕ್ರಮವಾಗಿ ಶೇಕಡಾ 1.17, ಶೇಕಡಾ 0.68 ಮತ್ತು ಶೇಕಡಾ 0.69 ರಷ್ಟು ಏರಿಕೆಯಾಗಿದೆ.

 ಟಾಟಾ ಮೋಟಾರ್ಸ್ ಟಾಪ್ ನಿಫ್ಟಿ ಗೇನರ್

ಟಾಟಾ ಮೋಟಾರ್ಸ್ ಟಾಪ್ ನಿಫ್ಟಿ ಗೇನರ್

ಇನ್ನು ಸ್ಟಾಕ್ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಟಾಪ್ ನಿಫ್ಟಿ ಗೇನರ್ ಆಗಿದೆ. ಟಾಟಾ ಮೋಟಾರ್ಸ್ ಸ್ಟಾಕ್‌ಗಳು ಶೇಕಡಾ 2.49 ರಷ್ಟು ಏರಿಕೆಯಾಗಿ ರೂಪಾಯಿ 418.60 ಕ್ಕೆ ತಲುಪಿ ವಹಿವಾಟು ಆರಂಭಿಸಿದೆ. ಇನ್ನು ಕೋಲ್ ಇಂಡಿಯಾ, ಹಿಂಡಾಲ್ಕೊ, ಅದಾನಿ ಪೋರ್ಟ್ಸ್ ಮತ್ತು ಜೆಎಸ್‌ಡಬ್ಲ್ಯು ಸ್ಟೀಲ್ ಷೇರುಗಳು ಕೂಡಾ ಹೆಚ್ಚಳವಾಗಿದೆ. ಸೋಮವಾರ ಸೆನ್ಸೆಕ್ಸ್ 327 ಅಂಕ ಅಥವಾ 0.62 ರಷ್ಟು ಏರಿ 53,235 ಕ್ಕೆ ತಲುಪಿದ್ದರೆ, ನಿಫ್ಟಿ 83 ಅಂಕ ಅಥವಾ 0.53 ರಷ್ಟು ಏರಿಕೆ ಕಂಡು 15,835 ಕ್ಕೆ ಸ್ಥಿರವಾಯಿತು.

 ಯಾವ ಷೇರು ಏರಿಕೆ, ಯಾವುದು ಇಳಿಕೆ?

ಯಾವ ಷೇರು ಏರಿಕೆ, ಯಾವುದು ಇಳಿಕೆ?

ಬಿಎಸ್‌ಇಯಲ್ಲಿ 1,730 ಷೇರುಗಳು ಲಾಭವನ್ನು ಕಂಡಿದ್ದರೆ, 543 ಷೇರುಗಳು ಕುಸಿತವನ್ನು ಕಂಡಿದೆ. 30-ಷೇರುಗಳ ಬಿಎಸ್‌ಇ ಸೂಚ್ಯಂಕದಲ್ಲಿ, ಪವರ್‌ಗ್ರಿಡ್, ಬಜಾಜ್ ಫಿನ್‌ಸರ್ವ್, ಕೋಟಕ್ ಮಹೀಂದ್ರಾ ಬ್ಯಾಂಕ್, ಟಾಟಾ ಸ್ಟೀಲ್, ಎನ್‌ಟಿಪಿಸಿ, ರಿಲಯನ್ಸ್ ಇಂಡಸ್ಟ್ರೀಸ್, ಅಲ್ಟ್ರಾಟೆಕ್ ಸಿಮೆಂಟ್, ಐಸಿಐಸಿಐ ಬ್ಯಾಂಕ್, ಟೆಕ್ ಮಹೀಂದ್ರಾ, ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಭಾರೀ ಲಾಭವನ್ನು ಗಳಿಸಿದೆ. ಇನ್ನು ಈ ಸಂದರ್ಭದಲ್ಲೇ ಏಷ್ಯನ್ ಪೇಂಟ್ಸ್, ಐಟಿಸಿ ಮತ್ತು ಟೈಟಾನ್ ನಷ್ಟವನ್ನು ಕಂಡಿದೆ.

 ಎಲ್‌ಐಸಿ ಷೇರು ಮತ್ತೆ ಏರಿಕೆ

ಎಲ್‌ಐಸಿ ಷೇರು ಮತ್ತೆ ಏರಿಕೆ

ದೇಶದ ಅತಿದೊಡ್ಡ ವಿಮಾ ಸಂಸ್ಥೆ ಮತ್ತು ಅತಿದೊಡ್ಡ ದೇಶೀಯ ಹಣಕಾಸು ಹೂಡಿಕೆದಾರ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ಶೇ 1.52 ರಷ್ಟು ಏರಿಕೆಯಾಗಿ ರೂಪಾಯಿ 703.05 ಕ್ಕೆ ತಲುಪಿ ವಹಿವಾಟು ಆರಂಭ ಮಾಡಿದೆ. ಸೋಮವಾರ ಆರಂಭಿಕ ಹಾಗೂ ವಹಿವಾಟಿನ ಅಂತ್ಯದ ವೇಳೆಯಲ್ಲೂ ಎಲ್‌ಐಸಿ ಷೇರು ಏರಿಕೆ ಕಂಡಿದೆ. ಸೋಮವಾರ ಆರಂಭಿಕ ವಹಿವಾಟಿನಲ್ಲಿ ಎಲ್‌ಐಸಿ ಷೇರು ಶೇ 0.73 ರಷ್ಟು ಏರಿಕೆಯಾಗಿ ರೂಪಾಯಿ 681.70ರಲ್ಲಿ ವಹಿವಾಟು ಆರಂಭಿಸಿದೆ. ವಹಿವಾಟ ಅಂತ್ಯದಲ್ಲೂ ಏರಿದೆ. ಷೇರುಗಳು ಶೇಕಡ 2.33ರಷ್ಟು ಹೆಚ್ಚಳವಾಗಿ ರೂಪಾಯಿ 692.50ಕ್ಕೆ ತಲುಪಿದ್ದವು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+