ವಾಲ್‌ಸ್ಟ್ರೀಟ್‌ನಲ್ಲಿ ಏಷ್ಯನ್ ಸ್ಟಾಕ್‌ಗಳು ಲಾಭವನ್ನು ಗಳಿಸಿದ್ದು, ಇದನ್ನು ಅನುಸರಿಸಿ ಇಂದು ಭಾರತದ ಷೇರು ಮಾರುಕಟ್ಟೆ ಏರಿಕೆ ಕಂಡಿದೆ. ಬ್ರೆಟಿಷ್ ಪ್ರಧಾನ ಮಂತ್ರಿ ಸ್ಥಾನದಿಂದ ಬೋರಿಸ್ ಜಾನ್ಸನ್ ಕೆಳಕ್ಕೆ ಇಳಿಯುತ್ತಿದ್ದಂತೆ ಬ್ರಿಟಿಷ್ ಕರೆನ್ಸಿ ಚೇತರಿಕೆ ಕಂಡಿದೆ.
ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 316 ಅಂಕ ಅಥವಾ ಶೇಕಡ 0.58ರಷ್ಟು ಏರಿಕೆಯಾಗಿ 54,495ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 104 ಅಂಕ ಅಥವಾ ಶೇಕಡ 0.64ರಷ್ಟು ಏರಿಕೆಯಾಗಿ 16,236ಕ್ಕೆ ತಲುಪಿದೆ. ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 0.32 ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 0.59 ರಷ್ಟು ಏರಿಕೆ ಕಂಡಿದೆ.
15 ಸೆಕ್ಟರ್ ಗೇಜ್‌ಗಳಲ್ಲಿ 13 ಲಾಭವನ್ನು ದಾಖಲಿಸಿದೆ. ಉಪ-ಸೂಚ್ಯಂಕಗಳಾದ ನಿಫ್ಟಿ ಬ್ಯಾಂಕ್ ಮತ್ತು ನಿಫ್ಟಿ ಆಟೋ ಕ್ರಮವಾಗಿ ಶೇಕಡಾ 0.67 ಮತ್ತು 0.77 ರಷ್ಟು ಏರಿಕೆಯಾಗಿದೆ. ಗುರುವಾರ ವಹಿವಾಟಿನ ಅಂತ್ಯದಲ್ಲಿ 30 ಷೇರು ಬಿಎಸ್‌ಇ ಸೆನ್ಸೆಕ್ಸ್ 427 ಅಂಕ ಅಥವಾ 0.80 ರಷ್ಟು ಜಿಗಿದು 54,178 ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 143 ಅಂಕ ಅಥವಾ 0.89 ರಷ್ಟು ಏರಿಕೆ ಕಂಡು 16,133 ಕ್ಕೆ ಸ್ಥಿರವಾಗಿದೆ.
ಎಂ&ಎಂ ಸ್ಟಾಕ್ ಭಾರೀ ಏರಿಕೆ
ಎಂ&ಎಂ ನಿಫ್ಟಿ ಗೇನರ್ ಆಗಿದೆ. ಎಂ&ಎಂ ಸ್ಟಾಕ್ ಶೇಕಡ 2.80ರಷ್ಟು ಏರಿಕೆಯಾಗಿ ರೂಪಾಯಿ 1,165.05ಕ್ಕೆ ತಲುಪಿದೆ. ಎಲ್&ಟಿ, ಕೋಲ್ ಇಂಡಿಯಾ, ಆಕ್ಸಿಸ್ ಬ್ಯಾಂಕ್, ಎನ್‌ಟಿಪಿಸಿ ಕೂಡಾ ಲಾಭವನ್ನು ಗಳಿಸಿದೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ 1,715 ಷೇರುಗಳು ಏರಿಕೆ ಕಂಡಿದ್ದರೆ, 622 ಷೇರುಗಳು ನಷ್ಟವನ್ನು ಕಂಡಿದೆ.
ಯಾವ ಷೇರು ಏರಿಕೆ, ಯಾವುದು ನಷ್ಟ?
30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ಸೂಚ್ಯಂಕದಲ್ಲಿ ಎಂ & ಎಂ, ಎನ್‌ಟಿಪಿಸಿ, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್, ಪವರ್‌ಗ್ರಿಡ್, ಇನ್ಫೋಸಿಸ್, ಟೆಕ್ ಮಹೀಂದ್ರಾ, ಕೋಟಕ್ ಮಹೀಂದ್ರಾ ಬ್ಯಾಂಕ್, ಸನ್ ಫಾರ್ಮಾ ಮತ್ತು ವಿಪ್ರೋ ಭಾರೀ ಲಾಭವನ್ನು ಗಳಿಸಿದೆ. ಏಷ್ಯನ್ ಪೇಂಟ್ಸ್, ಟಾಟಾ ಸ್ಟೀಲ್, ಇಂಡಸ್‌ಇಂಡ್ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್, ಟೈಟಾನ್, ಟಿಸಿಎಸ್, ಬಜಾಜ್ ಫೈನಾನ್ಸ್, ಡಾ ರೆಡ್ಡೀಸ್ ಮತ್ತು ಮಾರುತಿ ಷೇರುಗಳು ನಷ್ಟವನ್ನು ಕಂಡಿದೆ.
ಎಲ್‌ಐಸಿ ಸ್ಟಾಕ್ ಏರಿಕೆ
ದೇಶದ ಅತಿದೊಡ್ಡ ವಿಮಾ ಸಂಸ್ಥೆ ಮತ್ತು ಅತಿದೊಡ್ಡ ದೇಶೀಯ ಹಣಕಾಸು ಹೂಡಿಕೆದಾರರಾದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ಚೇತರಿಕೆ ಕಂಡಿದೆ. ಗುರುವಾರ ವಹಿವಾಟಿನ ಅಂತ್ಯದಲ್ಲಿ ಎಲ್‌ಐಸಿ ಷೇರು ಶೇಕಡಾ 0.70 ರಷ್ಟು ಕುಸಿದು ರೂಪಾಯಿ 698.15 ಕ್ಕೆ ತಲುಪಿದೆ. ಆದರೆ ಶುಕ್ರವಾರ ವಹಿವಾಟಿನ ಆರಂಭದಲ್ಲಿ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ಶೇ 1.17 ರಷ್ಟು ಏರಿಕೆಯಾಗಿ ರೂಪಾಯಿ 706.30 ಕ್ಕೆ ವಹಿವಾಟು ಆರಂಭ ಮಾಡಿದೆ.


Click it and Unblock the Notifications