ಷೇರುಪೇಟೆ ಶುಭಾರಂಭ: ಯಾವೆಲ್ಲ ಸ್ಟಾಕ್ ಏರಿಕೆ?

ಷೇರುಪೇಟೆಯು ಬುಧವಾರ ವಹಿವಾಟಿನ ಅಂತ್ಯದ ಸಮಯದಿಂದ ನಿರಂತರವಾಗಿ ಏರಿಕೆಯನ್ನು ದಾಖಲಿಸಿದೆ. ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ ಸತತ ಮೂರನೇ ಸೆಷನ್‌ನಲ್ಲಿ ಷೇರು ಮಾರುಕಟ್ಟೆಯು ಲಾಭವನ್ನು ವಿಸ್ತರಿಸಿದೆ. ವಾಲ್‌ಸ್ಟ್ರೀಟ್‌ನಲ್ಲಿಯ ಬೆಳವಣಿಗೆಯಿಂದ ಪ್ರೇರೇಪಿತವಾಗಿ ಭಾರತೀಯ ಷೇರು ಮಾರುಕಟ್ಟೆಯು ಕೂಡಾ ಶುಕ್ರವಾರ ಪಾಸಿಟಿವ್ ಆಗಿದೆ. ಗುರುವಾರ ವಹಿವಾಟಿನ ಅಂತ್ಯದಲ್ಲಿ ಸೆನ್ಸೆಕ್ಸ್, ನಿಫ್ಟಿ ಭಾರಿ ಏರಿಕೆಯನ್ನು ಕಂಡಿದೆ.

ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ 30 ಷೇರು ಬಿಎಸ್‌ಇ ಸೆನ್ಸೆಕ್ಸ್ 462 ಅಂಕ ಅಥವಾ ಶೇಕಡ 0.81ರಷ್ಟು ಏರಿ 57,320ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 148 ಅಂಕ ಅಥವಾ ಶೇಕಡ 0.88ರಷ್ಟು ಹೆಚ್ಚಾಗಿ 17,078ಕ್ಕೆ ತಲುಪಿದೆ.

ಇನ್ನು ಗುರುವಾರ ವಹಿವಾಟಿನ ಅಂತ್ಯದಲ್ಲಿ 30 ಷೇರು ಬಿಎಸ್‌ಇ ಸೆನ್ಸೆಕ್ಸ್ 1,006 ಅಂಕ ಅಥವಾ ಶೇಕಡ 1.80ರಷ್ಟು ಏರಿ 56,822ಕ್ಕೆ ತಲುಪಿದ್ದರೆ ಎನ್‌ಎಸ್‌ಇ ನಿಫ್ಟಿ 274 ಅಂಕ ಅಥವಾ ಶೇಕಡ 1.65ರಷ್ಟು ಹೆಚ್ಚಾಗಿ 16,916ಕ್ಕೆ ವಹಿವಾಟು ಅಂತ್ಯ ಮಾಡಿತ್ತು. ಹಾಗಾದರೆ ಷೇರು ಪೇಟೆಯಲ್ಲಿ ಶುಕ್ರವಾರ ಯಾವೆಲ್ಲಾ ಷೇರುಗಳು ಏರಿಕೆಯಾಗಿದೆ, ಯಾವೆಲ್ಲಾ ಷೇರುಗಳು ಇಳಿಕೆಯಾಗಿದೆ ಎಂದು ನಾವು ತಿಳಿಯೋಣ ಮುಂದೆ ಓದಿ....

 ನಿಫ್ಟಿ ಮಿಡ್‌ಕ್ಯಾಪ್, ಸ್ಮಾಲ್ ಕ್ಯಾಪ್

ನಿಫ್ಟಿ ಮಿಡ್‌ಕ್ಯಾಪ್, ಸ್ಮಾಲ್ ಕ್ಯಾಪ್

ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡ 1.03ರಷ್ಟು ಏರಿಕೆಯಾಗಿದ್ದರೆ, ಸ್ಮಾಲ್ ಕ್ಯಾಪ್ ಶೇಕಡ 0.85ರಷ್ಟು ಹೆಚ್ಚಳವಾಗಿದೆ. 15 ಸೆಕ್ಟರ್ ಗೇಜ್‌ಗಳಲ್ಲಿ 13 ಲಾಭವನ್ನು ಕಂಡಿದೆ. ಉಪ ಸೂಚ್ಯಂಕಗಳಾದ ನಿಫ್ಟಿ ಆಟೋ, ನಿಫ್ಟಿ ಫೈನಾನ್ಶಿಯಲ್ ಸರ್ವಿಸಸ್, ನಿಫ್ಟಿ ಐಟಿ, ನಿಫ್ಟಿ ಮೆಟಲ್ ಕ್ರಮವಾಗಿ ಶೇಕಡ 1.57, ಶೇಕಡ 1.58, ಶೇಕಡ 1.42, ಶೇಕಡ 1.51 ಏರಿಕೆಯಾಗಿದೆ. ಗುರುವಾರ ವಹಿವಾಟಿನ ಅಂತ್ಯದಲ್ಲಿ ಉಪ ಸೂಚ್ಯಂಕಗಳಾದ ನಿಫ್ಟಿ ಐಟಿ, ನಿಫ್ಟಿ ಫೈನಾನ್ಶಿಯಲ್ ಸರ್ವೀಸಸ್, ನಿಫ್ಟಿ ಬ್ಯಾಂಕ್ ಕ್ರಮವಾಗಿ ಶೇಕಡ 2.54, ಶೇಕಡ 2.05, ಶೇಕಡ 1.42 ಏರಿಕೆಯಾಗಿದೆ.

 ಎಸ್‌ಬಿಐ ಲೈಫ್ ಟಾಪ್ ನಿಫ್ಟಿ ಗೇನರ್

ಎಸ್‌ಬಿಐ ಲೈಫ್ ಟಾಪ್ ನಿಫ್ಟಿ ಗೇನರ್

ಸ್ಟಾಕ್ ಮಾರುಕಟ್ಟೆಯಲ್ಲಿ ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಟಾಪ್ ನಿಫ್ಟಿ ಗೇನರ್ ಆಗಿದೆ. ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಷೇರುಗಳು ಶೇಕಡ 6.98 ರಷ್ಟು ಏರಿಕೆಯಾಗಿ ರೂಪಾಯಿ 1,274.65ಕ್ಕೆ ತಲುಪಿದೆ. ಇನ್ನು ಷೇರು ಮಾರುಕಟ್ಟೆಯಲ್ಲಿ ಡಾ ರೆಡ್ಡೀಸ್ ಲ್ಯಾಬ್ ಟಾಪ್ ಲೂಸರ್ ಆಗಿದೆ. ಡಾ ರೆಡ್ಡೀಸ್ ಲ್ಯಾಬ್ ಷೇರುಗಳು ಶೇಕಡ 3.54ರಷ್ಟು ಕುಸಿತ ಕಂಡು, 4,109.20ಕ್ಕೆ ತಲುಪಿದೆ. ಈ ನಡುವೆ ಬಜಾಜ್ ಫಿನ್‌ಸರ್ವ್, ಟಾಟಾ ಸ್ಟೀಲ್, ಎಚ್‌ಡಿಎಫ್‌ಸಿ ಲೈಫ್, ಬಜಾಜ್ ಫೈನಾನ್ಸ್ ಲಾಭವನ್ನು ಗಳಿಸಿದೆ.

 ಯಾವೆಲ್ಲಾ ಷೇರುಗಳು ಏರಿಕೆ, ಯಾವುದು ಇಳಿಕೆ?

ಯಾವೆಲ್ಲಾ ಷೇರುಗಳು ಏರಿಕೆ, ಯಾವುದು ಇಳಿಕೆ?

ಬಾಂಬೆ ಸ್ಟಾಕ್ ಮಾರುಕಟ್ಟೆಯಲ್ಲಿ 1,841 ಷೇರುಗಳು ಏರಿಕೆಯನ್ನು ಕಂಡಿದ್ದರೆ, ಇದೇ ಸಂದರ್ಭದಲ್ಲಿ 544 ಷೇರುಗಳು ಇಳಿಕೆಯನ್ನು ದಾಖಲಿಸಿದೆ. 30 ಷೇರುಗಳು ಬಿಎಸ್‌ಇ ಸೂಚ್ಯಂಕದಲ್ಲಿ ಬಜಾಜ್‌ ಫಿನ್‌ಸರ್ವ್, ಟಾಟಾ ಸ್ಟೀಲ್, ಏಷ್ಯನ್ ಪೇಂಟ್ಸ್, ಬಜಾಜ್ ಫೈನಾನ್ಸ್, ಟೆಕ್ ಮಹೀಂದ್ರಾ, ಎಂ&ಎಂ, ಪವರ್ ಗ್ರಿಡ್, ವಿಪ್ರೋ, ಕೋಟಕ್ ಮಹೀಂದ್ರಾ ಬ್ಯಾಂಕ್, ಎಚ್‌ಸಿಎಲ್ ಟೆಕ್, ಇನ್ಫೋಸಿಸ್, ಎನ್‌ಟಿಪಿಸಿ, ಟಿಸಿಎಸ್, ಪವರ್‌ಗ್ರಿಡ್, ಎಲ್‌ಟಿ, ಟೈಟಾನ್, ಇಂಡಸ್‌ಇಂಡ್ ಬ್ಯಾಂಕ್, ನೆಸ್ಲೆ ಇಂಡಿಯಾ, ರಿಲಯನ್ಸ್, ಎಚ್‌ಡಿಎಫ್‌ಸಿ ಬ್ಯಾಂ್ಕ,, ಎಚ್‌ಡಿಎಫ್‌ಸಿ, ಆಕ್ಸಿಸ್ ಬ್ಯಾಂಕ್, ಭಾರ್ತಿ ಏರ್‌ಟೆಲ್ ಷೇರುಗಳು ಏರಿಕೆಯಾಗಿದೆ. ಈ ನಡುವೆ ಡಾ ರೆಡ್ಡೀಸ್ ಹಾಗೂ ಸನ್ ಫಾರ್ಮಾ ಷೇರುಗಳು ಕುಸಿದಿದೆ.

 ಎಲ್‌ಐಸಿ ಷೇರು ಹೇಗಿದೆ?

ಎಲ್‌ಐಸಿ ಷೇರು ಹೇಗಿದೆ?

ದೇಶದ ಅತಿದೊಡ್ಡ ವಿಮಾ ಸಂಸ್ಥೆ ಮತ್ತು ಅತಿದೊಡ್ಡ ದೇಶೀಯ ಹಣಕಾಸು ಹೂಡಿಕೆದಾರರಾದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ಶುಕ್ರವಾರ ವಹಿವಾಟಿನ ಆರಂಭದಲ್ಲಿ ಶೇ 0.96ರಷ್ಟು ಏರಿಕೆಯಾಗಿ ರೂಪಾಯಿ 681.35ಕ್ಕೆ ವಹಿವಾಟು ತಲುಪಿದೆ. ಗುರುವಾರ ಆರಂಭಿಕ ಹಾಗೂ ವಹಿವಾಟಿನ ಅಂತ್ಯದಲ್ಲಿ ಎಲ್‌ಐಸಿ ಷೇರುಗಳು ಏರಿಕೆಯನ್ನು ಕಂಡಿದೆ. ಗುರುವಾರ ಎಲ್‌ಐಸಿ ಷೇರುಗಳು ಶೇ 0.38 ರಷ್ಟು ಏರಿಕೆಯಾಗಿ ರೂಪಾಯಿ 677.05 ಕ್ಕೆ ವಹಿವಾಟು ಅಂತ್ಯ ಮಾಡಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+