ಸೆನ್ಸೆಕ್ಸ್, ನಿಫ್ಟಿ ಏರಿಕೆ: ಬಜಾಜ್ ಫೈನಾನ್ಸ್ ಟಾಪ್ ಗೇನರ್

ಪುಟ್ಟಿದೆದ್ದ ಷೇರು ಪೇಟೆ: ಸನ್‌ ಫಾರ್ಮಾ ಸ್ಟಾಕ್ ಏರಿಕೆ ಪುಟ್ಟಿದೆದ್ದ ಷೇರು ಪೇಟೆ: ಸನ್‌ ಫಾರ್ಮಾ ಸ್ಟಾಕ್ ಏರಿಕೆ ಪುಟ್ಟಿದೆದ್ದ ಷೇರು ಪೇಟೆ: ಸನ್‌ ಫಾರ್ಮಾ ಸ್ಟಾಕ್ ಏರಿಕೆಷೇರು ಮಾರುಕಟ್ಟೆಯು ಗುರುವಾರ ಆರಂಭಿಕ ವಹಿವಾಟಿನಲ್ಲಿ ಏರಿಕೆ ಕಂಡಿದೆ. ಸತತ ಎರಡು ದಿನಗಳಿಂದ ಇಳಿಕೆ ಕಂಡಿದ್ದ ಷೇರು ಮಾರುಕಟ್ಟೆಯು ಬುಧವಾರ ವಹಿವಾಟಿನ ಅಂತ್ಯದಲ್ಲಿ ಏರಿಕೆ ಕಂಡಿದೆ. ಗುರುವಾರ ವಹಿವಾಟಿನ ಆರಂಭದಲ್ಲಿಯೂ ಏರಿಕೆಯಾಗಿದೆ. ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರ ಏರಿಕೆ ಮಾಡದು ಎಂಬ ಸುದ್ದಿಯ ನಡುವೆ ಏಷ್ಯನ್ ಷೇರುಗಳು ಏರಿಕೆಯಾಗಿದೆ. ಈ ಬೆನ್ನಲ್ಲೇ ಗುರುವಾರದ ವಹಿವಾಟು ಉತ್ತಮವಾಗಿದೆ.

30 ಷೇರು ಬಿಎಸ್‌ಇ ಸೆನ್ಸೆಕ್ಸ್ 525 ಅಂಕ ಅಥವಾ ಶೇಕಡ 0.94ಕ್ಕೆ ಏರಿ 56,342ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 140 ಅಂಕ ಅಥವಾ ಶೇಕಡ 0.84ರಷ್ಟು ಹೆಚ್ಚಾಗಿ 16,782ಕ್ಕೆ ತಲುಪಿದೆ. ಬುಧವಾರ ವಹಿವಾಟಿನ ಅಂತ್ಯದ ವೇಳೆಗೆ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 547.83 ಅಂಕ ಅಥವಾ ಶೇಕಡ 0.99ರಷ್ಟು ಏರಿಕೆಯಾಗಿ 55,816.32ಕ್ಕೆ ತಲುಪಿದೆ. ಇನ್ನು ನಿಫ್ಟಿ ಶೇಕಡ 0.96ರಷ್ಟು ಅಥವಾ 157.95 ಅಂಕ ಏರಿಕೆಯಾಗಿ 16,641.80ಕ್ಕೆ ವಹಿವಾಟು ಅಂತ್ಯ ಮಾಡಿದೆ.

ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡ 0.37ರಷ್ಟು ಏರಿಕೆಯಾಗಿ ಸ್ಮಾಲ್ ಕ್ಯಾಪ್ ಶೇಕಡ 0.55ರಷ್ಟು ಹೆಚ್ಚಳವಾಗಿದೆ. 15 ಸೆಕ್ಟರ್ ಗೇಜ್‌ಗಳಲ್ಲಿ ಒಂಬತ್ತು ಲಾಭವನ್ನು ಕಂಡಿದೆ. ಉಪ ಸೂಚ್ಯಂಕಗಳಾದ ನಿಫ್ಟಿ ಬ್ಯಾಂಕ್, ನಿಫ್ಟಿ ಫೈನಾನ್ಶಿಯಲ್ ಸರ್ವೀಸಸ್, ನಿಫ್ಟಿ ಐಟಿ ಕ್ರಮವಾಗಿ ಶೇಕಡ 1.03, ಶೇಕಡ 1.26, ಶೇಕಡ 1.37 ಏರಿಕೆಯಾಗಿದೆ.

 ಬಜಾಜ್ ಫೈನಾನ್ಸ್ ಟಾಪ್ ಗೇನರ್

ಬಜಾಜ್ ಫೈನಾನ್ಸ್ ಟಾಪ್ ಗೇನರ್

ಷೇರು ಮಾರುಕಟ್ಟೆಯಲ್ಲಿ ಬಜಾಜ್ ಫೈನಾನ್ಸ್ ಟಾಪ್ ನಿಫ್ಟಿ ಗೇನರ್ ಆಗಿದೆ. ಬಜಾಜ್ ಫೈನಾನ್ಸ್ ಷೇರುಗಳು ಶೇಕಡಾ 5.43 ರಷ್ಟು ಏರಿಕೆಯಾಗಿ ರೂಪಾಯಿ 6,743.45 ಕ್ಕೆ ತಲುಪಿದೆ. ಈ ಸಂದರ್ಭದಲ್ಲೇ ಡಾ ರೆಡ್ಡೀಸ್ ಲ್ಯಾಬ್ ಷೇರುಗಳು ತೀವ್ರ ಕುಸಿತ ಕಂಡಿದ್ದು, ಟಾಪ್ ಲೂಸರ್ ಆಗಿದೆ. ಡಾ ರೆಡ್ಡೀಸ್ ಲ್ಯಾಬ್ ಷೇರುಗಳು ಶೇಕಡ 1.01ರಷ್ಟು ಇಳಿಕೆಯಾಗಿ ರೂಪಾಯಿ 4,242.95ಕ್ಕೆ ಕುಸಿದಿದೆ. ಬಜಾಜ್ ಫಿನ್‌ಸರ್ವ್, ಇಂಡಸ್‌ಇಂಡ್ ಬ್ಯಾಂಕ್, ಟಾಟಾ ಸ್ಟೀಲ್ ಮತ್ತು ಇನ್ಫೋಸಿಸ್ ಸ್ಟಾಕ್‌ಗಳು ಲಾಭವನ್ನು ಕಂಡಿದೆ.

 ಯಾವ ಷೇರು ಏರಿಕೆ, ಇಳಿಕೆ

ಯಾವ ಷೇರು ಏರಿಕೆ, ಇಳಿಕೆ

ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ 1,684 ಷೇರುಗಳು ಏರಿಕೆಯನ್ನು ಕಂಡಿದ್ದರೆ, 732 ಷೇರುಗಳು ನಷ್ಟವನ್ನು ಕಂಡಿದೆ. 30-ಷೇರುಗಳ ಬಿಎಸ್‌ಇ ಸೂಚ್ಯಂಕದಲ್ಲಿ, ಬಜಾಜ್ ಫಿನ್‌ಸರ್ವ್, ಬಜಾಜ್ ಫೈನಾನ್ಸ್, ಇಂಡಸ್‌ಇಂಡ್ ಬ್ಯಾಂಕ್, ಟಾಟಾ ಸ್ಟೀಲ್, ಇನ್ಫೋಸಿಸ್, ಕೋಟಕ್ ಮಹೀಂದ್ರಾ ಬ್ಯಾಂಕ್, ವಿಪ್ರೋ, ಟೆಕ್ ಮಹೀಂದ್ರಾ, ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಟ್ವಿನ್ಸ್ (ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್), ಎಚ್‌ಸಿಎಲ್ ಟೆಕ್ನಾಲಜೀಸ್, ಟಿಸಿಎಸ್ ಮತ್ತು ಎಸ್‌ಬಿಐ ಷೇರುಗಳು ಏರಿಕೆಯಾಗಿದೆ. ಆದರೆ ಡಾ.ರೆಡ್ಡೀಸ್, ಸನ್ ಫಾರ್ಮಾ, ಭಾರ್ತಿ ಏರ್‌ಟೆಲ್, ಐಟಿಸಿ, ನೆಸ್ಲೆ ಇಂಡಿಯಾ, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಎನ್‌ಟಿಪಿಸಿ ಷೇರುಗಳು ಕುಸಿತ ಕಂಡಿದೆ.

 ಎಲ್‌ಐಸಿ ಷೇರು ಹೇಗಿದೆ?

ಎಲ್‌ಐಸಿ ಷೇರು ಹೇಗಿದೆ?

ದೇಶದ ಅತಿದೊಡ್ಡ ವಿಮಾ ಸಂಸ್ಥೆ ಮತ್ತು ಅತಿದೊಡ್ಡ ದೇಶೀಯ ಹಣಕಾಸು ಹೂಡಿಕೆದಾರರಾದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ಗುರುವಾರ ಆರಂಭಿಕ ವಹಿವಾಟಿನಲ್ಲಿ ಕೊಂಚ ಏರಿಕೆಯಾಗಿದೆ. ಹಲವಾರು ದಿನಗಳಿಂದ ಎಲ್‌ಐಸಿ ಷೇರುಗಳು ಕುಸಿತ ಕಾಣುತ್ತಿತ್ತು. ಆದರೆ ಗುರುವಾರ ಆರಂಭಿಕ ವಹಿವಾಟಿನಲ್ಲಿ ಎಲ್‌ಐಸಿ ಷೇರುಗಳು ಶೇಕಡ 0.56 ರಷ್ಟು ಏರಿಕೆಯಾಗಿ ರೂಪಾಯಿ 678.25ಕ್ಕೆ ತಲುಪಿದೆ.

 ಯಾವೆಲ್ಲಾ ಸ್ಟಾಕ್‌ಗಳು ಇಂದು ಫೋಕಸ್

ಯಾವೆಲ್ಲಾ ಸ್ಟಾಕ್‌ಗಳು ಇಂದು ಫೋಕಸ್

ಡಾ ರೆಡ್ಡೀಸ್ ಲ್ಯಾಬೊರೇಟರೀಸ್, ನೆಸ್ಲೆ ಇಂಡಿಯಾ, ಎಸ್‌ಬಿಐ ಲೈಫ್ ಇನ್ಶುರೆನ್ಸ್ ಕಂಪನಿ, ಶ್ರೀ ಸಿಮೆಂಟ್, ಜುಬಿಲೆಂಟ್ ಫುಡ್‌ವರ್ಕ್ಸ್, ವೇದಾಂತ, ಬಜಾಜ್ ಫಿನ್‌ಸರ್ವ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಮಹೀಂದ್ರಾ & ಮಹೀಂದ್ರಾ ಫೈನಾನ್ಷಿಯಲ್ ಸರ್ವಿಸಸ್, ಪಿಎನ್‌ಬಿ ಹೌಸಿಂಗ್ ಫೈನಾನ್ಸ್, ಎಸ್‌ಬಿಐ ಕಾರ್ಡ್‌ ಮತ್ತು ಪಾವತಿ ಸೇವೆಗಳು, ಟಿವಿಎಸ್ ಮೋಟಾರ್ ಕಂಪನಿ, ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್, ಚಾಲೆಟ್ ಹೋಟೆಲಲ್ಸ್, ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಸಿಎಂಎಸ್ ಇನ್ಫೋ ಸಿಸ್ಟಮ್ಸ್, ಜಿಎಚ್‌ಸಿಎಲ್, ಎಎವಿಎಎಸ್ ಫೈನಾನ್ಶಿಯರ್ಸ್, ಇಂಟೆಲೆಕ್ಟ್ ಡಿಸೈನ್ ಅರೆನಾ, ಡಾ ಲಾಲ್ ಪಾಥ್‌ಲ್ಯಾಬ್ಸ್, ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವಿಸಸ್, ನಿಪ್ಪಾನ್ ಲೈಫ್ ಇಂಡಿಯಾ ಅಸೆಟ್ ಮ್ಯಾನೇಜ್‌ಮೆಂಟ್, ಎನ್‌ಐಐಟಿ, ಎನ್‌ಒಸಿಐಎಲ್, ಆರ್‌ಐಟಿಇಎಸ್, ಸೋನಾ ಬಿಎಲ್‌ಡಬ್ಲ್ಯೂ ಪ್ರೆಶಿಯಸ್ ಫೋರ್ಜಿಂಗ್‌ಗಳು, ಟಿಟಿಕೆ ಪ್ರೆಸ್ಟೀಜ್ ಮತ್ತು ವೆಸ್ಟ್‌ಲೈಫ್ ಡೆವಲಪ್‌ಮೆಂಟ್ ಇಂದಿನ ಪ್ರಮುಖ ಸ್ಟಾಕ್‌ಗಳು ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+