BSNL ಬಳಿಕ ಮಹಾನಗರ ದೂರವಾಣಿ ನಿಗಮ ಲಿಮಿಟೆಡ್ (MTNL)ನ ಉದ್ಯೋಗಿಗಳು ಸ್ವಯಂ ನಿವೃತ್ತಿ ಯೋಜನೆ (VRS) ಪ್ಯಾಕೇಜ್ ಉತ್ತಮವಾಗಿ ಸ್ಪಂದಿಸಿದ್ದು, ಈಗಾಗಲೇ 13,500 ಉದ್ಯೋಗಿಗಳು VRS ಆಯ್ಕೆ ಮಾಡಿಕೊಂಡಿದ್ದಾರೆ.
ಸರ್ಕಾರಿ ಸ್ವಾಮ್ಯದ ಮಹಾನಗರ ದೂರವಾಣಿ ಸೇವಾ ನಿಗಮವು ನಿರೀಕ್ಷಿಸಿದಕ್ಕಿಂತ ಹೆಚ್ಚಾಗಿ ಉದ್ಯೋಗಿಗಳು VRS ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಬುಧವಾರ ತಿಳಿಸಿದೆ. ಈ ಹಿಂದೆ BSNLನ 77 ಸಾವಿರ ಉದ್ಯೋಗಿಗಳು VRS ಪ್ಯಾಕೇಜ್ ಒಪ್ಪಿಕೊಂಡಿದ್ದರು.

MTNL ಆರಂಭದಲ್ಲಿ ಸ್ವಯಂ ಪ್ರೇರಿತ ನಿವೃತ್ತಿ ಯೋಜನೆಗೆ 13,500 ಉದ್ಯೋಗಿಗಳು ಒಪ್ಪಿಕೊಳ್ಳುವರು ಎಂದು ಅಂದಾಜಿಸಿತ್ತು. ಆದರೆ ಈಗಾಗಲೇ ಅಂತಿಮ ದಿನಕ್ಕೆ ಇನ್ನೆರಡು ವಾರಗಳು ಇರುವಂತೆಯೇ 13,532 ಉದ್ಯೋಗಿಗಳು VRS ಆಯ್ಕೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದೆ. MTNLನ 16,300 ಉದ್ಯೋಗಿಗಳು VRS ಯೋಜನೆಗೆ ಅರ್ಹರಾಗಿದ್ದಾರೆ.

'ನಮಗೆ ಬಲವಾದ ಪ್ರತಿಕ್ರಿಯೆ ಬಂದಿದೆ. ಮತ್ತು ಇಲ್ಲಿಯವರೆಗೂ 13,532 ಉದ್ಯೋಗಿಗಳು VRS ಯೋಜನೆ ಆಯ್ದುಕೊಂಡಿದ್ದಾರೆ. ನಮ್ಮ ಆಂತರಿಕ ಗುರಿ 13,500 ಆಗಿತ್ತು. ಆದರೆ ಈಗ ನಿಗದಿತ ದಿನಾಂಕದ ಕೊನೆಯ ವೇಳೆಗೆ ಈ ಸಂಖ್ಯೆಯು 14,500 ರಿಂದ 15,000 ತಲುಪಬಹುದು' ಎಂದು MTNL ಅಧ್ಯಕ್ಷ ಮತ್ತು ವ್ಯವಸ್ತಾಪಕ ನಿರ್ದೇಶಕ ಸುನಿಲ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.
ದೆಹಲಿ ಮತ್ತು ಮುಂಬೈನಲ್ಲಿ ಹೆಚ್ಚಾಗಿ ಕಾರ್ಯನಿರ್ವಹಣೆ ಹೊಂದಿರುವ MTNL ಗುಜರಾತ್ ಮಾದರಿಯಲ್ಲಿ VRS ಯೋಜನೆಯನ್ನು ಆರಂಭಿಸಿದೆ. ಉದ್ಯೋಗಿಗಳು ಸ್ವಯಂ ನಿವೃತ್ತಿ ಯೋಜನೆಗೆ ಒಳಪಡಲು ಡಿಸೆಂಬರ್ 3 ಕೊನೆಯ ದಿನಾಂಕವಾಗಿದೆ.
MTNL ಕಳೆದ ಹತ್ತು ವರ್ಷಗಳಲ್ಲಿ 9 ವರ್ಷ ನಷ್ಟ ಅನುಭವಿಸಿದ್ದಾಗಿ ಘೋಷಿಸಿದೆ. 2010ರಿಂದ BSNL ಹಾಗೂ MTNL ಒಟ್ಟಾರೆ 40 ಸಾವಿರ ಕೋಟಿ ನಷ್ಟ ಅನುಭವಿಸಿವೆ.


Click it and Unblock the Notifications