70,000ಕ್ಕೂ ಹೆಚ್ಚು ಕಂಪೆನಿಗಳು ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದೇನು ಗೊತ್ತಾ?

ಕೊರೊನಾ ವೈರಾಣು ಬಿಕ್ಕಟ್ಟಿನ ಹಿನ್ನೆಲೆಯಲ್ಲಿ 'ವರ್ಕ್ ಫ್ರಮ್ ಹೋಮ್' ನಿಯಮ ತರಲು ಸಂಪೂರ್ಣ ಸಿದ್ಧವಾಗಿರುವುದಾಗಿ 70,000ಕ್ಕೂ ಹೆಚ್ಚು ಕಂಪೆನಿಗಳು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಕ್ಕೆ ವರದಿ ಮಾಡಿಕೊಂಡಿವೆ. ಸಚಿವಾಲಯದಿಂದ ನೀಡಿದ ಅರ್ಜಿಯಲ್ಲಿ ದೊಡ್ಡ ದೊಡ್ಡ ಕಂಪೆನಿಗಳು ಸಹ ನಿಯಮಾನುಸಾರ ಇರುವುದಾಗಿ ತಿಳಿಸಿವೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಸಚಿವಾಲಯದಿಂದ ಒಂದು ಅರ್ಜಿಯನ್ನು ಸಿದ್ಧಪಡಿಸಲಾಗಿದ್ದು, 'ಒನ್ ಟೈಮ್ ಪಾಸ್ ವರ್ಡ್' ಬಳಸಿ, ಅದನ್ನು ಅಧಿಕೃತ ಸಹಿಯೊಂದಿಗೆ ಕಂಪೆನಿಗಳು ಸಲ್ಲಿಸಬೇಕು. "ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ನಿಯಮಾನುಸಾರ ಕಾರ್ಯ ನಿರ್ವಹಿಸಲು ಸಿದ್ಧರಿರುವರೇ ಎಂಬುದನ್ನು ತಿಳಿದು, ವಿಶ್ವಾಸ ಹೆಚ್ಚಿಸುವ ಪ್ರಯತ್ನ ಇದು. ಇದರಲ್ಲಿ ಯಾವುದೇ ಕಾರ್ಯಾಚರಣೆ ಅಥವಾ ದಂಡ ಇರುವುದಿಲ್ಲ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

70,000ಕ್ಕೂ ಹೆಚ್ಚು ಕಂಪೆನಿಗಳು ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದೇನು?

ಉದ್ಯಮಿಗಳಿಂದ ಅಭೂತಪೂರ್ವವಾದ ಪ್ರತಿಕ್ರಿಯೆ ಬಂದಿದೆ ಎಂದು ತಿಳಿಸಲಾಗಿದೆ. "ಸಾರ್ವಜನಿಕ ಆರೋಗ್ಯ ತುರ್ತು ಸಂದರ್ಭದಲ್ಲಿ ವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ 'ಹೌದು/ಇಲ್ಲ' ಎಂಬ ಉತ್ತರ ಒಳಗೊಂಡ ವರದಿ ಸಿದ್ಧಪಡಿಸಲಾಗಿರುತ್ತದೆ. ಇದು ಕಂಪೆನಿ ಅಫರ್ಮೆಷನ್ ರಿಪೋರ್ಟ್ (ಸಿಎಆರ್). ಬಹಳ ಸರಳವಾಗಿರುತ್ತದೆ" ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+