ಗಣರಾಜ್ಯೋತ್ಸವದ ಮೊದಲು, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಜನವರಿ 25 ರಂದು ಪದ್ಮ ಪ್ರಶಸ್ತಿ ವಿಜೇತರ ಹೆಸರನ್ನು ಘೋಷಿಸಿದರು. ಈ ಪಟ್ಟಿಯಲ್ಲಿ ವ್ಯಾಪಾರ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದ ಹಲವಾರು ಮಂದಿ ಕೂಡಾ ಇದ್ದಾರೆ.
ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್, ಸೀರಮ್ ಇನ್‌ಸ್ಟಿಟ್ಯೂಟ್‌ನ ಸೈರಸ್ ಪೂನಾವಾಲಾ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇವರಿಗೆ 'ವ್ಯಾಪಾರ ಮತ್ತು ಉದ್ಯಮ' ವಿಭಾಗದಲ್ಲಿ ಪ್ರಶಸ್ತಿ ನೀಡಲಾಗಿದೆ.
ಗಮನಾರ್ಹವಾಗಿ, ಪದ್ಮ ಪ್ರಶಸ್ತಿಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ, ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ. ಸಾಮಾಜಿಕ ಕಾರ್ಯ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ ಮತ್ತು ಇಂಜಿನಿಯರಿಂಗ್, ವ್ಯಾಪಾರ ಮತ್ತು ಕೈಗಾರಿಕೆ, ಔಷಧ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ ಮತ್ತು ನಾಗರಿಕ ಸೇವೆಯಂತಹ ವಿವಿಧ ವಿಭಾಗಗಳು/ ಚಟುವಟಿಕೆಗಳ ಕ್ಷೇತ್ರಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಭಾರತ ರತ್ನ ಮತ್ತು ಪದ್ಮವಿಭೂಷಣ ನಂತರ ಭಾರತದಲ್ಲಿ ಪದ್ಮಭೂಷಣ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.

ವ್ಯಾಪಾರ ಕ್ಷೇತ್ರದ ಯಾರಿಗೆಲ್ಲಾ ಪದ್ಮ ಪ್ರಶಸ್ತಿ?
ಗೂಗಲ್ ಸಿಇಒ ಸುಂದರ್ ಪಿಚೈ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ, ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್, ಕೋವಾಕ್ಸಿನ್ ತಯಾರಕ ಸಂಸ್ಥೆ ಭಾರತ್ ಬಯೋಟೆಕ್‌ನ ಕೃಷ್ಣ ಎಲ್ಲ ಮತ್ತು ಸುಚಿತ್ರಾ ಎಲ್ಲ ಮತ್ತು ಕೋವಿಶೀಲ್ಡ್ ತಯಾರಕ ಸಂಸ್ಥೆ ಸೀರಮ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕ ಸೈರಸ್ ಪೂನವಾಲಾ ಅವರು 2022 ರ ವ್ಯಾಪಾರ ಕ್ಷೇತ್ರದಲ್ಲಿ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಸೇರಿದ್ದಾರೆ. ಜಗಜಿತ್ ಸಿಂಗ್ ದರ್ದಿ, ಮುಕ್ತಾಮಣಿ ದೇವಿ, ಜಪಾನ್‌ನ ರ್ಯುಕೋ ಹಿರಾ ಮತ್ತು ರೂಪಾ ಮತ್ತು ಕೋನ ಪ್ರಹ್ಲಾದ್ ರೈ ಅಗರ್ವಾಲಾ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಸೇರಿದ್ದಾರೆ. ಮುಖ್ಯವಾಗಿ ಕೊರೊನಾ ವೈರಸ್ ಸಾಂಕ್ರಾಮಿಕದ ಸಂದರ್ಭದಲ್ಲಿ ಹೆಚ್ಚು ಸುದ್ದಿಯಾದ ಭಾರತ್ ಬಯೋಟೆಕ್, ಸೀರಮ್ ಇನ್‌ಸ್ಟಿಟ್ಯೂಟ್ ಸಂಸ್ಥೆಯ ಮುಖ್ಯಸ್ಥರಿಗೆ ಪದ್ಮಶ್ರೀ ಪ್ರಶಸ್ತಿ ದೊರಕಿದೆ.
ಸತ್ಯ ನಾಡೆಲ್ಲಾ ಮತ್ತು ಸುಂದರ್ ಪಿಚೈಗೆ ಪ್ರಶಸ್ತಿ ಏಕೆ?
ಭಾರತೀಯ-ಅಮೆರಿಕನ್ ವ್ಯಾಪಾರ ಕಾರ್ಯನಿರ್ವಾಹಕರು ಆದ 54 ವರ್ಷದ ಸತ್ಯ ನಾಡೆಲ್ಲಾ ಹಾಗೂ 49 ವರ್ಷದ ಸುಂದರ್ ಪಿಚೈ "ವ್ಯವಹಾರ ಮತ್ತು ಉದ್ಯಮ" ವಿಭಾಗದಲ್ಲಿ ನೀಡಿದ ಕೊಡುಗೆಗಾಗಿ ಈ ಗೌರವ ಸಂದಿದೆ. ಇನ್ನು ಸೈರಸ್ ಪೂನವಾಲಾಗೂ ಪ್ರಶಸ್ತಿ ಸಂದಿದೆ. ಲಸಿಕೆ ತಯಾರಕ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸೈರಸ್ ಪೂನಾವಲ್ಲ ಮತ್ತು ಭಾರತ್ ಬಯೋಟೆಕ್‌ನ ಕೃಷ್ಣ ಎಲ್ಲ ಮತ್ತು ಸುಚಿತ್ರಾ ಎಲ್ಲ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ. ಈ ಎರಡು ಸಂಸ್ಥೆಗಳು (ಕೋವಿಶೀಲ್ಡ್ ಮತ್ತು ಕೋವಾಕ್ಸಿನ್) ಅಭಿವೃದ್ಧಿಪಡಿಸಿದ ಲಸಿಕೆಯು ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆ ಉತ್ತಮ ಸಹಕಾರವನ್ನು ನೀಡಿದೆ. ಕೋವಿಡ್ ವಿರುದ್ಧ ಹೋರಾಟದಲ್ಲಿ ಈ ಸಂಸ್ಥೆಗಳ ಲಸಿಕೆಗಳು ಜೊತೆಯಾಗಿದೆ.
ವಿಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಪದ್ಮ ಪ್ರಶಸ್ತಿಗಳು
ಸಂಜಯ ರಾಜಾರಾಂ (ಮರಣೋತ್ತರ) ರಿಗೆ ಪದ್ಮಭೂಷಣ, ಸುಬ್ಬಣ್ಣ ಅಯ್ಯಪ್ಪನ್‌ರಿಗೆ ಪದ್ಮಶ್ರೀ, ಸಂಘಮಿತ್ರ ಬಂದೋಪಾಧ್ಯಾಯರಿಗೆ ಪದ್ಮಶ್ರೀ, ಆದಿತ್ಯ ಪ್ರಸಾದ್ ದಶರಿಗೆ ಪದ್ಮಶ್ರೀ, ಮೋತಿ ಲಾಲ್ ಮದನ್‌ರಿಗೆ ಪದ್ಮಶ್ರೀ, ಅನಿಲ್ ಕುಮಾರ್ ರಾಜವಂಶಿರಿಗೆ ಪದ್ಮಶ್ರೀ, ಅಜಯ್ ಕುಮಾರ್ ಸೋಂಕರ್‌ರಿಗೆ ಪದ್ಮಶ್ರೀ, ಜಯಂತ್ ಕುಮಾರ್ ಮಗನ್ಲಾಲ್ ವ್ಯಾಸರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಣೆ ಮಡಲಾಗಿದೆ.


Click it and Unblock the Notifications