ಸದ್ಯದಲ್ಲೇ ಪೇಟಿಎಂನಿಂದ ಷೇರು ಮಾರುಕಟ್ಟೆ ಟ್ರೇಡಿಂಗ್ ಸೇವೆಗಳು ಆರಂಭ ಆಗಲಿವೆ. ಷೇರು ಬ್ರೋಕಿಂಗ್ ಸೇವೆ ಆರಂಭಿಸುವುದಕ್ಕೆ ಮಾರುಕಟ್ಟೆ ನಿಯಂತ್ರಕ ಸೆಕ್ಯೂರಿಟೀಸ್ ಅಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಅನುಮತಿ ಸಹ ಸಿಕ್ಕಿದೆ.
"ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಕಾಯುತ್ತಿದ್ದೀರಾ. ನಮ್ಮ ತಂಡ ಪೇಟಿಎಂ ಮನಿಯು ಉತ್ಪನ್ನಗಳನ್ನು, ಆರ್ಡರ್ ಅನುಷ್ಠಾನ, ಸಂಪರ್ಕ, ಮೂಲಸೌಕರ್ಯ, ಕಾರ್ಯಚಟುವಟಿಕೆ ಮತ್ತು ಇನ್ನಿತರ ಅಂಶಗಳನ್ನು ಇಂದು ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಪರೀಕ್ಷಿಸುತ್ತಿದ್ದೇವೆ. ನಮಗೆ ಗೊತ್ತಿದೆ ನೀವು ಕಾತರದಿಂದ ಕಾಯುತ್ತಿದ್ದೀರಿ. ಶೀಘ್ರ, ಅತಿ ಶೀಘ್ರದಲ್ಲಿ," ಎಂದು ಪೇಟಿಎಂ ಮನಿ ಟ್ವೀಟ್ ಮಾಡಿದೆ.
ಈಕ್ವಿಟಿ, ನಗದು ಸೆಗ್ಮಂಟ್, ಡೆರಿವೆಟಿವ್ ಮತ್ತು ಇಟಿಎಫ್ ನಲ್ಲಿ ಪೇಟಿಎಂ ಮನಿ ಮೂಲಕ ಟ್ರೇಡಿಂಗ್ ಮಾಡಬಹುದು. ಶುಲ್ಕ ಎಷ್ಟಿರುತ್ತದೆ ಎಂಬ ಮಾಹಿತಿ ಹೊರಬಂದಿಲ್ಲ. ಆದರೆ ಸದ್ಯಕ್ಕೆ ಜೆರೋದಾದಿಂದ ನಡೆಯುತ್ತಿರುವ ಇದಕ್ಕೆ ಬ್ರೋಕರೇಜ್ ನಲ್ಲಿ ರಿಯಾಯಿತಿ ಇರುತ್ತದೆ. ಬೆಂಗಳೂರು ಮೂಲದ ಈ ರಿಯಾಯಿತಿ ಬ್ರೋಕರೇಜ್ ಸಂಸ್ಥೆಯು ಸದ್ಯಕ್ಕೆ ಭಾರತದ ರೀಟೇಲ್ ಟ್ರೇಡಿಂಗ್ ಪ್ರಮಾಣದ ಹದಿನೈದು ಪರ್ಸೆಂಟ್ ನಷ್ಟು ಕೊಡುಗೆ ನೀಡುತ್ತಿದೆ.

ಅಂದ ಹಾಗೆ ಜೆರೋದಾಗೆ ಹದಿನೈದು ಲಕ್ಷ ಗ್ರಾಹಕರಿದ್ದು, ಭಾರತದ ಅತಿ ದೊಡ್ಡ ರೀಟೇಲ್ ಸ್ಟಾಕ್ ಬ್ರೋಕರ್ ಆಗಿದೆ. ಷೇರು ವ್ಯವಹಾರ ಹೊರತುಪಡಿಸಿ ಪೇಟಿಎಂನಿಂದ ಎನ್ ಪಿಎಸ್ (ನ್ಯಾಷನಲ್ ಪೆನ್ಷನ್ ಸಿಸ್ಟಮ್) ಸೇವೆ ಕೂಡ ದೊರೆಯಲಿದೆ. ಶೀಘ್ರದಲ್ಲೇ ಪೆನ್ಷನ್ ಫಂಡ್ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ (ಪಿಎಫ್ ಆರ್ ಡಿಎ) ಅನುಮತಿ ಪಡೆಯಲಿದೆ. ಎರಡು ವರ್ಷದ ಹಿಂದೆ ಸೆಪ್ಟೆಂಬರ್ ನಲ್ಲಿ ಮ್ಯೂಚುವಲ್ ಫಂಡ್ ಅಪ್ಲಿಕೇಷನ್ ಆರಂಭಿಸಿದೆ.
One97 ಕಮ್ಯುನಿಕೇಷನ್ಸ್ ಗೆ ಸೇರಿದ ಸಹೋದರ ಸಂಸ್ಥೆ ಇದಾಗಿದೆ. ಕಮ್ಯುನಿಕೇಷನ್ಸ್ ನಿಂದ ಪೇಟಿಎಂ ಕೂಡ ನಡೆಸುತ್ತಿದ್ದು, ಸದ್ಯಕ್ಕೆ ಅದು ನೀಡುತ್ತಿರುವ ಮ್ಯೂಚುವಲ್ ಫಂಡ್ ಸೇವೆಗೆ ಮೂವತ್ತು ಲಕ್ಷಕ್ಕೂ ಹೆಚ್ಚು ಮಂದಿ ಬಳಕೆದಾರರಿದ್ದಾರೆ. ಮುಂದಿನ ವರ್ಷಗಳಲ್ಲಿ ಇನ್ನೂರೈವತ್ತು ಕೋಟಿ ರುಪಾಯಿ ಹೂಡಿಕೆ ಮಾಡಲಿದ್ದು, ಪೂರ್ಣ ಪ್ರಮಾಣದಲ್ಲಿ ಸ್ಟಾಕ್ ಇನ್ವೆಸ್ಟ್ ಮೆಂಟ್ ಮತ್ತು ವೆಲ್ತ್ ಮ್ಯಾನೇಜ್ ಮೆಂಟ್ ಪ್ಲಾಟ್ ಫಾರ್ಮ್ ಆಗಲಿದೆ.
More From GoodReturns

Stock Market Crash: ಮಧ್ಯಪ್ರಾಚ್ಯದ ಸಂಘರ್ಷ, ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲ! ಸೆನ್ಸೆಕ್ಸ್ 2000 ಪಾಯಿಂಟ್ಸ್ ಕುಸಿತ

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

Liquor policy: ಕರ್ನಾಟಕ ಹೊಸ ಮದ್ಯ ನೀತಿ..ಯುನೈಟೆಡ್ ಬ್ರೂವರೀಸ್ ಮತ್ತು ಯುನೈಟೆಡ್ ಸ್ಪಿರಿಟ್ಸ್ ಷೇರುಗಳಲ್ಲಿ 5% ಏರಿಕೆ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications