ಸತತವಾಗಿ 17ನೇ ದಿನವಾದ ಜೂನ್ 23ರ ಮಂಗಳವಾರವೂ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ ಆಗಿದೆ. ಪೆಟ್ರೋಲ್ ಲೀಟರ್ ಗೆ 20 ಪೈಸೆ ಏರಿಕೆ ದಾಖಲಿಸಿದರೆ, ಡೀಸೆಲ್ 55 ಪೈಸೆ ಹೆಚ್ಚಳವಾಗುವ ಮೂಲಕ ಮತ್ತೊಮ್ಮೆ ಸಾರ್ವಕಾಲಿಕ ಗರಿಷ್ಠ ದರದ ದಾಖಲೆ ಬರೆದಿದೆ. ಒಟ್ಟಾರೆಯಾಗಿ ಈ ಹದಿನೇಳು ದಿನದಿನಲ್ಲಿ ಒಂದು ಲೀಟರ್ ಪೆಟ್ರೋಲ್ 8.5 ರುಪಾಯಿ ಹಾಗೂ ಡೀಸೆಲ್ 10.01 ರುಪಾಯಿ ಹೆಚ್ಚಳ ಆದಂತಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಹೆಚ್ಚಿನ ವ್ಯತ್ಯಾಸ ಏನಿಲ್ಲ. 36 ಪೈಸೆ ಮಾತ್ರ ಡೀಸೆಲ್ ಗಿಂತ ಪೆಟ್ರೋಲ್ ದರ ಹೆಚ್ಚಿದೆ. ಸಾಮಾನ್ಯವಾಗಿ ಇವೆರಡರ ಮಧ್ಯದ ವ್ಯತ್ಯಾಸ 5ರಿಂದ 8 ರುಪಾಯಿ ಇರುತ್ತದೆ. ಆದರೆ ಉಳಿದ ಪ್ರಮುಖ ನಗರಗಳಲ್ಲಿ ಎರಡರ ಮಧ್ಯೆ ವ್ಯತ್ಯಾಸ ದೊಡ್ಡ ಮಟ್ಟದಲ್ಲೇ ಇದೆ. ಉದಾಹರಣೆಗೆ ಮುಂಬೈ. ಅಲ್ಲಿ ಪೆಟ್ರೋಲ್ ಗಿಂತ ಡೀಸೆಲ್ 8.78 ರುಪಾಯಿ ಕಡಿಮೆ ಇದೆ.

ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಹೀಗಿದೆ:
ನವದೆಹಲಿ: ಪೆಟ್ರೋಲ್ 79.76- ಡೀಸೆಲ್ 79.40
ಗುರ್ ಗಾಂವ್: ಪೆಟ್ರೋಲ್ 77.99- ಡೀಸೆಲ್ 71.76
ಮುಂಬೈ: ಪೆಟ್ರೋಲ್ 86.54- ಡೀಸೆಲ್ 77.76
ಚೆನ್ನೈ: ಪೆಟ್ರೋಲ್ 83.04- ಡೀಸೆಲ್ 76.77
ಹೈದರಾಬಾದ್: ಪೆಟ್ರೋಲ್ 82.79- ಡೀಸೆಲ್ 77.60
ಬೆಂಗಳೂರು: ಪೆಟ್ರೋಲ್ 82.35- ಡೀಸೆಲ್ 75.51


Click it and Unblock the Notifications