ಭಾರತದಲ್ಲಿ ಬುಧವಾರ (ಜನವರಿ 27, 2021) ಪೆಟ್ರೋಲ್- ಡೀಸೆಲ್ ದರವು ಹೊಸ ಸಾರ್ವಕಾಲಿಕ ಎತ್ತರಕ್ಕೆ ಏರಿದೆ. ಪೆಟ್ರೋಲ್ ದರ ಲೀಟರ್ ಗೆ 25 ಪೈಸೆ ಏರಿಕೆ ಆಗಿ, ಬೆಂಗಳೂರಿನಲ್ಲಿ ರು. 89.21, ನವದೆಹಲಿಯಲ್ಲಿ ರು. 86.30, ಕೋಲ್ಕತ್ತಾದಲ್ಲಿ ರು. 87.69, ಮುಂಬೈನಲ್ಲಿ ರು. 92.86, ಚೆನ್ನೈನಲ್ಲಿ ರು. 88.82 ಇದೆ.
ಇನ್ನು ಡೀಸೆಲ್ ದರ ಕೂಡ ಲೀಟರ್ ಗೆ 25 ಪೈಸೆ ಹೆಚ್ಚಳವಾಗಿದ್ದು, ಬೆಂಗಳೂರಿನಲ್ಲಿ ರು. 81.10, ನವದೆಹಲಿಯಲ್ಲಿ ರು. 76.48, ಕೋಲ್ಕತ್ತಾದಲ್ಲಿ ರು. 80.08, ಮುಂಬೈನಲ್ಲಿ ರು. 83.30, ಚೆನ್ನೈನಲ್ಲಿ ರು. 81.71 ಇದೆ. ಅಂತರರಾಷ್ಟ್ರೀಯ ಕಚ್ಚಾ ತೈಲ ದರ, ವಿದೇಶಿ ವಿನಿಮಯ ದರ, ಕೇಂದ್ರ ಸರ್ಕಾರದ ಸುಂಕ ಮತ್ತು ಸ್ಥಳೀಯ ತೆರಿಗೆಗಳು ಅಥವಾ ವ್ಯಾಟ್ ಆಧಾರದ ಮೇಲೆ ಭಾರತದಲ್ಲಿ ನಿತ್ಯವೂ ತೈಲ ದರದ ಪರಿಷ್ಕರಣೆ ಆಗುತ್ತದೆ.
ಬುಧವಾರದಂದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆ ಕಂಡಿತು. ಜಾಗತಿಕ ಬೆಂಚ್ ಮಾರ್ಕ್, ಬ್ರೆಂಟ್ ಕಚ್ಚಾ ಫ್ಯೂಚರ್ಸ್ 11 ಪರ್ಸೆಂಟ್ ಅಥವಾ 0.2% ಏರಿಕೆ ಕಂಡು, ಬ್ಯಾರೆಲ್ ಗೆ $ 56.02 ಇತ್ತು. ಸರ್ಕಾರಿ ಸ್ವಾಮ್ಯದ ತೈಲ ಮಾರ್ಕೆಟಿಂಗ್ ಕಂಪೆನಿಗಳು ಭಾರತದಲ್ಲಿ ಪೆಟ್ರೋಲ್ ದರವನ್ನು ಲೀಟರ್ ಗೆ ರು. 2.59 ಹಾಗೂ ಡೀಸೆಲ್ ರು. 2.61 ಏರಿಕೆ ಮಾಡಿವೆ.

ಈ ಬೆಲೆ ಏರಿಕೆ ಆದ ಮೇಲೆ ದರವು 2018ರ ನಂತರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತು. ಆ ಸಮಯದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಬ್ಯಾರೆಲ್ ಗೆ $ 80 ಇತ್ತು. ತೈಲದ ಮೇಲಿನ ತೆರಿಗೆ ಇಳಿಸುವಂತೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಚಿವಾಲಯದಿಂದ ಹಣಕಾಸು ಸಚಿವಾಲಯಕ್ಕೆ ಮನವಿ ಮಾಡಲಾಗಿದೆ ಎಂಬ ಸುದ್ದಿ ಇದೆ. ಕೊರೊನಾ ಲಾಕ್ ಡೌನ್ ವೇಳೆಯಲ್ಲಿ ತೆರಿಗೆಯನ್ನು ಏರಿಸಲಾಗಿತ್ತು.
ಮಾಧ್ಯಮಗಳ ವರದಿ ಪ್ರಕಾರ, ತೆರಿಗೆ ಕಡಿತದ ಕುರಿತಂತೆ ಇನ್ನೂ ನಿರ್ಧಾರ ಮಾಡಬೇಕಿದೆ. ಕೊರೊನಾ ಲಾಕ್ ಡೌನ್ ವೇಳೆ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕ್ರಮವಾಗಿ 13 ಹಾಗೂ 16 ರುಪಾಯಿ ವಿಶೇಷ ಅಬಕಾರಿ ಸುಂಕ ಹಾಗೂ ರಸ್ತೆ ಮತ್ತು ಮೂಲಸೌಕರ್ಯ ಸೆಸ್ ಹಾಕಿತ್ತು.


Click it and Unblock the Notifications