ಪೆಟ್ರೋಲ್- ಡೀಸೆಲ್ ದರ ಶುಕ್ರವಾರ (ಜೂನ್ 26, 2020) ಸತತವಾಗಿ ಇಪ್ಪತ್ತನೇ ದಿನ ಸಹ ಏರಿಕೆಯಾಗಿದೆ. ಡೀಸೆಲ್ ಲೀಟರ್ ಗೆ 17 ಪೈಸೆ ಹಾಗೂ ಪೆಟ್ರೋಲ್ 21 ಪೈಸೆ ಹೆಚ್ಚಳವಾಗಿದೆ. ಈ ಇಪ್ಪತ್ತು ದಿನಗಳ ಅವಧಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 8.87 ರುಪಾಯಿ ಹಾಗೂ ಡೀಸೆಲ್ 10.80 ರುಪಾಯಿ ಏರಿಕೆ ಆಗಿದೆ.
ದೆಹಲಿಯಲ್ಲಿ ಪೆಟ್ರೋಲ್ ಗಿಂತ ಡೀಸೆಲ್ ಬೆಲೆ ಹೆಚ್ಚಿದೆ. ಈಗ ಎರಡರ ಬೆಲೆಯೂ 80 ರುಪಾಯಿಯನ್ನು ಮೀರಿದೆ. ಹತ್ತೊಂಬತ್ತು ತಿಂಗಳ ಗರಿಷ್ಠ ಮಟ್ಟದಲ್ಲಿ ಪೆಟ್ರೋಲ್ ವಹಿವಾಟು ನಡೆಸುತ್ತಿದ್ದರೆ, ಡೀಸೆಲ್ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್- ಡೀಸೆಲ್ ದರ ಹೀಗಿದೆ:
ನವದೆಹಲಿ: ಪೆಟ್ರೋಲ್ 80.13- ಡೀಸೆಲ್ 80.19
ಗುರ್ ಗಾಂವ್: ಪೆಟ್ರೋಲ್ 78.355 ಡೀಸೆಲ್ 72.47
ಮುಂಬೈ: ಪೆಟ್ರೋಲ್ 86.91- ಡೀಸೆಲ್ 78.51
ಚೆನ್ನೈ: ಪೆಟ್ರೋಲ್ 83.37- ಡೀಸೆಲ್ 77.44
ಹೈದರಾಬಾದ್: ಪೆಟ್ರೋಲ್ 83.18- ಡೀಸೆಲ್ 78.36
ಬೆಂಗಳೂರು: ಪೆಟ್ರೋಲ್ 82.74 - ಡೀಸೆಲ್ 76.25

VAT ಆಧಾರದಲ್ಲಿ ಒಂದು ರಾಜ್ಯಕ್ಕಿಂತ ಮತ್ತೊಂದು ರಾಜ್ಯಕ್ಕೆ ದರದಲ್ಲಿ ವ್ಯತ್ಯಾಸ ಆಗುತ್ತದೆ. ತಮ್ಮ ಲಾಭದ ಪ್ರಮಾಣವನ್ನು ನೋಡಿಕೊಂಡು ಸರ್ಕಾರಿ ಸ್ವಾಮ್ಯದ ತೈಲ ಮಾರ್ಕೆಟಿಂಗ್ ಕಂಪೆನಿಗಳು ತೈಲ ಬೆಲೆ ಹೆಚ್ಚಳ ಮಾಡುತ್ತಿವೆ. ಕಳೆದ ತಿಂಗಳು ಅಬಕಾರಿ ಸುಂಕ ಹೆಚ್ಚಿಸಿದ್ದರಿಂದ ದರ ಏರಿಕೆ ಆಗುತ್ತಿದೆ ಎಂದು ಆರೋಪಿಸಿ ದೇಶದ ವಿವಿಧೆಡೆ ಪ್ರತಿಭಟನೆ ನಡೆಯುತ್ತಿದೆ.


Click it and Unblock the Notifications