For Quick Alerts
ALLOW NOTIFICATIONS  
For Daily Alerts

ಸತತ ನಾಲ್ಕನೇ ದಿನ ತೈಲ ಬೆಲೆ ಇಳಿಕೆ; ಬಜೆಟ್ ಮರುದಿನ ಎಷ್ಟು ಇಳಿಯಿತು?

|

ಕೇಂದ್ರ ಬಜೆಟ್ ಮಂಡನೆಯಾದ ಮರು ದಿನವಾದ ಭಾನುವಾರ ಪೆಟ್ರೋಲ್- ಡೀಸೆಲ್ ಬೆಲೆಯಲ್ಲಿ ಇನ್ನಷ್ಟು ಕಡಿತವಾಗಿದೆ. ಅಂತರರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಚೀನಾದ ಕೊರೊನಾ ವೈರಾಣು ಆತಂಕ ಸೃಷ್ಟಿಸಿದ್ದು, ಅದರ ಪರಿಣಾಮ ತೈಲಕ್ಕೆ ಬೇಡಿಕೆ ತಗ್ಗಿದೆ. ಪ್ರಮುಖ ನಗರಗಳಲ್ಲಿ ಭಾನುವಾರದಂದು ಪೆಟ್ರೋಲ್ ಬೆಲೆ ಲೀಟರ್ ಗೆ ಒಂಬತ್ತು ಪೈಸೆ, ಡೀಸೆಲ್ ಎಂಟು ಪೈಸೆ ಲೀಟರ್ ಗೆ ಇಳಿಕೆಯಾಗಿದೆ.

ಪ್ರಮುಖ ನಗರಗಳಲ್ಲಿ ಭಾನುವಾರದ ಪೆಟ್ರೋಲ್ ದರ
ದೆಹಲಿ 73.10

ಮುಂಬೈ 78.75

ಕೋಲ್ಕತ್ತಾ 75.77

ಚೆನ್ನೈ 72.95

ಪ್ರಮುಖ ನಗರಗಳಲ್ಲಿ ಭಾನುವಾರದ ಡೀಸೆಲ್ ದರ
ದೆಹಲಿ 66.14

ಮುಂಬೈ 69.36

ಕೋಲ್ಕತ್ತಾ 68.54

ಚೆನ್ನೈ 69.89

ಸತತ ನಾಲ್ಕನೇ ದಿನ ತೈಲ ಬೆಲೆ ಇಳಿಕೆ; ಬಜೆಟ್ ಮರುದಿನ ಎಷ್ಟು ಇಳಿಯಿತು?

ಸತತವಾಗಿ ನಾಲ್ಕನೇ ದಿನ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್- ಡೀಸೆಲ್ ದರದಲ್ಲಿ ಇಳಿಕೆಯಾಗಿದೆ. ಇಂಧನ ರೀಟೆಲ್ ದರವು ಅಂತರರಾಷ್ಟ್ರೀಯ ಕಚ್ಚಾ ತೈಲ ದರ, ಅಮೆರಿಕ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಇತ್ಯಾದಿಗಳ ಮೇಲೆ ಅವಲಂಬಿಸಿರುತ್ತದೆ. ತೈಲ ಮಾರ್ಕೆಟಿಂಗ್ ಕಂಪೆನಿಗಳು ನಿತ್ಯವೂ ಪೆಟ್ರೋಲ್- ಡೀಸೆಲ್ ದರಗಳನ್ನು ಪರಿಷ್ಕರಣೆ ಮಾಡುತ್ತವೆ. ನಿತ್ಯ ಬೆಳಗ್ಗೆ ಆರು ಗಂಟೆಗೆ ದರ ಜಾರಿಗೆ ಬರುತ್ತದೆ.

English summary

Petrol, Diesel Price Fall 4th Consecutive Day

On Sunday, February 2nd Petrol- Diesel price fall for consecutive 4th day. Here is the complete details.
Story first published: Sunday, February 2, 2020, 15:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X