ಪೆಟ್ರೋಲ್ ಹಾಗೂ ಡೀಸೆಲ್ ಬೇಡಿಕೆ ಮತ್ತೆ ಕುದುರುತ್ತಿದ್ದಂತೆ ದರದಲ್ಲಿ ಏರಿಕೆ ಮುಂದುವರಿದಿದೆ. ಸತತ ಹನ್ನೊಂದನೇ ದಿನ, ಬುಧವಾರ ಕೂಡ ಬೆಲೆಯಲ್ಲಿ ಹೆಚ್ಚಳವಾಗಿದೆ. ಪೆಟ್ರೋಲ್ ಲೀಟರ್ ಗೆ 55 ಪೈಸೆ, ಡೀಸೆಲ್ 60 ಪೈಸೆ ಏರಿಕೆ ಆಗಿದೆ. ಕಳೆದ ಹನ್ನೊಂದು ದಿನದಲ್ಲಿ ಒಂದು ಲೀಟರ್ ಪೆಟ್ರೋಲ್ ದರ ಲೀಟರ್ ಗೆ 6 ರುಪಾಯಿ ಹಾಗೂ ಡೀಸೆಲ್ 6.4 ರುಪಾಯಿ ಏರಿಕೆಯಾಗಿದೆ.
ಸದ್ಯಕ್ಕೆ ಭಾರತದಲ್ಲಿ ಪೆಟ್ರೋಲ್- ಡೀಸೆಲ್ ದರವು 19 ತಿಂಗಳ ಗರಿಷ್ಠ ಮಟ್ಟದಲ್ಲಿದೆ. ಆದರೆ ಬ್ರೆಂಟ್ ಕಚ್ಚಾ ತೈಲ ಬ್ಯಾರಲ್ ಗೆ 40 ಅಮೆರಿಕನ್ ಡಾಲರ್ ಸಮೀಪ ಇದ್ದು, ಹಲವು ವರ್ಷಗಳ ಕನಿಷ್ಠ ಮಟ್ಟದ ಬೆಲೆ ಇದಾಗಿದೆ. ಅಂದ ಹಾಗೆ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ ಹಾಗೂ ಡೀಸೆಲ್ ದರ ಹೀಗಿದೆ.

ನವದೆಹಲಿ: ಪೆಟ್ರೋಲ್ 77.28- ಡೀಸೆಲ್ 75.79
ಗುರ್ ಗಾಂವ್: ಪೆಟ್ರೋಲ್ 75.83- ಡೀಸೆಲ್ 68.51
ಮುಂಬೈ: ಪೆಟ್ರೋಲ್ 84.15- ಡೀಸೆಲ್ 74.32
ಚೆನ್ನೈ: ಪೆಟ್ರೋಲ್ 80.86- ಡೀಸೆಲ್ 73.69
ಹೈದರಾಬಾದ್: ಪೆಟ್ರೋಲ್ 80.22- ಡೀಸೆಲ್ 74.07
ಬೆಂಗಳೂರು: ಪೆಟ್ರೋಲ್ 79.79- ಡೀಸೆಲ್ 72.07
ಈ ಮಧ್ಯೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಿ ಮೋದಿಗೆ ಪತ್ರ ಬರೆದು, ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.


Click it and Unblock the Notifications