ಸತತವಾಗಿ ಎಂಟನೇ ದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆ ಆಗಿದೆ. ಭಾನುವಾರದಂದು (ಜೂನ್ 14, 2020) ಪೆಟ್ರೋಲ್ ಬೆಲೆ 62 ಪೈಸೆ, ಡೀಸೆಲ್ 64 ಪೈಸೆ ಏರಿಕೆ ಆಗಿದೆ. ಕಳೆದ ಎಂಟು ದಿನದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 4.52 ರುಪಾಯಿ, ಡೀಸೆಲ್ 4.64 ರುಪಾಯಿ ಹೆಚ್ಚಳ ಆಗಿದೆ.
ತೈಲ ಮಾರ್ಕೆಟಿಂಗ್ ಕಂಪೆನಿ ವರದಿ ಪ್ರಕಾರ, ಏಪ್ರಿಲ್ ತಿಂಗಳ ಕನಿಷ್ಠ ಮಟ್ಟದಿಂದ ಕಚ್ಚಾ ತೈಲ ಬೆಲೆ ದುಪ್ಪಟ್ಟು ಆಗಿದೆ. ಆದ್ದರಿಂದ ಇನ್ನೂ ಕೆಲ ದಿನಗಳ ಕಾಲ ಬೆಲೆ ಏರಿಕೆ ಆಗಬಹುದು. ಮಾರ್ಚ್ 16ನೇ ತಾರೀಕಿನಿಂದ 80 ದಿನಕ್ಕೂ ಹೆಚ್ಚು ಕಾಲ ನಿತ್ಯ ಪರಿಷ್ಕರಣೆ ಆಗುತ್ತಿರಲಿಲ್ಲ. ಜತೆಗೆ ಲಾಕ್ ಡೌನ್ ಅವಧಿಯಲ್ಲಿ ಸರ್ಕಾರದಿಂದ ದೊಡ್ಡ ಮಟ್ಟದಲ್ಲಿ ಅಬಕಾರಿ ಸುಂಕವನ್ನು ಏರಿಸಲಾಯಿತು. ಇದರಿಂದ ಬೇಡಿಕೆ ಕಡಿಮೆ ಆಗಿ, ತೈಲ ಮಾರ್ಕೆಟಿಂಗ್ ಕಂಪೆನಿಗಳು ನಷ್ಟ ಅನುಭವಿಸಿವೆ.

ಪ್ರಮುಖ ನಗರಗಳಲ್ಲಿನ ಪೆಟ್ರೋಲ್- ಡೀಸೆಲ್ ದರಗಳು
ನವದೆಹಲಿ: ಪೆಟ್ರೋಲ್ 75.78- ಡೀಸೆಲ್ 74.03
ಗುರ್ ಗಾಂವ್: ಪೆಟ್ರೋಲ್ 74.68- ಡೀಸೆಲ್ 66.92
ಮುಂಬೈ: ಪೆಟ್ರೋಲ್ 82.70- ಡೀಸೆಲ್ 72.64
ಚೆನ್ನೈ: ಪೆಟ್ರೋಲ್ 79.53- ಡೀಸೆಲ್ 72.18
ಹೈದರಾಬಾದ್: ಪೆಟ್ರೋಲ್ 78.67- ಡೀಸೆಲ್ 72.36
ಬೆಂಗಳೂರು: ಪೆಟ್ರೋಲ್ 78.23- ಡೀಸೆಲ್ 70.39
2014ರಿಂದ ಈಚೆಗೆ ಪೆಟ್ರೋಲ್ ಅಬಕಾರಿ ಸುಂಕದಲ್ಲಿ 258 ಪರ್ಸೆಂಟ್ ಏರಿಕೆಯಾಗಿದ್ದರೆ, ಡೀಸೆಲ್ ಅಬಕಾರಿ ಸುಂಕದಲ್ಲಿ 819 ಪರ್ಸೆಂಟ್ ಹೆಚ್ಚಳವಾಗಿದೆ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Click it and Unblock the Notifications