ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಸತತ ನಾಲ್ಕು ದಿನಗಳು ಪೆಟ್ರೋಲ್, ಡೀಸೆಲ್ ದರವನ್ನು ಏರಿಕೆ ಮಾಡಿದ್ದು, ಮತ್ತೊಂದು ಸಾರ್ವಕಾಲಿಕ ದಾಖಲೆ ಆಗಿದೆ. ವಾಹನ ಸವಾರರಿಗೆ ದಿನದಿಂದ ದಿನಕ್ಕೆ ಬೆಲೆ ಏರಿಕೆ ಬಿಸಿ ತಟ್ಟುತ್ತಿದ್ದು, ಜೇಬಿನ ಭಾರ ಹೆಚ್ಚಾಗಿದೆ.
ಶುಕ್ರವಾರ (ಅ. 08) ನವದೆಹಲಿಯಲ್ಲಿ ಪೆಟ್ರೋಲ್ ದರವು ಲೀಟರ್‌ಗೆ 30 ಪೈಸೆ ಏರಿಕೆಗೊಂಡು 103.54 ರೂಪಾಯಿಗೆ ತಲುಪಿದೆ. ಡೀಸೆಲ್ ದರವು ಲೀಟರ್‌ಗೆ 35 ಪೈಸೆ ಹೆಚ್ಚಾಗಿ 92.12 ರೂಪಾಯಿಗೆ ಮುಟ್ಟಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಪ್ರತಿದಿನ ಸಂಜೆ 6 ಗಂಟೆಯಿಂದ ಪರಿಷ್ಕರಿಸುತ್ತವೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಅ. 08: 107.14 (31 ಪೈಸೆ ಏರಿಕೆ)
ಅ. 07: 106.83
ಅ. 06: 106.52
ಅ. 05: 106.21
ಡೀಸೆಲ್ (ಪ್ರತಿ ಲೀಟರ್)
ಅ. 08: 97.77 (37 ಪೈಸೆ ಏರಿಕೆ)
ಅ. 07: 97.40
ಅ. 06: 97.03
ಅ. 05: 96.66
ನವದೆಹಲಿಯಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಅ. 08: 103.54 (30 ಪೈಸೆ ಏರಿಕೆ)
ಅ. 07: 103.24
ಅ. 06: 102.94
ಅ. 05: 102.64
ಡೀಸೆಲ್ (ಪ್ರತಿ ಲೀಟರ್)
ಅ. 08: 92.12 (35 ಪೈಸೆ ಏರಿಕೆ)
ಅ. 07: 91.77
ಅ. 06: 91.42
ಅ. 05: 91.07
ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಅ. 08: 109.54 (29 ಪೈಸೆ ಏರಿಕೆ)
ಅ. 07: 109.25
ಅ. 06: 108.96
ಅ. 05: 108.67
ಡೀಸೆಲ್ (ಪ್ರತಿ ಲೀಟರ್)
ಅ. 08: 99.92 (37 ಪೈಸೆ ಏರಿಕೆ)
ಅ. 07: 99.55
ಅ. 06: 99.17
ಅ. 05: 98.80
ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಅ. 08: 101.01 (15 ಪೈಸೆ ಏರಿಕೆ)
ಅ. 07: 100.86
ಅ. 06: 100.49
ಅ. 05: 100.23
ಡೀಸೆಲ್ (ಪ್ರತಿ ಲೀಟರ್)
ಅ. 08: 96.60 (23 ಪೈಸೆ ಏರಿಕೆ)
ಅ. 07: 96.37
ಅ. 06: 95.93
ಅ. 05: 95.59
ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಅ. 08: 107.71 (31 ಪೈಸೆ ಏರಿಕೆ)
ಅ. 07: 107.40
ಅ. 06: 107.09
ಅ. 05: 106.77
ಡೀಸೆಲ್ (ಪ್ರತಿ ಲೀಟರ್)
ಅ. 08: 100.51 (38 ಪೈಸೆ ಏರಿಕೆ)
ಅ. 07: 100.13
ಅ. 06: 99.75
ಅ. 05: 99.37
ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.


Click it and Unblock the Notifications