For Quick Alerts
ALLOW NOTIFICATIONS  
For Daily Alerts

ಸತತ 2ನೇ ದಿನ ಪೆಟ್ರೋಲ್, ಡೀಸೆಲ್ ದರ ಬದಲಾಗಿಲ್ಲ: ವಾಹನ ಸವಾರರಿಗೆ ತುಸು ನೆಮ್ಮದಿ..

|

ಗಗನಕ್ಕೇರುತ್ತಿದ್ದ ಪೆಟ್ರೋಲ್, ಡೀಸೆಲ್ ದರಗಳು ಸತತ ಎರಡನೇ ದಿನ ಬದಲಾಗಿಲ್ಲ. ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಸತತ ಏಳು ದಿನಗಳ ಕಾಲ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದ ಬಳಿಕ ಮಂಗಳವಾರ ಮತ್ತು ಬುಧವಾರ ತೈಲ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೂ ಈಗಾಗಲೇ ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿರುವ ತೈಲದರವು ವಾಹನ ಸವಾರರಿಗೆ ಭಾರೀ ಹೊರೆಯಾಗಿದೆ.

ಬುಧವಾರ (ಅ. 13) ನವದೆಹಲಿಯಲ್ಲಿ ಪೆಟ್ರೋಲ್ ದರವು ಲೀಟರ್‌ಗೆ 104.44 ರೂಪಾಯಿಗೆ ತಲುಪಿದೆ. ಡೀಸೆಲ್ ದರವು ಲೀಟರ್‌ಗೆ 93.17 ರೂಪಾಯಿಗೆ ಮುಟ್ಟಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಪ್ರತಿದಿನ ಸಂಜೆ 6 ಗಂಟೆಯಿಂದ ಪರಿಷ್ಕರಿಸುತ್ತವೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಅ. 13: 108.08
ಅ. 12: 108.08
ಅ. 11: 108.08
ಅ. 10: 107.46


ಡೀಸೆಲ್ (ಪ್ರತಿ ಲೀಟರ್)
ಅ. 13: 98.89
ಅ. 12: 98.89
ಅ. 11: 98.89
ಅ. 10: 98.15

ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್‌ನ ಅಕ್ಟೋಬರ್ 12ರ ಮಾರುಕಟ್ಟೆ ಬೆಲೆ ಇಲ್ಲಿದೆಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್‌ನ ಅಕ್ಟೋಬರ್ 12ರ ಮಾರುಕಟ್ಟೆ ಬೆಲೆ ಇಲ್ಲಿದೆ

ನವದೆಹಲಿಯಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ನವದೆಹಲಿಯಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಅ. 13: 104.44
ಅ. 12: 104.44
ಅ. 11: 104.44
ಅ. 10: 104.14


ಡೀಸೆಲ್ (ಪ್ರತಿ ಲೀಟರ್)
ಅ. 13: 93.17
ಅ. 12: 93.17
ಅ. 11: 93.17
ಅ. 10: 92.82

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಅ. 13: 110.41
ಅ. 12: 110.41
ಅ. 11: 110.41
ಅ. 10: 110.12


ಡೀಸೆಲ್ (ಪ್ರತಿ ಲೀಟರ್)
ಅ. 13: 101.03
ಅ. 12: 101.03
ಅ. 11: 101.03
ಅ. 10: 100.66

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಅ. 13: 101.89
ಅ. 12: 101.89
ಅ. 11: 101.89
ಅ. 10: 101.53


ಡೀಸೆಲ್ (ಪ್ರತಿ ಲೀಟರ್)
ಅ. 13: 97.69
ಅ. 12: 97.69
ಅ. 11: 97.69
ಅ. 10: 97.26

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಅ. 13: 108.64
ಅ. 12: 108.64
ಅ. 11: 108.64
ಅ. 10: 108.33


ಡೀಸೆಲ್ (ಪ್ರತಿ ಲೀಟರ್)
ಅ. 13: 101.66
ಅ. 12: 101.66
ಅ. 11: 101.66
ಅ. 10: 101.27

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

English summary

Petrol Diesel Prices On 13 October 2021: Check Rates In Your City

Domestic petrol and Diesel Price Unchanged on Wednesday in Many cities. Latest Rates Here
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X